ಸೂರಿ……ಸೂರಿ ಎಂದು ಅವನ ಮೇಲೆ ಬಿದ್ದು ಅಳುತ್ತಿಿದ್ದೆೆ ನನ್ನ ಆಕ್ರಂದನಕ್ಕೆೆ ಪಾರವೇ ಇಲ್ಲಘಿ. ನನ್ನ ದನಿ ಜೋರಾಯಿತು ಹೊರಗಿದ್ದವರೆಲ್ಲ ಬಂದು ಸಮಾಧಾನ ಮಾಡುತ್ತಿಿದ್ದರು. ಏಳು ಸೂರಿ…….ಏಳು ಮಾತಾಡು, ಬೆಳಿಗ್ಗೆೆ ಏನೇನೋ ಮಾತಾಡಿದೆ. ಇನ್ನೂ ಮಾತಾಡ ಬೇಕೆಂದಿದ್ದೆೆ ಏಳು ಮಾತಾಡು ಎಂದೆಲ್ಲ ಅರಚುತ್ತಿಿದ್ದೆೆ ‘‘ಆತ್ಮ ಬಂಧು ಕೃತಿಯ ಸಾಲುಗಳು ಅಂತಃಕರಣವನ್ನು ಕಲಕುವ ಹೃದಯವನ್ನು ಆದರ್ರ್ಗೊಳಿಸುವ ವಾಕ್ಯಗಳು ವಾಚಕರ ಕಂಗಳಲ್ಲಿ ಹನಿಗೂಡಿದರೆ ಆಶ್ಚರ್ಯವಿಲ್ಲ.
ಆತ್ಮೀಯ ಕಾವ್ಯ ಬಂಧು ವೀರ ಹನುಮಾನ ಬಹಿರಂಗದಲ್ಲಿ ಅಜಾನುಬಾಹು ಅಂತರಂಗದಲ್ಲಿ ಮುಗ್ಧ ಮಗು. ವೀರಹನುಮಾನ ಭಾವಪರವಶರಾಗಿ ಮಾತನಾಡುತ್ತಿಿರುವ ಸಂದರ್ಭದಲ್ಲಿ ಅವರ ಬೆರಗುಗಂಗಳಲ್ಲಿ ವಾತ್ಸಲ್ಯದ ಪ್ರತೀಕ ಧ್ವನಿಸುತ್ತದೆ.
ಬಂಡಾಯಕವಿಯ ಅಂತರಾಳದಲ್ಲಿ ದೇವೀ ಭಕ್ತಿಿಯ ಚಿಲುಮೆ ಸದಾ ಜಾಗೃತವಾಗಿರುವುದು ವಿಚಿತ್ರವಾಗಿದ್ದರೂ ಸತ್ಯ. ಸಾತ್ವಿಿಕ ಕೋಪ ದೈವೀ ಪ್ರೇರಣೆಯ ಅಂಶವೆಂದು ಹೇಳಿದರೆ ತಪ್ಪಾಾಗಲಾರದು, ಸಾಹಿತ್ಯ ಸಂಸ್ಕೃತಿ, ಹೃದಯವಂತಿಕೆ ವೀರ ಹನುಮಾನರವರಿಗೆ ಅವರ ಹಿರಿಯರಿಂದ ಬಂದ ಬಳುವಳಿ, ಅದು ಅವರನ್ನು ಸದಾ ಶ್ರೀರಕ್ಷೆೆಯಾಗಿ ಕಾಪಾಡುತ್ತದೆ. ದೈವಿಚ್ಛೆೆ.
ವೀರ ಹನುಮಾನರವರಿಗೆ ಸುರೇಶ ಸರ್ವಸ್ವ, ಅವರೇ ಹೇಳುವಂತೆ ‘‘ನನ್ನ ಬಾಳಿಗೆ ಸೂರ್ಯನಂತೆ ಬೆಳಕಾಗಿದ್ದ ದೊಡ್ದ ಸಂಗಾತಿಯನ್ನೇ ಕಳೆದುಕೊಂಡು ನಿರ್ಗತಿಕನಾಗಿ ನಿಂತು ಬಿಟ್ಟಿಿದ್ದೆೆ, ದೇವರು ನನಗರಿವಿಲ್ಲದೇ ನನ್ನಿಿಂದ ಎಲ್ಲವನ್ನು ಕಳೆದುಕೊಂಡಂತೆ ನನಗನಿಸಿತ್ತು, ಇನ್ನೇನು ಉಳಿಸಿಲ್ಲ …….. ಉಸಿರು ಮಾತ್ರ ಅಷ್ಟೇ ಅಲ್ಲ ನಿಜವಾದ ಸ್ನೇಹಿತನೆಂದರೆ ಕತ್ತಲು ಪ್ರದೇಶಗಳಲ್ಲಿ ನಿಮ್ಮನ್ನು ಕಂಡು ನಿಮ್ಮನ್ನು ಮತ್ತೆೆ ಬೆಳಕಿನೆಡೆಗೆ ನಡೆಸುವ ಅಪರೂಪದ ವ್ಯಕ್ತಿಿ’’ ಎಂಬುದು ನಮ್ಮಿಿಬ್ಬರಿಗೂ ಪೂರ್ಣ ಅನ್ವಯಿಸುವಂತಾಗಿತ್ತು.
ವೀರ ಹನುಮಾನ ಅವರ ಪ್ರಾಾಸಾದಿಕವಾಣಿ ಕೃಷ್ಣ , ಅರ್ಜುನ, ಭೋಜ, ಕಾಳಿದಾಸ, ದುರ್ಯೋಧನ, ಕರ್ಣ ಅಂತಹ ನಿರ್ವಾಜ್ಯ ಪ್ರೇಮದ ಗೆಳೆತನದ ಸಂಬಂಧ ಸ್ಮರಣೆಗೆ ಬರುತ್ತದೆ. ಉಪಮೆಗೆ ಅತೀತವಾದ ಅಪ್ಪಟ ಸ್ನೇಹತ್ವದ ಪರಿ ಅನನ್ಯ, ಅದಕ್ಕೆೆ ಅದೇ ಸಾಟಿ ಹೋಲಿಕೆಗೆ ಮೀರಿದುದು ವೀರ ಹನುಮಾನ – ಸುರೇಶರ ಸ್ನೇಹ ಸಂಬಂಧ.
ಸುರೇಶನ ತಾಯಿಯ ಮಾತುಗಳು ಜಾತ್ಯಾಾತೀತ ಮನೋಭಾವದ ಹೃದಯ ವೈಶಾಲ್ಯದ ಮಾತೃತ್ವ ಪಜ್ಞೆೆಯ ಅಮೃತ ಸದೃಶ ನುಡಿಗಳು ವೀರ ಹನುಮಾನರವರನ್ನು ಕುರಿತು ಹೇಳುತ್ತ ‘‘ಆ ಹುಡುಗ ನಮ್ಮ ಸುರೇಶ ಗೆಳೆಯ ಏಳೆ ಮನಸ್ಸುಗಳು ಮೇಲಾಗಿ ಈಗಾಗಾಲೇ ಒಂದು ವರ್ಷವಾಗುತ್ತ ಬಂತು ಇಬ್ಬರೂ ಅಣ್ಣ ತಮ್ಮಂದಿರಂತೆ ಇರುತ್ತಿಿದ್ದಾಾರೆ. ಇದರಲ್ಲಿ ಜಾತಿ ಪಾತಿ ಏನು ಬಂತು. ಈ ಕಾಲಕ್ಕೆೆ ಅವೆಲ್ಲ ಏನೂ ಇಲ್ಲ ಆ ಹುಡುಗ ನಮ್ಮ ಮನೆಗೆ ಬರುವುದು ನಮಗೆ ಏನೂ ಅಭ್ಯಂತರವಿಲ್ಲ ಅವನು ನನಗೆ ಮಗನ ಸಮಾನ ಎನ್ನುವುದನ್ನು ಓದಿದಾಗ ಜಗದ ತಾಯಂದಿರ ಪ್ರತಿನಿಧಿಯಾಗಿ ಕಾಣುತ್ತಾಾಳೆ ಸುರೇಶರವರ ಅಮ್ಮ.
ವೀರ ಹನುಮಾನರವರ ಆರಾಧ್ಯದೈವ ತಿರುಪತಿಯ ವೆಂಕಟರಮಣ ಪಾಪನಾಶನಂ, ಆಕಾಶಗಂಗ, ವೇಣುಗೋಪಾಲ ಸ್ವಾಾಮಿ ಗೋಗರ್ಭ ತೀರ್ಥ, ಪಾಂಡವತೀರ್ಥಗಳಲ್ಲಿ ಸ್ನಾಾನಮಾಡಿ ಪುನೀತರಾಗುವ ಬಯಕೆ ಸಾತ್ವಿಿಕ ಮನೋಭಾವನೆಯ ಪ್ರತೀಕವಾಗಿದೆ.
ವೀರ ಹನುಮಾನ ಅವರಿಗೆ ಅಧ್ಯಯನದ ಬಗ್ಗೆೆ ಅಪಾರ ಆಸಕ್ತಿಿ ವಿಶೇಷವಾಗಿ ‘‘ಜೈಮಿನಿ ಭಾರತ ಎಂದರೆ ರೋಮಾಂಚನ ಆಗುವಷ್ಟರ ಮಟ್ಟಿಿಗೆ ಅತ್ಯಾಾನಂದ.
‘‘ಅಂದಿನ ಕಾಲ ಘಟ್ಟದಲ್ಲಿ ನಮ್ಮ ಭಾಗದಲ್ಲಿ ಏನೂ ಓದದೇ ಇದ್ದರೂ ‘ಜೈಮಿನಿ ಭಾರತ’ ಮಾತ್ರ ಓದಿದರೆ ಸಾಕು ಹೆಣ್ಣನ್ನು ಕೊಡುತ್ತಿಿದ್ದಂತೆ ಆ ಆಸಕ್ತಿಿಯೇ ನನ್ನನ್ನು ಕನ್ನಡ ಸಾಹಿತ್ಯಕ್ಕೆೆ ತೊಡಗಿಸಿಕೊಂಡಿತು. ಈ ಮಾತು ಪಂಡಿತನಾದವನು ಹೆಂಡತಿಯನ್ನು ಸಾಕಿ ಸುಖೀ ಜೀವನವನ್ನು ಸಾಗಿಸಬಲ್ಲ ಎನ್ನುವ ಭರವಸೆ ಜನ -ಮನದಲ್ಲಿ ನಿಚ್ಚಳವಾಗಿ ಉಳಿದಿರಲಿಕ್ಕೆೆ ಸಾಕು.
ಆಂಧ್ರ ಪ್ರದೇಶದ ವಿಪ್ಲವ ರಚಯಿತುಲ ಸಂಘಂ ಕವಿಗಳಾದ ಶ್ರೀ ಶ್ರೀ, ವರವರರಾವ್, ಜಾಘುವಾ ಮುಂತಾದವರ ಸಾಹಿತ್ಯದಿಂದ ಪ್ರಭಾವಿತರಾದ ವೀರ ಹನುಮಾನರವರಲ್ಲಿ ಸಾಮಾಜಿಕ ಪ್ರಜ್ಞೆೆ ಜಾಗೃತಗೊಂಡಿತು.
‘‘ಕಲಾವಿದನೊಬ್ಬ ಕೇವಲ ರಂಜಕನಲ್ಲ, ಸಮಕಾಲೀನ ಸಮಾಜದ ರಾಜಕೀಯ ವಿಶ್ಲೇಷಕ ಎಂಬಂತಹ ವಾತಾವರಣ ಸಮುದಾಯದ ಆರಂಭಿಕ ನಾಟಕಗಳಿಂದ ಸೃಷ್ಠಿಿಯಾಯಿತು ಎನ್ನುವಲ್ಲಿ ಕಲೆಯ ಮೂಲ ಆಶಯ ಅಭಿವ್ಯಕ್ತವಾಯಿತು.
ನಾಡೋಜ ಸಿದ್ಧಲಿಂಗಯ್ಯನವರ ‘‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ, ಮನೊರಂಜೆನೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ ಎನ್ನುವ ಘೋಷವಾಕ್ಯವನ್ನು ಸಾಬೀತು ಪಡಿಸಿತು.
ಸುರೇಶನ ಬದುಕಿನ ಚಿತ್ರಣವನ್ನು ವೀರ ಹನುಮಾನರವರು ಕಟ್ಟಿಿಕೊಡುವಾಗ ನೈಜಚಿತ್ರಣ ದೃಶ್ಯಕಾವ್ಯದಂತೆ ಕಣ್ಣೆೆದುರಲ್ಲಿ ಬಂದು ನಿಲ್ಲುತ್ತದೆ. ಹೌದು ಬಾಳಿನಲ್ಲಿ ಸೋಲೇ ಗೆಲುವಿನ ಮೂಲ ಎನ್ನುವುದು ಮನವರಿಕೆಯಾಗುತ್ತದೆ.
ವೀರ ಹನುಮಾನರವರಿಗೆ ತಂದೆ ತಾಯಿಯ ಬಗ್ಗೆೆ ಎಲ್ಲಿಲ್ಲದ ಗೌರವ, ಬಹುಶಃ ಆ ಕಾರಣಕ್ಕಾಾಗಿಯೇ ತಂದೆ ತಾಯಿಯವರು ಒಪ್ಪಿಿದ ಹೆಣ್ಣನ್ನು ಕಣ್ಣು ಮುಚ್ಚಿಿ ಮದುವೆ ಮಾಡಿಕೊಂಡರು ಆ ನಿರ್ಮಲವಾದ ಮನಸ್ಸೇ ಹನುಮಾನರವರ ಸುಖೀ ದಾಂಪತ್ಯದ ಸಂಕೇತ.
ಸುರೇಶನ ಮದುವೆಯ ನಂತರ ಆರ್ಥಿಕ ಸಬಲತೆ ಬೆಳೆಯುತ್ತಾಾ ಹೋಯಿತು ಉಳಸೀಯವರ ಕಾಲ್ಗುಣ ಸುರೇಶನ ಬದುಕು ಬೆಳಕಾಯಿತು.
ಪಾರಸಮಲ್ ಸುಖಾಣಿಯವರಿಗೆ ಸುರೇಶ ಮನೆಯ ಮಗನಂತಿದ್ದು ಕೆಲವು ಆಪ್ತ ವಲಯದ ಕೆಲಸಗಳನ್ನು ಸುರೇಶನಿಗೆ ಮಾತ್ರ ಹೇಳುತ್ತಿಿದ್ದರು. ಸುರೇಶ ನಂಬಿಕೆಗೆ ಆರ್ಹನಾಗಿದ್ದಘಿ, ಶ್ರೀ ಗುರು ಕಲಾಮಂದಿರದ ಶ್ರೇಯೋಭಿವೃದ್ದಿಯಲ್ಲಿ ಸುರೇಶನ ಪಾತ್ರ ಪ್ರಮುಖವಾಗಿತ್ತು ಅದು ಆತನ ಕಲಾಭಿಮಾನಕ್ಕೆೆ ಸಾಕ್ಷಿಿ.
ಮಾಜಿ ಮುಖ್ಯಮಂತ್ರಿಿ ಬಂಗಾರಪ್ಪ ಅವರನ್ನು ಅಪ್ಪಾಾಜಿ ಎಂದು ಕರೆಯುತ್ತಿಿದ್ದ ಸುರೇಶನನ್ನು ಕಂಡಾಗ ಬಂಗಾರಪ್ಪನ ಮೊಗದಲ್ಲಿ ನಗು ಅರಳುತ್ತಿಿತ್ತು ಒಂದು ರೀತಿಯಲ್ಲಿ ಸುರೇಶ ಬಂಗಾರಪ್ಪನವರ ಮಾನಸ ಪುತ್ರರಾಗಿದ್ದರು.
ದೇವದುರ್ಗದ ಯಲ್ಲಪ್ಪ ಅಕ್ಕರಕಿ ಕುಮಾರ ಬಂಗಾರಪ್ಪ ಅವರೊಡನೆ ಮಧುರ ಭಾಂಧವ್ಯವನ್ನು ಹೊಂದಿದ್ದ ಸುರೇಶರವರ ಕನ್ನಡ ಸೇವೆ, ದಾನ ಗುಣ ಸಂಪನ್ನತೆ ಮದರಿ ಮಠ ಸೇವೆ, ಕೊರೋನಾ ವೈರಸ್ ಸಂದರ್ಭದಲ್ಲಿ ಸಹಾಯ ಹಸ್ತ ಮುಂತಾದವುಗಳು ಅನುಕರಣೀಯ.
ಕಷ್ಟದಲ್ಲಿ ನಮ್ಮ ಹತ್ತಿಿರವಿರುವವರು ಎಂದಿಗೂ ನಮ್ಮೊೊಂದಿಗೆ ಇರುತ್ತಾಾರೆಂದು ಹೇಳುವ ಇಂಗ್ಲೀಷ್ನಾಣ್ಣುಡಿಯೊಂದು ಇದೆ. ಆ ನಾಣ್ಣುಡಿಗೆ ಸರಿಯಾದ ಅರ್ಥ ಕೂಡಾ ನಮ್ಮ ಸ್ನೇಹದಲ್ಲಿ ಇದೆ ಎಂದು ಹೇಳುವ ವೀರ ಹನುಮಾನರವರ ಈ ಕೃತಿಯು ಅನರ್ಘ್ಯ ಅನುಭವದ ರಸಘಟ್ಟಿಿ.
ಈ ಕೃತಿಯನ್ನು ಓದಿ ಮುಗಿಸುತ್ತಿಿದ್ದಂತೆಯೇ ಒಂದು ತರಹದ ಧನ್ಯತಾ ಭಾವ ಮನದಲ್ಲಿ ಮೂಡಿ ಮೈ- ಮನ ಪುಳಕಗೊಳ್ಳುತ್ತದೆ.
ಕನ್ನಡ ಸರಸ್ವತ ಲೋಕದಲ್ಲಿಯೇ ಆತ್ಮೀಯ ಗೆಳೆತನದ ಎರಡು ಜೀವ ಒಂದು ಕಥಾನಕ ಅಪರೂಪದಲ್ಲಿಯೇ ಅಪರೂಪ.
ಶ್ರೀಯುತ ಸುರೇಶ ಹಾಗೂ ವೀರ ಹನುಮಾನರವರ ಆತ್ಮ ಚರಿತ್ರೆೆಗಳು ಒಂದಕ್ಕೊೊಂದು ಅವಿನಾಭಾವ ಸಂಬಂಧವನ್ನು ಹೊಂದಿರುವುದು ಕೇವಲ ಕಲ್ಯಾಾಣ ಕರ್ನಾಟಕಕ್ಕೆೆ ಮಾತ್ರವಲ್ಲ, ಅಖಂಡ ಕರ್ನಾಟಕ ಸಾಹಿತ್ಯ ಪ್ರಪಂಚದಲ್ಲಿ ವಿರಳಾತಿ ವಿರಳ.
ಕೃತಿಯು, ಸರಳ, ಸುಂದರ, ಭಾವಪೂರ್ಣ, ಮತ್ತು ಅನುಭವ ವೇದ್ಯ, ವೀರ ಹನುಮಾನರವರ ಸ್ಮರಣ ಶಕ್ತಿಿಗೆ ಹ್ಯಾಾಟ್ಸಾ್ಾ ಅವರಿಗೆ ನನ್ನದೊಂದು ಮನ ದುಂಬಿದ ಸಲಾಂ.
-ಅಯ್ಯಪ್ಪಯ್ಯ ಹುಡಾ
ರಾಯಚೂರು
ಆಪ್ತತೆಯ ಅನುಬಂಧ – ಆತ್ಮ ಬಂಧು ಕೃತಿ

