ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.9:ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರಕಾರ ಡಮಾರ ಆಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಾಂಗ್ರೆಸ್ ನಲ್ಲಿ ಅಸಮಾದಾನ ಹೊಗೆಯಾಡುತ್ತಿದೆ.ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲ ಎಂದು ಅಸಮಾದಾನಗೊಂಡಿದ್ದಾರೆ.
ಮೂರು ತಿಂಗಳಲ್ಲಿ ಕಾಂಗ್ರೆಸ್ ಹಣೆ ಬರಹ ಹೀಗೈತಿ. ಸಚಿವರಾಗದ ಅತೃಪ್ತ ಆತ್ಮಗಳಿವೆ. ಈ ಅತೃಪ್ತರ ಆತ್ಮಗಳು ಏನು ಮಾಡುತ್ತಾರೊ ನೋಡೊಣ ಎಂದರು.
ಈಗಿನ ಸ್ಥಿತಿ ನೋಡಿದರೆ ಕಾಂಗ್ರೆಸ್ 50 ಕ್ಕೂ ಹೆಚ್ಚು ಶಾಸಕರು ಅಸಮಾದಾನಗೊಂಡಿದ್ದಾರೆ ಕಾಂಗ್ರೆಸ್ಸಿನಲ್ಲಿ ಅಸಮಾದಾನದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಾಸಕರಿಗೆ ಕಾಂಗ್ರೆಸ್ ಬರುತ್ತಾರೆ
ಅದೇ ಕಾರಣಕ್ಕೆ ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡುತ್ತಿದ್ದಾರೆ.ಬಿಜೆಪಿಯ ಯಾವ ಮುಖಂಡರು ಕಾಂಗ್ರೆಸ್ಸಿಗೆ ಹೋಗುವುದಿಲ್ಲ
ತಮ್ಮ ಪಕ್ಷದಲ್ಲಿ ಶಾಸಕರ ಹೆದರಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸದೃಡವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25 ಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ.ಬಿಜೆಪಿ ಈ ಭಾರಿ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿತ್ತು
ಆದರೆ ಆಗಿಲ್ಲ.ಹೀಗಾಗಿ ಹೈಕಮಾಂಡ ಸ್ವಲ್ಪ ನೋಡಿಲ್ಲ
ಇಷ್ಟರಲ್ಲಿಯೇ ವಿರೋಧ ಪಕ್ಷದ ನಾಯಕ ಹಾಗು ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.
ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿ ಅದು ಹೈಕಮಾಂಡಿಗೆ ಬಿಟ್ಟ ವಿಚಾರವಾಗಿದೆ.ದಿನೇಶ ಗುಂಡುರಾಯ ಜೆಡಿಎಸ್ ಹೊಂದಾಣಿಕೆಯ ಬಗ್ಗೆ ನಾಯಿ ಹಸಿದಿತ್ತು. ಅನ್ನ ಹಳಸಿತ್ತು ಎಂಬ ಟ್ವಿಟ್ ವಿಚಾರ
2018 ರಲ್ಲಿ ಯಾರು ಹಸಿದಿದ್ದರು ಎಂದರು.
ಲೋಕಸಭೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂದು ಹೇಳಿಲ್ಲ ಎಂದು ಶಾಸಕ ಯತ್ನಾಳ ಹೇಳಿದರು.