ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.29: ಬಿಜೆಪಿ ಹಿರಿಯ ನಾಯಕರು ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ ಹಾಗೂ ಇತರೆ ಗಂಭೀರ ಚುನಾವಣೆಯ ವಿಚಾರಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅವರ ವಿಚಾರಗಳು ಜನರ ದಿನನಿತ್ಯದ ಬದುಕಿಗೆ ಸಂಬಂಧವೇ ಇರುವುದಿಲ್ಲ.
2014ರವರೆಗೂ ಅಡುಗೆ ಅನಿಲಕ್ಕೆ 410 ರೂ ನೀಡುತ್ತಿದ್ದ ಜನರು ತಮ್ಮ ಆದಾಯ ಏರಿಕೆಯಾಗದೇ ಈಗ ಅದೇ ಅಡುಗೆ ಅನಿಲಕ್ಕೆ 1100 ರೂ. ಆಗಿದೆ. 2014ರಲ್ಲಿ 70 ರೂ.ಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಆದರೆ ಕಚ್ಚಾತೈಲಬೆಲೆ ಕುಸಿದಿದ್ದರೂ ಇಂದು ಒಂದು ಲೀಟರ್ ಪೆಟ್ರೋಲ್ ಗೆ 101 ರೂ. ನೀಡಬೇಕಾಗಿದೆ. ಇದು ಚುನಾವಣೆಯ ಗಂಭೀರವಾಗಿದೆ. ಮನೆ ನಿರ್ಮಾಣದ ವಸ್ತುಗಳಾದ ಸೀಮೆಂಟ್ 230ರೂ.ನಿಂದ 430 ರೂ.ಆಗಿದೆ. ಕಬ್ಬಿಣ 51,438 ರೂ. ಗೆ ಮೆಟ್ರಿಕ್ಟ್ ಟನ್ ಸಿಗುತ್ತಿತ್ತು. ಈಗ 82,500 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆಯಾಗಿದೆ. ಈ ವಿಚಾರಗಳ ಬಗ್ಗೆ ಸರ್ಕಾರ ಚರ್ಚೆ ಮಾಡಲು ಸಿದ್ಧವಿಲ್ಲ. ಈ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರದ ಬಂಡವಾಳ ಭಯವಾಗುತ್ತದೆ. ಹೀಗಾಗಿ ಅವರು ಸದಾ ಸಮಾಜ ಒಡೆದು ನಮ್ಮ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ದೇಶದಲ್ಲಿ ಗೌರವಯುತವಾಗಿ ಬದುಕಲು ಈ ಬೆಲೆ ಏರಿಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬೆಲೆ ಏರಿಕೆ ವಿಚಾರವನ್ನು ಬಹಳ ಗಂಭೀರವಾಗಿ ಚರ್ಚೆ ಮಾಡುತ್ತಿದೆ. ನಮಗೆ ಯಾವುದಾದಗೂ ಕಾಯಿಲೆ ಬಂದೆರೆ ಅದಕ್ಕೆ ಚಿಕಿತ್ಸೆ ನೀಡಬೇಕೆ ಹೋರತು, ಬೇರೆಯವರನ್ನು ದೂಷಿಸುತ್ತಿದ್ದರೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ಸರ್ಕಾರ ಜನರ ಸಮಸ್ಯೆಗಳ ವಿಚಾರದಲ್ಲಿ ಪರಿಹಾರ ನೀಡುವುದರ ಬದಲು ಸಮಾಜ ಒಡೆದು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.
ಕಾಂಗ್ರೆಸ್ ಪಕ್ಷ ಈ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರವಾಗಿ ಜನಸಾಮಾನ್ಯರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ.
ಬಿಜೆಪಿ ಹಾಗೂ ಮೋದಿ ಅವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ನರೇಗಾ ಯೋಜನೆಯನ್ನು ವೈಫಲ್ಯದ ಹೆಗ್ಗುರುತು ಎಂದು ಮೋದಿ ಅವರೇ ಹೇಳಿದ್ದರು. ಆದರೆ ಇದೇ ಮೋದಿ ಅವರು ಕೋವಿಡ್ ಸಮಯದಲ್ಲಿ ಇದೇ ನರೇಗಾ ಯೋಜನೆ ಪ್ರಯೋಜನವಾಯಿತು. ಇದನ್ನು ಅವರು ಅರಿಯಬೇಕು. ಅದನ್ನು ಬಿಟ್ಟು ಇತಿಹಾಸವನ್ನು ತಿರುಚಿ ಹೇಳುವುದರಲ್ಲಿ ಅರ್ಥವಿಲ್ಲ. ಬಿಜೆಪಿ ಹಾಗೂ ಮೋದಿ ಅವರಿಗೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದು ಚಟವಾಗಿದೆ. ವಿವಾದ ಸೃಷ್ಟಿಸುವ ಚಟಕ್ಕೆ ಕಾರಣ, ಅವರು ಅವರ ಸರ್ಕಾರದ ಸಾಧನೆ ಹೇಳಿಕೊಳ್ಳಲು ಯಾವುದೇ ವಿಷಯಗಳಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಹೋದರೆ, ಅವರ ವೈಫಲ್ಯಗಳು ಬಹಿರಂಗವಾಗುತ್ತವೆ. ಹೀಗಾಗಿ ಅವರು ಅಪಪ್ರಚಾರದ ಚಟಕ್ಕೆ ಸಿಲುಕಿದ್ದಾರೆ.
ಬಿಜೆಪಿಯವರ ಇತಿಹಾಸ ತೆಗೆದು ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಂಬಿಕೆ ದ್ರೋಹ ಎಸಗಿದ್ದು ಹೊರಬರುತ್ತದೆ.ಅವರ ನಾಯಕರು ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆಯುತ್ತಲೇ ಇದ್ದರು ಎಂಬ ವಿಚಾರ ತಿಳಿಯುತ್ತದೆ. ಹಿಂದೂಮಹಾಸಭಾ ಹಾಗೂ ಮುಸ್ಲೀಂ ಲೀಗ್ ಒಟ್ಟಾಗಿ ಸರ್ಕಾರ ರಚನೆ ಮಾಡಿದ ವಿಚಾರ ಹೊರಬರುತ್ತದೆ. ಅವರು ಸಿದ್ಧರಿದ್ದರೆ ಈ ಬಗ್ಗೆ ಚರ್ಚೆ ಮಾಡಲು ನಾವು ಸಿದ್ಧವಿದ್ದೇವೆ. ನಿನ್ನೆ ಸೋನಿಯಾ ಗಾಂಧಿ ಅವರ ಬಗ್ಗೆ ಆಡಿರುವ ಮಾತುಗಳಿಗೆ ಯಾರಾದರೂ ಕ್ಷಮೆ ಕೇಳಿದ್ದಾರಾ? ಭಾರತದ ಹೊರತಾಗಿ ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ತಮ್ಮದೇ ದೇಶದ ಮಹಾನ್ ನಾಯಕರನ್ನು ಬಾಯಿಗೆ ಬಂದಂತೆ ಬೈಯ್ಯುವುದಿಲ್ಲ. ಅಮೆರಿಕದಲ್ಲಿ ಜಾರ್ಜ್ ವಾಶಿಗ್ಟನ್, ಆಫ್ರಿಕಾದಲ್ಲಿ ಮಂಡೆಲಾ ವಿರುದ್ಧ ಮಾತನಾಡುವುದಿಲ್ಲ. ಆದರೆ ಭಾರತದಲ್ಲಿ 2014ರಿಂದ ನೆಹರೂ, ಗಾಂಧಿ ಅವರ ಬಗ್ಗೆ ಟೀಕೆ ಬರುತ್ತಲೇ ಇವೆ. ಈ ಬಗ್ಗೆ ಬಿಜೆಪಿ ಎಂದಾದರೂ ಕ್ಷಮೆ ಕೇಳಿದ್ದಾರಾ? ಇಂದು ಮೋದಿ ಅವರು ಕ್ಷಮೆ ಕೇಳಬೇಕಿತ್ತು. ಆದರೆ ಕೇಳಿಲ್ಲ. ಅವರು ಹೃದಯಶ್ರೀಮಂತಿಕೆ ತೋರಬೇಕಿದೆ’ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ಅನರ್ಹ ವಿಚಾರವಾಗಿ ಸೂರತ್ ಹೈಕೋರ್ಟ್ ನಲ್ಲಿ ಕಾನೂನು ಹೋರಾಟದ ಬಗ್ಗೆ ಕೇಳಿದಾಗ, ‘ನಮಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇವೆ. ಈ ವ್ಯವಸ್ಥೆಗಳನ್ನು ರಾತ್ರೋರಾತ್ರಿ ನಿರ್ಮಾಣ ಮಾಡಿಲ್ಲ. ಹೀಗಾಗಿ ರಾತ್ರೋರಾತ್ರಿ ಕೆಡವಲು ಸಾಧ್ಯವಿಲ್ಲ. ಏಳೂವರೆ ದಶಕಗಳ ಕಾಲ ಈ ವ್ಯವಸ್ಥೆ ಕಟ್ಟಿ ಬೆಳೆಸಲಾಗಿದೆ. ನಮ್ಮ ಕಾನೂನಪ ಹೋರಾಟ ಮುಂದುವರಿಯಲಿದ್ದು, ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ರಾಹುಲ್ ಗಾಂಧಿ ಅವರು ಬಂಡವಾಳಶಾಹಿಗಳ ಪರವಾದ ನೀತಿಗಳ ವಿರುದ್ಧ ತಮ್ಮ ಹೋರಾಟ ಯಾವುದೇ ರಾಜಿ ಇಲ್ಲದೆ ಮುಂದುವರಿಸಲಿದ್ದಾರೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ, ಖರ್ಗೆ, ಶಿವಕುಮಾರ್ ಅವರು ರಾಜ್ಯಕ್ಕೆ ಮಾರಕ ಎಂಬ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಚುನಾವೆಣೆಯಲ್ಲಿ ಸೋತರೂ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆ. ತಮ್ಮ ರಾಜ್ಯದಲ್ಲಿ ಆಡಳಿತ ನಡೆಸಲು ಸಂಪೂರ್ಣವಾಗಿ ವಿಫಲವಾಗಿರುವ ಅವರು ಈಗ ತಮ್ಮ ರಾಜ್ಯಕ್ಕೆ ಹೋಗಿ 8 ತಿಂಗಳ ಕಾಲ ಅಲ್ಲಿರಲಿ. ನಂತರ ಅವರು ದೇಶದಾದ್ಯಂತ ಎಲ್ಲಿ ಬೇಕಾದರೂ ಪ್ರವಾಸ ಮಾಡಬಹುದು. ಈಗ ಅವರು ತಮ್ಮ ರಾಜ್ಯದ ಬಗ್ಗೆ ಗಮನಹರಿಸಬೇಕಿದ್ದು, ನಂತರ ಆ ರಾಜ್ಯಕ್ಕೆ ಇವರ ಅಗತ್ಯವಿರುವುದಿಲ್ಲ’ ಎಂದು ತಿಳಿಸಿದರು.
ರಮೇಶ್ ಬಾಬು:
ನಿನ್ನೆ ಕೊರಟಗೆರೆಯಲ್ಲಿ ನಮ್ಮ ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಡಾ.ಜಿ. ಪರಮೇಶ್ವರ್ ಅವರ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಅವರು ನಾಮಪತ್ರ ಸಲ್ಲಿಸುವ ವೇಳೆಯೂ ಇದೇ ಪ್ರಯತ್ನ ನಡೆದಿದ್ದು, ಅಂದು ಅವರ ಬದಲಿಗೆ ಮಹಿಳಾ ಪೊಲೀಸ್ ಪೇದೆಗೆ ಕಲ್ಲು ತಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ ವರುಣಾದಲ್ಲೂ ಇಂತಹ ಪ್ರಯತ್ನ ಮಾಡಲಾಗಿದೆ. ಇನ್ನು ಹೊಸಕೋಟೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪತ್ನಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದೂರು ದಾಖಲಿಸಿದೆ. ಅಮಿತ್ ಶಾ ಹೇಳಿಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿಂದೆ ಬಿಜೆಪಿ ಷಡ್ಯಂತ್ರವಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಪಕ್ಷದ ಪದಾಧಿಕಾರಿಗಳಿಗೆ ಪತ್ರ ಬರೆದು ನಿಮ್ಮ ಭಾಗದ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ವಿವರ ಕೇಳಿದ್ದಾರೆ. ಇವೆಲ್ಲವನ್ನು ನೋಡಿದರೆ ಬಿಜೆಪಿ ಷಡ್ಯಂತ್ರ ಮಾಡಿ ರಾಜ್ಯ ಚುನಾವಣಾ ವಿಚಾರಗಳ ಗಮನ ಬೇರೆಡೆ ಸೆಳೆಯಲು ಚಿತಾವಣೆ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ನಾಯಕರು ರಾಜ್ಯ ಚುನಾವಣೆಯಲ್ಲಿ ಅಶಾಂತಿ ಮೂಡಿಸುವ ಕಾರ್ಯ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡುತ್ತೇವೆ. ರಾಜ್ಯದಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಆಯೋಗ ವಿಫಲವಾಗಿದೆ. ರಾಜ್ಯ ಚುನಾವಣೆ ಮುಕ್ತವಾಗಿ ಭಯಮುಕ್ತವಾಗಿ ನಡೆಯಬೇಕು. ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು.