ಸುದ್ದಿಮೂಲ ವಾರ್ತೆ ರಾಯಚೂರು, ನ.22:
ಕಾರ್ಮಿಕರ ಹೋರಾಟದಿಂದ ಪಡೆದ ಅನೇಕ ಕಾರ್ಮಿಕ ಕಾಯ್ದೆೆಗಳನ್ನು ಕೇಂದ್ರ ಸರ್ಕಾರವು ರದ್ದುಪಡಿಸಿ ಕೇವಲ ನಾಲ್ಕು ಸಂಹಿತೆಗಳ ಜಾರಿ ಖಂಡಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಿಲ್ ಆ್ ಟ್ರೇೇಡ್ ಯೂನಿಯನ್ ಪ್ರತಿಭಟನೆ ನಡೆಸಿತು.
ಇಂದು ಟಿಪ್ಪುು ಸುಲ್ತಾಾನ್ ಉದ್ಯಾಾನದ ಮುಂದೆ ಸಂಹಿತೆಗಳ ಪ್ರತಿಗಳ ದಹಿಸಿ ಪ್ರತಿಭಟನೆ ಮೂಲಕ ಎಐಸಿಸಿಟಿಯು ಪದಾಧಿಕಾರಿಗಳು ಆಕ್ರೋೋಶ ವ್ಯಕ್ತಪಡಿಸಿದರು.
ಈಗಾಗಲೇ ಭಾರಿ ಪ್ರತಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದಾಗಲೂ ಕಾರ್ಮಿಕರ ಮನವಿ ಕಾರ್ಮಿಕರ ಹೋರಾಟವನ್ನು ಲೆಕ್ಕಿಿಸದೆ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಕಾರ್ಮಿಕ ವಿರೋಧಿ ಬಿಲ್ಲು ಜಾರಿಗೆ ತರುವುದರ ಮೂಲಕ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆೆಯಿಂದ ಸಿಗಬೇಕಾದ ಎಲ್ಲ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು ಕಾರ್ಮಿಕ ಕುಟುಂಬಗಳನ್ನು ಬೀದಿ ಪಾಲು ಮಾಡುವ ಈ ನಾಲ್ಕು ಕೋಡ್ ಗಳನ್ನು ಜಾರಿಗೆ ತಂದಿದ್ದು ತಕ್ಷಣ ಕೇಂದ್ರ ಸರ್ಕಾರ ಹಿಂಪಪಡೆಯದಿದ್ದಲ್ಲಿ ದೇಶಾದ್ಯಂತ ಕಾರ್ಮಿಕರು ಕಾರ್ಮಿಕ ಸಂಘಟನೆಗಳಿಂದ ಬಹುದೊಡ್ಡ ಹೋರಾಟಕ್ಕೆೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀದಾರ, ಮುಖಂಡರುಗಳಾದ ಜಿಲಾನಿ ಪಾಷಾ, ಜಗದೀಶ, ನಿಸಾರ ಅಹ್ಮದ್, ಭೀಮಣ್ಣ, ಮೊಹಮ್ಮದ್ ಮೂವೀಸ್, ಹನ್ೀ ಅಬಕಾರಿ, ಮಾರಣ್ಣ ಸೇರಿದಂತೆ ಇತರರಿದ್ದರು.

