ಹೊಸಕೋಟೆ,ಸೆ.2: ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 11 ಸ್ಥಾನಗಳಿಗೆ ಅಭ್ಯರ್ಥಿಗಳು ಸ್ಪರ್ದೆ ಮಾಡಿದ್ದು, 11ಕ್ಕೆ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯವನ್ನು ಸಾಧಿಸಿದ್ದಾರೆ.
ಗೆದ್ದಿರುವಂತಹ ಅಭ್ಯರ್ಥಿಗಳು ಚಂದ್ರೇಗೌಡ.ಸಿ, ಚಂದ್ರಶೇಖರ್.ಬಿ, ಬಚ್ಚೇಗೌಡ ಎಚ್.ಜಿ, ಆಲಿಂ ಪಾಷ,ಮಂಜುನಾಥ ಎಂ, ಫರೀದಾ, ಮುನಿಯಪ್ಪ, ನಾರಾಯಣಸ್ವಾಮಿ.ಪಿ, ಸೋಮಶೇಖರ್,ಜಯಲಕ್ಷ್ಮಮ್ಮ, ಚಿಕ್ಕಅಕ್ಕಯ್ಯಮ್ಮ, ಇವರುಗಳು ಗೆಲುವನ್ನು ಸಾಧಿಸಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರುಗಳಾಗಿ ಆಯ್ಕೆ ಆಗಿರುತ್ತಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರಾದ ಬಚ್ಚೇಗೌಡ ಮಾತನಾಡಿ,
ನಮ್ಮ ಗ್ರಾಮದಲ್ಲಿ ಇರುವಂತಹ ಹಾಲು ಉತ್ಪಾದಕರ ಸಹಕಾರ ಸಂಘ 48 ವರ್ಷಗಳ ಹಿಂದಿನ ಸಂಘದಲ್ಲಿ ಚುನಾವಣೆಗಳು ನಡೆಸದೆ ಪರಸೊರ ಒಪ್ಪಿಗೆ ಮೇರೆಗೆ ಅವಿರೋಧವಾಗಿ ಆಯ್ಕೆ
ಮಾಡಿಕೊಳ್ಳುತ್ತಿದ್ದೇವು. ಆದರೆ, ಈಗ ನಮ್ಮ ವಿರೋಧ ಪಕ್ಷದವರು ಚುನಾವಣೆ ನಡೆಸಲೇ ಬೇಕು ಎಂದು ಹಠ ಹಿಡಿದ ಕಾರಣ ಚುನಾವಣೆ ಮಾಡಬೇಕಾಯಿತು.
ನಮ್ಮ ಸಹಕಾರ ಸಂಘ ಬಹಳ ಮುಂದುವರೆದ ಸಂಘವಾಗಿದೆ. ಸಂಘದ ಕಟ್ಟಡ ಸುಮಾರು 50 ಲಕ್ಷ ರೂಪಾಯಿಗಳಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳು ಮಾಡುವುದು ಇವೆ. ಅದನ್ನು ಮುಂದಿನ ದಿನಗಳಲ್ಲಿ ಅಭಿವೃದ್ದಿಗೊಳಿಸಲಾಗುವುದು ಎಂದರು.
ಗ್ರಾಮದ ಎಲ್ಲಾ ಗ್ರಾಮಸ್ಥರು ನೂತನ ನಿರ್ದೇಶಕರುಗಳಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರ್ರಮಾಚರಣೆ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಂಜಿನಪ್ಪ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮೇಗೌಡ, ಮುಖಂಡರಾದ ಶಪಿವುಲ್ಲಾ, ಕುಮಾರ್, ಬೈರೇಗೌಡ ಹಾಗೂ ಅನೇಕ ಮುಖಂಡರುಗಳು ಗ್ರಾಮಸ್ಥರು ಭಾಗವಹಿಸಿದ್ದರು.