ಸುದ್ದಿಮೂಲ ವಾರ್ತೆ ಸಿಂಧನೂರು, ೆ.07:
ಹೋರಾಟ, ತ್ಯಾಾಗ-ಬಲಿದಾನದ ಮೂಲಕ ಪಡೆದ 29 ಕಾಯ್ದೆೆಗಳನ್ನು ಬದಲಿಸಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಜೆಸಿಟಿಯು ಹಮ್ಮಿಿಕೊಂಡಿರುವ ರಾಷ್ಟ್ರವ್ಯಾಾಪಿ ಮುಷ್ಕರ ಯಶಸ್ವಿಿಗೊಳಿಸುವಂತೆ ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿ್ಟಿನ್ ಡಿ ರಿಜೋರಿಯೊ ಕರೆ ನೀಡಿದರು.
ಶನಿವಾರ ನಗರದ ಎಪಿಎಂಸಿ ರೈತ ಭವನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಹಾಗೂ ಉದ್ಯೋೋಗ ಖಾತ್ರಿಿ ಯೋಜನೆ ತಿದ್ದುಪಡಿಸಿ ವಿರೋಧಿಸಿ, ರಾಷ್ಟ್ರವ್ಯಾಾಪಿ ಕಾರ್ಮಿಕರ ಮುಷ್ಕರದ ಭಾಗವಾಗಿ ಎಐಸಿಸಿಟಿಯು ಮತ್ತು ಆಯರ್ಲಾ ಜಿಲ್ಲಾಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ರಾಜ್ಯ ಸಹಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಬಂಡವಾಳಿಗರ ಪರವಾಗಿ ಕೆಲಸ ಮಾಡುತ್ತಿಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ೆ.12ರಂದು ನಡೆಯುವ ರಾಷ್ಟ್ರೀಯ ಮುಷ್ಕರದಲ್ಲಿ ಪಾಲ್ಗೊೊಂಡು, ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾಾಧ್ಯಕ್ಷ ಭಾಷುಮಿಯಾ, ತುಂಗಭದ್ರಾಾ ನೀರಾವರಿ ಕಾರ್ಮಿಕರ ಸಂಘದ ಎಂ.ಬಸವರಾಜ, ಎಐಸಿಸಿಟಿಯು ಜಿಲ್ಲಾಾಧ್ಯಕ್ಷ ಅಜೀಜ್ ಜಾಗೀರದಾರ, ಎಐಸಿಸಿಟಿಯು ವಿಜಯ್ ದೊರೈರಾಜು, ಸಿಐಟಿಯು ಅಕ್ಬರ್ಪಾಷಾ, ಶ್ರಮಜೀವಿ ಹಮಾಲರ ಸಂಘದ ಮಾಬುಸಾಬ್ ಬೆಳ್ಳಟ್ಟಿಿ, ಶ್ರಮಜೀವಿ ಹಮಾಲರ ಸಂಘ, ಕೃಷಿ ಕೂಲಿಕಾರ್ಮಿಕರಾದ ಯಲ್ಲಮ್ಮ ಅರಳಹಳ್ಳಿಿ, ಮಹಾದೇವಿ, ಕೃಷಿ ಕೂಲಿ ಕಾರ್ಮಿಕರು, ಆಯರ್ಲಾದ ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಜಿಲ್ಲಾಾ ಪಂಚಾಯಿತಿ ನೌಕರರ ಸಂಘದ ಬಸವರಾಜ ಗಲಗಿನ್ ಇನ್ನಿಿತರರು ಉಪಸ್ಥಿಿತರಿದ್ದರು. ಭಗತ್ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ನಿರೂಪಿಸಿದರು.
ರ್ಯಾಾಲಿ : ಸಮಾವೇಶಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ, ಎಪಿಎಂಸಿ ರೈತ ಭವನದ ವರೆಗೂ ಕಾರ್ಮಿಕರ ಹಾಗೂ ಕೃಷಿ ಕೂಲಿಕಾರರ ಬೃಹತ್ ರ್ಯಾಾಲಿ ನಡೆಯಿತು. ರ್ಯಾಾಲಿಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆೆಗಳ ವಿರುದ್ಧ ಕಾರ್ಮಿಕರು ಘೋಷಣೆ ಕೂಗಿದರು.
ಎಐಸಿಸಿಟಿಯು, ಆಯರ್ಲಾ ಜಿಲ್ಲಾ ಸಮಾವೇಶ ಕಾರ್ಮಿಕ ಸಂಹಿತೆಗಳನ್ನು ಹಿಮ್ಮೆಟ್ಟಿಸಿ :ಕ್ಲಿ್ಟನ್ ಡಿ ರಿಜೋರಿಯೊ

