ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ಉತ್ತರ ಪ್ರದೇಶದ ಉನ್ನಾಾವೋ ಅತ್ಯಾಾಚಾರ ಪ್ರಕರಣದ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ನೀಡಿರುವುದಕ್ಕೆೆ ಎಐಎಂಎಸ್ಎಸ್ ಸಂಘಟನೆ ಆತಂಕ ವ್ಯಕ್ತಪಡಿಸಿದೆ.
2017ರ ಉನ್ನಾಾವೋ ಅತ್ಯಾಾಚಾರ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಶಾಸಕ ಕುಲದೀಪ್ ಸೆಂಗನರ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿ ಆತನಿಗೆ ಜಾಮೀನು ಮಂಜೂರು ಮಾಡಿರುವ ಹಿನ್ನೆೆಲೆಯಲ್ಲಿ, ಸಂತ್ರಸ್ತೆೆ ಮತ್ತು ಆಕೆಯ ಕುಟುಂಬದ ಸುರಕ್ಷತೆಯ ಬಗ್ಗೆೆ ಸಂಘಟನೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ನ್ಯಾಾಯಾಲಯದ ಈ ತೀರ್ಪಿನ ನಂತರ, ಸಹಜವಾಗಿಯೇ ತಮ್ಮ ಪ್ರಾಾಣಕ್ಕೆೆ ಅಪಾಯವಿರಬಹುದೆಂದು ಆತಂಕಗೊಂಡ ಸಂತ್ರಸ್ತೆೆ ಮತ್ತು ಆಕೆಯ ತಾಯಿ ನವದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಪರಿಣಾಮ ಅವರುಗಳನ್ನು ರಸ್ತೆೆಯಲ್ಲಿ ಅಮಾನವೀಯವಾಗಿ ಎಳೆದಾಡಿರುವುದನ್ನು ಖಂಡಿಸಿದ್ದಾಾರೆ.
ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದರೂ, ಸರ್ಕಾರ ಮತ್ತು ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಂಪೂರ್ಣ ರಕ್ಷಣೆ ಮತ್ತು ಭದ್ರತೆ ಖಾತರಿಪಡಿಸಬೇಕು, ಜಾಮೀನು ಷರತ್ತುಗಳ ಯಾವುದೇ ಉಲ್ಲಂಘನೆ ಅಥವಾ ಬೆದರಿಕೆ ತಂತ್ರಗಳನ್ನು ಕಟ್ಟುನಿಟ್ಟಾಾಗಿ ಮತ್ತು ತಕ್ಷಣವೇ ಹತ್ತಿಿಕ್ಕಬೇಕು ಎಂದು ಜಿಲ್ಲಾಾ ಸಮಿತಿ ಕಾರ್ಯದರ್ಶಿ ಸರೋಜಾ ಗೋನವಾರ ಆಗ್ರಹಿಸಿದ್ದಾಾರೆ.

