ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ಕ್ವಾಾಂಟಮ್ ಸಾಧನಗಳು ಕಂಪ್ಯೂೂಟಿಂಗ್ನ ಮಹತ್ವದ ಭವಿಷ್ಯವನ್ನು ಪ್ರತಿನಿಧಿಸುತ್ತವೆ. ಕ್ವಾಾಂಟಮ್ ಮೆಕಾನಿಕ್ಸ್ನ ತತ್ವಗಳ ಮೇಲೆ ಕಾರ್ಯ ನಿರ್ವಹಿಸುವುದಲ್ಲದೆ ಶಾಸೀಯ ಕಂಪ್ಯೂೂಟರ್ಗಳ ವ್ಯಾಾಪ್ತಿಿಯನ್ನು ಮೀರಿದ ಸಮಸ್ಯೆೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀೀಯ ವಿಶ್ವವಿದ್ಯಾಾಲಯದ ಭೌತಶಾಸ ವಿಭಾಗದ ಸಹ ಪ್ರಾಾಧ್ಯಾಾಪಕರಾದ ಡಾ.ರಾಜೀವ್ ಶೇಷ ಜೋಷಿ ಎಂದು ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಭೌತಶಾಸ ವಿಭಾಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕ್ವಾಾಂಟಮ್ ಡಿವೈಸಸ್-್ಯೂಚರ್ ಇನ್ ದ ಪ್ರಸೆಂಟ್ ಕುರಿತು ವಿದ್ವತ್ ಪೂರ್ಣವಾಗಿ ವಿಶೇಷ ಉಪನ್ಯಾಾಸ ಪ್ರಸ್ತುತಪಡಿಸಿದ ಅವರು, ಕ್ವಾಾಂಟಮ್ ಕಂಪ್ಯೂೂಟರ್ ಗಳು ಪ್ರಸ್ತುತ ಅಸ್ತಿಿತ್ವದಲ್ಲಿವೆ ಆದರೆ ಅಭಿವೃದ್ಧಿಿ ಆರಂಭಿಕ ಹಂತಗಳಲ್ಲಿದೆ. ಹಾರ್ಡ್ವೇರ್ ಅಲ್ಗಾಾರಿದಮ್ಗಳು ಮತ್ತು ದೋಷ ತಿದ್ದುಪಡಿಯ ಮೇಲೆ ಕೇಂದ್ರೀಕರಿಸುತ್ತವೆ. ವಸ್ತು ವಿಜ್ಞಾಾನಕ್ಕಾಾಗಿ ಸಂಕೀರ್ಣ ಅಣುಗಳನ್ನು ಅನುಕರಿಸುವುದು ಸುರಕ್ಷಿತ ಸಂವಹನ ಜಾಲಗಳನ್ನು ಅಭಿವೃದ್ಧಿಿ ಪಡಿಸುವ ಲಕ್ಷಣಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೌತಶಾಸ ವಿಭಾಗದ ಮುಖ್ಯಸ್ಥರಾದ ಪ್ರೊೊ.ಪಿ.ಭಾಸ್ಕರ್ ಮಾತನಾಡಿ, ಕ್ವಾಾಂಟಮ್ ಸಾಧನೆಗಳ ಅಭಿವೃದ್ಧಿಿಗೆ ಸಂಬಂಧಿಸಿದ 2025 ರ ಭೌತಶಾಸದ ನೋಬಲ್ ಪ್ರಶಸ್ತಿಿಯನ್ನು ಜಾನ್ ಕ್ಲಾಾರ್ಕ್, ಮೈಕಲ್ ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ ನೀಡಲಾಗಿದೆ. ಇದು ಕ್ವಾಾಂಟಮ್ ಮೆಕಾನಿಕ್ಸ್ ಕ್ಷೇತ್ರದ ಸಾಧನೆಗಳಿಗಾಗಿ ನೀಡಿದ್ದು ಈ ಕ್ಷೇತ್ರದ ಮಹತ್ವವನ್ನು ವಿದ್ಯಾಾರ್ಥಿಗಳಿಗೆ ತಿಳಿಸಲು ವಿಶೇಷ ಉಪನ್ಯಾಾಸಗಳಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಹಕಾರ ನೀಡುತ್ತಿಿರುವ ನಮ್ಮ ವಿಶ್ವವಿದ್ಯಾಾನಿಲಯದ ಕುಲಪತಿಗಳಿಗೆ ಹಾಗೂ ಕುಲಸಚಿವರಿಗೆ ಧನ್ಯವಾದಗಳನ್ನು ತಿಳಿಸಿ ಅಧ್ಯಕ್ಷ ನುಡಿಗಳನ್ನಾಾಡಿದರು.
ಈ ಸಂದರ್ಭದಲ್ಲಿ ಡೀನರಾದ ಪ್ರೊೊ.ಪಾರ್ವತಿ ಸಿ.ಎಸ್, ಭೌತಶಾಸ ವಿಭಾಗದ ಅತಿಥಿ ಉಪನ್ಯಾಾಸಕರಾದ ಆರ್ಶಿಯಾ ತಬಸ್ಸುಮ್, ಫಿರ್ದೋಸ್, ಶ್ರೀನಿವಾಸ್ ಉಪಸ್ಥಿಿತರಿದ್ದರು. ವಿದ್ಯಾಾರ್ಥಿಗಳಾದ ನಿಖಿತಾ ಸ್ವಾಾಗತಿಸಿದರು, ಸುಮಯ್ಯ ನಿರೂಪಿಸಿದರು, ಉಪನ್ಯಾಾಸಕರಾದ ಡಾ.ರಾಮಣ್ಣ.ಪಿ ಅತಿಥಿಯನ್ನು ಪರಿಚಯಿಸಿದರು, ಭಾರ್ಗವಿ ವಂದಿಸಿದರು. ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ : ಭೌತಶಾಸ ವಿಭಾಗದಲ್ಲಿ ವಿಶೇಷ ಉಪನ್ಯಾಸ ಶಾಸೀಯ ಕಂಪ್ಯೂೂಟಿಂಗ್ಗೆ ಕ್ವಾಾಂಟಂ ಸೆಡ್ಡು – ಡಾ.ರಾಜೀವ್ ಶೇಷ ಜೋಷಿ

