ಸುದ್ದಿಮೂಲ ವಾರ್ತೆ ಲಿಂಗಸೂಗೂರ, ಡಿ.02:
ವಿಭಾಗೀಯ ಕೇಂದ್ರಸ್ಥಾಾನ ಲಿಂಗಸಗೂರಿನಿಂದ ಉಪಕೃಷಿ ನಿರ್ದೇಶಕರ ಕಛೇರಿಯನ್ನು ಸ್ಥಳಾಂತರ ರದ್ದುಪಡಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಮುಂದಿನ ಅನಾಹುತಕ್ಕೆೆ ಸರಕಾರವೇ ಹೊಣೆಯಾಗುತ್ತದೆಂದು ಶಾಸಕ ಮಾನಪ್ಪ ವಜ್ಜಲ್ ಸರಕಾರದ ವಿರುದ್ದ ಅಕ್ರೋೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಿಂದ ಬಸ್ ನಿಲ್ದಾಾಣದವರೆಗೆ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾಾ ಸಾಗಿ ಡಾ, ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕ್ಷಣಕಾಲ ವಾಹನ ಸಂಚಾರ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಅವರು ಲಿಂಗಸೂಗೂರು ತಾಲೂಕಿನಲ್ಲಿಯೆ ಹಲವಾರು ವರ್ಷಗಳಿಂದ ಇರುವ ಕೃಷಿ ಉಪ ನಿರ್ದೇಶಕರ ಕಛೇರಿಯನ್ನು ಬೇರಡೆ ಸ್ಥಳಾಂತರ ಮಾಡಲಾಗುತ್ತಿಿದ್ದು ರೈತರು ಹೋರಾಟ ನಡೆಸಿದ್ದಾಾರೆ ಕೂಡಲೇ ಸ್ಥಳಾಂತರ ತಡೆಯಬೇಕು ಇಲ್ಲವಾದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು.
ಗ್ಯಾಾರಂಟಿ ಹೆಸರು ಹೇಳುತ್ತಾಾ ರಾಜ್ಯದ ಅಭಿವೃದ್ದಿಗೆ ಗಮನಕೊಡುತ್ತಿಿಲ್ಲ ಈ ಬಗ್ಗೆೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ರೈತರ ಮಕ್ಕಳಿಗೆ ವಿದ್ಯಾಾಸಿರಿ ಸ್ಕಾಾಲರ್ಶಿಪ್ ನಿಲ್ಲಿಸಲಾಗಿದೆ ಅಮೃತ ಯೋಜನೆ ರೈತರಿಗೆ ಉಪಯುಕ್ತವಾಗಿತ್ತು ಅದನ್ನು ಕಡಿತಗೊಳಿಸಲಾಗಿದೆ ತಾಲೂಕಿನಲ್ಲಿ ಅತಿವೃಷ್ಟಿಿಯಿಂದ ರೈತರ ಬೆಳೆಗಳು ಹಾನಿಯಾಗಿವೆ ಹಾನಿಯಾದ ತೊಗರಿ, ಹತ್ತಿಿ, ಮೆಣಸಿನಕಾಯಿ, ಭತ್ತ, ಸಜ್ಜೆೆ, ಸೂರ್ಯಕಾಂತಿ ಸೇರಿ ರೈತರ ಹಲವಾರು ಬೆಳೆಗಳು ನಾಶವಾಗಿ ತೊಂದರೆಯಲ್ಲಿರುವ ರೈತಿಗೆ ಕೂಡಲೇ ಪರಿಹಾರ ನೀಡಿ ನ್ಯಾಾಯ ಒದಗಿಸಬೇಕು ಹಾಗೂ ತುಂಗಭದ್ರಾಾ ಜಲಾಶಯದಲ್ಲಿ ನೀರು ಇದ್ದರು ಸಹ ಎರಡನೆ ಬೆಳೆಗೆ ನೀರು ನೀಡುತ್ತಿಿಲ್ಲ ಭತ್ತ ಬೆಳೆವ ರೈತರು ಸಂಕಷ್ಟದಲ್ಲಿದ್ದಾಾರೆ ಪರಿಹಾರ ನೀಡಬೇಕು ರೈತರಿಗೆ ಉತ್ಪನ್ನಗಳಿಗಾಗಿ ಖರೀದಿ ಕೇಂದ್ರ ಪ್ರಾಾರಂಭಿಸಬೇಕು ಸೇರಿ ರೈತರ ಸಮಸ್ಯೆೆ ಪರಿಹಾರಕ್ಕೆೆ ಸರಕಾರ ಮುಂದಾಗಬೇಕೆಂದರು.
ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಿಹಾಳ, ಲಿಂಗಸಗೂರು ಮಂಡಲಾಧ್ಯಕ್ಷ ನಾಗಭೂಷಣ ಮುದಗಲ್ ಮಂಡಲಾಧ್ಯಕ್ಷ ಹುಲ್ಲೇಶ ಸಾಹುಕಾರ ಮಾತನಾಡಿದರು. ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಅಯ್ಯಪ್ಪ ವಕೀಲ, ವೆಂಕನಗೌಡ ಪಾಟೀಲ್, ಶಂಕರಗೌಡ ಬಳಗಾನೂರು, ಬಸನಗೌಡ ಚಿತ್ತಾಾಪುರ, ಬಂದೇನವಾಜ್ ಕೊಳೂರು, ಕೀರಪ್ಪ ಕುರಿ, ರತ್ನಮ್ಮ ಸಕ್ರಿಿ, ಜ್ಯೋೋತಿಸುಂಕದ, ಸ್ಮೀತಾಅಂಗಡಿ ಮುದಗಲ್ ಹಟ್ಟಿಿ ಲಿಂಗಸೂಗೂರು ಭಾಗದ ಮುಖಂಡರಿದ್ದರು.
ಕೃಷಿ ಇಲಾಖೆ ಎತ್ತಂಗಡಿ ಶಾಸಕ ವಜ್ಜಲ್ ಆಕ್ರೋಶ : ರೈತರಿಗೆ ಪರಿಹಾರ ನೀಡುವಂತೆ ಪ್ರತಿಭಟನೆ

