ಬೆಂಗಳೂರು; ಎರಡೂವರೆ ದಶಕದ ನಂತರ ಸ್ನೇಹಿತರ ದಿನದಂದು ದೇಶ ವಿದೇಶಗಳಿಂದ ಆಗಮಿಸಿ ಒಂದೆಡೆ ಸಮಾವೇಶಗೊಂಡರು.
ಕಷ್ಟ, ಸುಖ ಹಂಚಿಕೊಂಡು ಸಂತಸಪಟ್ಟರು. ಸ್ನೇಹ ಬಾಂಧವ್ಯದ ಮೂಲಕ ಭವಿಷ್ಯದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವ, ಕೈಲಾದಷ್ಟು ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದರು. ಸ್ನೇಹ ಬಂಧನ ಸಮಾಜದಲ್ಲಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತು.
ಇವರೆಲ್ಲರೂ ಬೆಂಗಳೂರಿನ ಕೆಂಗೇರಿ ಉಪನಗರದ ಜ್ಞಾನಬೋಧಿನಿ ಶಾಲೆಯ 1996 ರ ಬ್ಯಾಚ್ ನ ವಿದ್ಯಾರ್ಥಿಗಳು. ವಿಜಯನಗರ ಕ್ಲಬ್ ನಲ್ಲಿ ಕುಟುಂಬದ ಸಮೇತ ಸೇರಿ ಸ್ನೇಹ ದಿನದಂದು ಹೊಸ ಭಾಷ್ಯ ಬರೆದರು.
25 ವರ್ಷಗಳ ನಂತರವೂ 40 ಮಂದಿ ಒಂದೇ ಕಡೆ ಹಾಜರಾಗಿ ಶಾಲೆಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು ವಿಶೇಷವಾಗಿತ್ತು.