ಸುದ್ದಿಮೂಲ ವಾರ್ತೆ ಬೆಂಗಳೂರು, ಜ.06:
ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆ ಮಾಡುವುದು ಜಿಲ್ಲಾಡಳಿತಕ್ಕೆೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೋಗಿಲು ಲೇಔಟ್ನ ಮನೆ ತೆರವು ವೇಳೆ ನಿರಾಶಿತ್ರಗೊಂಡಿದ್ದೇವೆ ಎಂದು 245 ಕುಟುಂಬಗಳು ಅರ್ಜಿ ಸಲ್ಲಿವೆ. ಜಿಲ್ಲಾಡಳಿತ ಮನೆಗಳನ್ನು ಮನೆ ತೆರವುಗೊಳಿಸಿದಾಗ ಅಲ್ಲಿ 167 ಕುಟುಂಬಗಳು ಇದ್ದವು. ಈಗ ಹೆಚ್ಚುವರಿ 76 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರು ಒಟ್ಟಿಿಗೆ ಸಭೆ ನಡೆಸಿ ಶೀಘ್ರದಲ್ಲೇ ಕೋಗಿಲು ನಿರಾಶ್ರಿತರಿಗೆ ಮನೆ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ ಮನೆ ಕಳೆದುಕೊಂಡ ನಿರಾಶ್ರಿತರು ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸುವಂತೆ ಹೇಳಿದ್ದರು. ಈಗ ಅರ್ಜಿ ಸಲ್ಲಿಕೆಯಾಗಿದ್ದು ತಲೆ ನೋವು ಆರಂಭವಾಗಿದೆ.
ಸರ್ಕಾರ ಕೋಗಿಲು ನಿರಾಶ್ರಿತರಿಗೆ ಗುರುವಾರ ಮನೆ ಹಂಚಿಕೆ ಮಾಡುವುದಾಗಿ ಹೇಳಿತ್ತು. ಈಗ ಹೆಚ್ಚಿಿನ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಮನೆ ಹಂಚಿಕೆ ಮುಂದೂಡಿಕೆಯಾಗಬಹುದು ಎಂದು ತಿಳಿದು ಬಂದಿದೆ.
ಎಲ್ಲರೂ ಕನ್ನಡಿಗರು: ರಾಜೀವ್ ಗಾಂಧಿ ವಸತಿ ನಿಗಮಕ್ಕೆೆ ಅರ್ಜಿ ಸಲ್ಲಿಸಿದ 245 ಕುಟುಂಬದವರು ಕನ್ನಡಿಗರು. ಅವರು ಹಲವು ವರ್ಷಗಳಿಂದ ಕೋಗಿಲ್ ಲೇಔಟ್ನ ಶೆಡ್ಗಳಲ್ಲಿ ವಾಸವಾಗಿದ್ದರು. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಮನೆ ಯಜಮಾನರ ಹೆಸರು ಹಾಗೂ ಮೊಬೈಲ್ ಸಂಖ್ಯೆೆಗಳನ್ನು ನೀಡಿದ್ದಾರೆ. ಇದನ್ನು ಪರಿಶೀಲಿಸಿದ ನಿಗಮದ ಅಧಿಕಾರಿಗಳು ಎಲ್ಲ ಆಧಾರ್ ಕಾರ್ಡ್ ಹಾಗೂ ಮಾಹಿತಿ ನೈಜ್ಯವಾಗಿದ್ದು ಮನೆಕೊಡುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಬಾಕ್ಸ್
ನಾವು ಕನ್ನಡಿಗರು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿಿದ್ದಾರೆ
ನಾವು ಅಪ್ಪಟ ಕನ್ನಡಿಗರು. ನಾವು ಕೋಗಿಲು ಬಡಾವಣೆಯಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿಿದ್ದೇವೆ. ಆದರೆ ಬಿಜೆಪಿ ನಾಯಕರು ನಮ್ಮನ್ನು ಬಾಂಗ್ಲಾಾ ದೇಶದಿಂದ ಅಕ್ರಮವಾಗಿ ವಲಸೆ ಬಂದವರು ಎಂದು ಸುಳ್ಳು ಹೇಳುತ್ತಿಿದ್ದಾರೆ. ನಮ್ಮ ಬಳಿ ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳಿವೆ ಎಂದು ನಿರಾಶ್ರಿತರಾದ ಲಕ್ಷ್ಮೀಬಾಯಿ ಹೇಳಿದರು.
ಕೋಟ್
ನಾವು ಬೆಂಗಳೂರಿನಲ್ಲೇ ಹುಟ್ಟಿಿದವರು. ಇದಕ್ಕೆೆ ನಮ್ಮ ಬಳಿ ದಾಖಲೆ ಇದೆ. ನಾವು ಬಾಂಗ್ಲಾಾ ವಲಸಿಗರಲ್ಲ.
ಆರೀಪ್ ಪಾಷಾ. ಕೋಗಿಲು ನಿರಾಶ್ರಿತ.

