ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.1:
ಸ್ವಾಾತಂತ್ರ್ಯ ನಂತರ ಕಾಂಗ್ರೆೆಸ್ ಪಕ್ಷವು ಕೃಷಿ ಉತ್ಪಾಾದನೆ ಹೆಚ್ಚಳಕ್ಕಾಾಗಿ ದೇಶದಲ್ಲಿ ಹತ್ತಾಾರು ಆಣೆಕಟ್ಟೆೆಗಳಿಗಳಿಗೆ ಆದ್ಯತೆ ನೀಡಿದ್ದರಿಂದ ಇಂದು ನಮಗೆ ಆಹಾರ ಭದ್ರತೆ ಸಿಕ್ಕಿಿದೆ ರಾಜೀವ್ಗಾಂಧಿ ಕಾಲದಲ್ಲಿ ಆಧುನಿಕ ತಂತ್ರಜ್ಞಾಾನಕ್ಕೆೆ ಹೆಚ್ಚು ಒತ್ತು ನೀಡಿದ್ದರಿಂದ ನಾವು ಮುಂದುವರಿದ ದೇಶಗಳ ಸಾಲಿನಲ್ಲಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಕೊಪ್ಪಳ ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಾಪೂರ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾಾನದಲ್ಲಿ ಪಕ್ಷದ ನಾನಾ ಹುದ್ದೆೆಗಳಿಗೆ ನೇಮಕವಾದ ಪದಾಧಿಕಾರಿಗಳ ಪದಗ್ರಹಣ ಮತ್ತು ಸ್ಥಳೀಯ ಸಂಸ್ಥೆೆಗಳ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಾಟಿಸಿ ಮಾತನಾಡಿದ ಅವರು ಅಂದು ಕಾಂಗ್ರೆೆಸ್ ಪಕ್ಷವು ಕೃಷಿ, ನೀರಾವರಿ, ಶಿಕ್ಷಣ ತಂತ್ರಜ್ಞಾಾನಕ್ಕೆೆ ಒತ್ತು ನೀಡಿದ್ದರಿಂದ ದೇಶವು ಆರ್ಥಿಕ ಸುರಕ್ಷತೆಯಲ್ಲಿ ಮುಂದಿದೆ, ದೇಶಕ್ಕೆೆ ಜೀವ ಮತ್ತು ಜನತೆಗೆ ಜೀವನ ಕೊಟ್ಟಿಿದೆ ಎಂಬುದನ್ನು ಯಾರೂ ಮರೆಯಬಾರದು. ಪಕ್ಷದಲ್ಲಿ ಸಕ್ರಿಿಯರಾಗಿರುವ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾಾನಮಾನ ನೀಡುತ್ತ ಬಂದಿದೆ ಇದು ಬಹು ದೊಡ್ಡ ಜವಾಬ್ದಾಾರಿಯಾಗಿದ್ದು ಪಕ್ಷ ದೇಶಕ್ಕೆೆ ನೀಡಿದ ಕೊಡುಗೆಗಳನ್ನು ಯುವ ಪೀಳಿಗೆಗೆ ಪಕ್ಷದ ಪದಾಧಿಕಾರಿಗಳು ತಿಳಿಸಿ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂದರು.
ಬಿಜೆಪಿಯವರು ಅಚ್ಚೆೆದಿನ್ ಆಯೇಗಾ ಸಬ್ಕಾ ಸಾಥ್ ಸಬಕಾ ವಿಕಾಸ ಎನ್ನುತ್ತಾಾ 11 ವರ್ಷಗಳಿಂದ ದೇಶದ ಜನತೆಯನ್ನು ಮೂರ್ಖರನ್ನಾಾಗಿಸಿದೆ. ಕೇಂದ್ರ ಸರಕಾರ ರಚನೆಗೆ ನಮ್ಮ ಜತೆಗಿದ್ದ ಕೆಲವರು ಲೋಕಸಬಾ ಚುನಾವಣೆ ವೇಳೆ ಕೈಕೊಟ್ಟಿಿದ್ದರಿಂದ ಕೆಲ ಸಂಸದರ ಕೊರತೆಯಿಂದ ಅಧಿಕಾರದಿಂದ ದೂರ ಉಳಿದಿದೆ ಮುಂದೊಂದು ದಿನ ಬಿಜೆಪಿಯವರ ಬಣ್ಣ ಬಯಲಾಗಲಿದೆ. ಕಾಂಗ್ರೇಸ್ ಪಕ್ಷದವರಿಗೆ ಪಕ್ಷವೇ ಮುಖ್ಯ ಮುಂಬರುವ 2028ರ ಚುನಾವಣೆಗೆ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಕೈಬಲ ಪಡಿಸಲು ಮುಂದಾಗಬೇಕು, ಕೆಲ ಸಮದಲ್ಲಿ ಸ್ಥಳೀಯ ಸಂಸ್ಥೆೆ ಚುನಾವಣೆ ಬರಲಿವೆ ಪಕ್ಷದ ಗ್ಯಾಾರಂಟಿ ಯೋಜನೆ ಮಲ್ಲಿಕಾರ್ಜುನ ಖರ್ಗೆ ನೀಡಿದ 371(ಜೆ) ಬಗ್ಗೆೆ ಜನರಲ್ಲಿ ಪಕ್ಷದ ಕಾರ್ಯಕ್ರಮಗಳ ಬಗ್ಗೆೆ ತೆರಳಿ ಅರಿವು ಮೂಢಿಸಬೇಕಿದೆ ಎಂದರು.
ಪಕ್ಷದ ಜಿಲ್ಲಾಾ ವಕ್ತಾಾರ ರಜಾಕ ಉಸ್ತಾಾದ ಮಾತನಾಡಿ, ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅನೇಕ ಜನಪರ ಯೋಜನೆಗಳಿಗೆ ಹೆಚ್ಚಿಿನ ಒತ್ತು ನೀಡಿದೆ. ಆದರೆ ವಿರೋಧ ಪಕ್ಷಗಳು ಪಂಚ ಗ್ಯಾಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಿಿವೆ ಎಂದರು. ಈವೇಳೆ ಪಕ್ಷದ ಡಿಕೆ ಮುರಳಿ, ಹಾಗೂ ಮಲ್ಲಿಕಾರ್ಜುನ, ನಯೋಪ್ರಾಾ ಅಧ್ಯಕ್ಷ ಭೂಪನಗೌಡ ಜಿಲ್ಲಾಾ ಗ್ಯಾಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ, ಡಿ.ಜಿ. ಗುರಿಕಾರ, ಮಹಾಂತೇಶ ಪಾಟೀಲ್, ಅಮರೇಶ ನಾಡಗೌಡ, ಲಿಂಗಪ್ಪ ಪರಂಗಿ, ಚಂದ್ರಕಾಂತ ನಾಡಗೌಡ, ನಾಗವೇಣಿ, ಸುರೇಶ ಹೂನೂರು ಸೇರಿದಂತೆ ಮುಖಂಡರು ಮಾತನಾಡಿದರು. ಗುಂಡಪ್ಪನಾಯಕ, ಅನೀಸ್ಪಾಶ, ಸೋಮಶೇಖರ ಐದನಾಳ, ಬಸವರಾಜಗೌಡ ಗಣೇಕಲ್, ನಾಗನಗೌಡ ತುರಡಗಿ, ಆದಪ್ಪ ಮನಗೂಳಿ, ಮಾಧವ ನೆಲೋಗಿ, ನಾಗರಡ್ಡೆೆಪ್ಪ, ಲಾಲಪ್ಪ ರಾಠೋಡ್, ಲಕ್ಷ್ಮಣ ರಾಠೋಡ್, ನಾಗರಾಜ ತಿಪ್ಪಣ್ಣ, ಅನ್ಸಾಾರುದ್ದೀನ್, ಮಲ್ಲಿಕಾರ್ಜುನ, ಮಲ್ಲಯ್ಯ ನರಕಲದಿನ್ನಿಿ, ಜಂಬನಗೌಡ, ಹೊನ್ನಪ್ಪ ಮೇಟಿ, ಲಕ್ಷ್ಮೀ ಪಾಟೀಲ್. ಜಗದೀಶ, ಪ್ರಕಾಶ, ಚನ್ನಾಾರೆಡ್ಡಿಿ, ನಾಗರಾಜ ತಿಪ್ಪಣ್ಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಮೋದ ಕುಲಕರ್ಣಿ ನಿರ್ವಹಿಸಿದರು.
ಸ್ವಾತಂತ್ರ್ಯ ನಂತರ ಜನರ ಜೀವನಮಟ್ಟ ಸುಧಾರಣೆಗೆ ಕಾಂಗ್ರೆಸ್ ಪಕ್ಷ ಒತ್ತು ನೀಡಿದೆ : ಬಯ್ಯಾಪೂರ

