ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ರಾಯಚೂರು ಮಹಾನಗರ ಪಾಲಿಕೆ ವ್ಯಾಾಪ್ತಿಿಯ ಜನರಿಗೆ ಸಮರ್ಪಕ ಕುಡಿಯುವ ನೀರು, ಮೂಲ ಸೌಕರ್ಯ, ಸ್ವಚ್ಛತೆಗೆ ಒತ್ತು ನೀಡುವಂತೆ ಪಾಲಿಕೆ ಆಡಳಿತಾಧಿಕಾರಿಯಾಗಿರುವ ಕಲಬುರಗಿ ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಸೂಚಿಸಿದರು.
ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಯಾವುದೇ ರೀತಿಯ ಮೂಲಭೂತ ಸೌಕರ್ಯ ಅಚ್ಚುಕಟ್ಟಾಾಗಿ ಮಾಡಿ ಈಗ ನಡೆಯುತ್ತಿಿರುವ ಸ್ವಚ್ಛತೆ, ನಗರ ಸೌಂದರ್ಯೀಕರಣ ಕಾರ್ಯ ಯಥಾವತ್ತು ಮುಂದುವರೆಸಬೇಕು. ಸುಗಮ ಸಂಚಾರಕ್ಕೆೆ ತೊಂದರೆಯಾಗದ ರೀತಿಯಲ್ಲಿ ನಗರದ ಎಲ್ಲ ಕಡೆಗೆ ರಸ್ತೆೆ ಬದಿಗಳಲ್ಲಿ ಸಸಿಗಳ ನೆಡುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ 35 ಬಡಾವಣೆಗಳಿದ್ದು ಕೃಷ್ಣಾಾ ಮತ್ತು ತುಂಗಭದ್ರಾಾ ನದಿಗಳು ನಗರದಿಂದ 20 ರಿಂದ 30 ಕಿ.ಮೀ ದೂರದಲ್ಲಿವೆ. ಕೃಷ್ಣ ನದಿಯಿಂದ ಶೇ.80ರಷ್ಟು ಮತ್ತು ತುಂಗಭದ್ರಾಾ ನದಿಯಿಂದ ಶೇ.20 ರಷ್ಟು ನೀರು ಪಡೆಯಲಾಗುತ್ತಿಿದೆ. ಚಿಕ್ಕಸೂಗೂರನಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕ ಮತ್ತು ರಾಂಪೂರ ಬಳಿಯಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕದ ಮೂಲಕ ನದಿ ನೀರನ್ನು ಶುದ್ಧೀಕರಣಗೊಳಿಸಿ ನಗರಕ್ಕೆೆ ನೀರು ಪೂರೈಸಲಾಗುತ್ತಿಿದೆ ಎಂದು ಆಯುಕ್ತ ಜುಬಿನ್ ಮೊಹಾಪಾತ್ರ ಮಾಹಿತಿ ನೀಡಿದರು.
650 ಕಿ.ಮೀ ರಸ್ತೆೆ ಜಾಲದ ವ್ಯವಸ್ಥೆೆಯಿದ್ದು ಇತ್ತೀಚಿನ ಒಳಚರಂಡಿ ಜಾಲದ ಉದ್ದ 300 ಕಿ.ಮೀ ಇದೆ. 73 ಸಾವಿರ ಮನೆಗಳಿವೆ. ಇದುವರೆಗೆ 431 ಕಿ.ಮೀ ನಷ್ಟು ಒಳಚರಂಡಿ ಜಾಲದ ವ್ಯವಸ್ಥೆೆ ಇದ್ದು ಈ ಪೈಕಿ 300 ಕಿ.ಮೀ ಜಾಲ ಕಾರ್ಯನಿರ್ವಹಿಸುತ್ತಿಿದೆ ಎಂದು ವಿವರಿಸಿದರು.
ರಾಯಚೂರು ಮಹಾನಗರ ಪಾಲಿಕೆಯ ವ್ಯಾಾಪ್ತಿಿಯಲ್ಲಿ ನಗರವನ್ನು ಸೌಂದರ್ಯೀಕರಣಗೊಳಿಸಲು ಬೇಸಿಗೆ ಕಾಲದಲ್ಲಿ ತಾಪಮಾನವನ್ನು ನಿಯಂತ್ರಿಿಸಿ ಪರಿಸರದ ಸಮತೋಲನವನ್ನು ವಾಯು ಗುಣಮಟ್ಟವನ್ನು ಹೆಚ್ಚಿಿಸಲು ಹಾಗೂ ವಿಶೇಷವಾಗಿ ವಾಯುಮಾಲಿನ್ಯ ನಿಯಂತ್ರಿಿಸಿ ನಗರವನ್ನು ಪರಿಸರ ಸ್ನೇಹಿ ನಗರವನ್ನಾಾಗಿ ರೂಪಿಸಲು ಹೆಚ್ಚಿಿನ ಸಂಖ್ಯೆೆಯಲ್ಲಿ ಗಿಡಮರ ನೆಡುವುದು ಅವಶ್ಯವಿರುವ ಕಾರಣ 99 ಲ 99 ಸಾವಿರ ವೆಚ್ಚದ ಕಾಮಗಾರಿ ನಿರ್ವಹಿಸಲು ಅಂದಾಜು ಪತ್ರಿಿಕೆ ಸಿದ್ಧಪಡಿಸಿದ್ದು ಆಡಳಿತಾತ್ಮಕ ಅನುಮೋದನೆ ಪಡೆದು ಕಾರ್ಯಗತಗೊಳಿ ಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲಿಕೆಯ ಸಮಿತಿಯ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಶರಣಪ್ಪ ಸತ್ಯಂಪೇಟೆ, ಸಂತೋಷ ರಾಣಿ ಸೇರಿದಂತೆ ಪಾಲಿಕೆಯ ಇನ್ನಿಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿಿತರಿದ್ದರು.
ಆಡಳಿತಾಧಿಕಾರಿ ಜಹೀರಾ ನಸೀಮ್ ಸಭೆ ಪಾಲಿಕೆ ವ್ಯಾಾಪ್ತಿಯಲ್ಲಿ ಸಮರ್ಪಕ ನೀರು, ಮೂಲ ಸೌಕರ್ಯಕ್ಕೆ ಆದ್ಯತೆಗೆ ಸೂಚನೆ

