ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.02:
ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಅರ್ಥೈಸುವ ಪಾರಂಪರಿಕ ಐತಿಹಾಸಿಕ ಸ್ಮಾಾರಕಗಳನ್ನು ಸಂರಕ್ಷಿಸಿದಾಗ ಅವುಗಳ ಮಾಹಿತಿ ಸಿಗಲಿದೆ ಎಂದು ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಾಧ್ಯಾಾಪಕ ಸಯ್ಯದ್ ಅಜಗರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಂಯೋಜಕತ್ವದಲ್ಲಿ ನಡೆದ ಐತಿಹಾಸಿಕ ಸ್ಮಾಾರಕಗಳ ರಕ್ಷಣೆ ಉಪನ್ಯಾಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐತಿಹಾಸಿಕ ಸ್ಮಾಾರಕಗಳು ಪೀಳಿಗೆಗಳ ಕಥೆ ಹೇಳುತ್ತವೆ. ನಾಡಿನ ಚರಿತ್ರೆೆ, ಸಂಸ್ಕೃತಿ, ರಾಜಕೀಯ, ಆರ್ಥಿಕ, ಸಾಮಾಜಿಕ ಅಂಶಗಳನ್ನು ಬಿತ್ತರಿಸುವ ಸ್ಮಾಾರಕಗಳು ಚರಿತ್ರೆೆಯ ಕುರುಹುಗಳಾಗಿವೆ. ಐತಿಹಾಸಿಕ ಸ್ಮಾಾರಕವೆಂದರೆ ನೂರು ವರ್ಷದ ಇತಿಹಾಸ ಹೊಂದಿದ ಮಾನವ ನಿರ್ಮಿತ ಕಟ್ಟಡ. ಇಂತಹ ಅನೇಕ ಸ್ಮಾಾರಕಗಳು ನಮ್ಮ ಕಣ್ಣ ಮುಂದೆಯೇ ನಶಿಸಿ ಹೋಗುತ್ತಿಿವೆ. ಶಾಸನಗಳು, ಮಾಸ್ತಿಿಗಲ್ಲು ವೀರಗಲ್ಲು ದೇವಾಲಯಗಳು, ಕೋಟೆ ಕೊತ್ತಲು ಬುರುಜು ಸೇತುವೆ ಮುಂತಾದವು ನಮ್ಮ ಪರಂಪರೆಯ ದ್ಯೋೋತಕಗಳಾಗಿದ್ದು ಸರ್ಕಾರ ನಾಗರಿಕರು ವಿದ್ಯಾಾರ್ಥಿಗಳು ಐತಿಹಾಸಿಕ ಸ್ಮಾಾರಕ ರಕ್ಷಣೆಗೆ ಪ್ರಾಾಶಸ್ತ್ಯ ನೀಡಬೇಕೆಂದರು.
ಪ್ರಭಾರಿ ಪ್ರಾಾಚಾರ್ಯ ಡಾ. ಸಂಗನಗೌಡ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಉಪನ್ಯಾಾಸಕ ಭೀಮಣ್ಣ ಭಂಡಾರಿ ವಿಭಾಗದ ಮುಖ್ಯಸ್ಥ ಪ್ರೊೊ. ವೀರೇಶ ಮೂಡಲದಿನ್ನಿಿ ಮಾತನಾಡಿದರು. ಉಪನ್ಯಾಾಸಕರಾದ ಪ್ರಲ್ಹಾಾದ ಲಮಾಣಿ ಚನ್ನಪ್ಪ ವಸಸದ ವಿದ್ಯಾಾರ್ಥಿಗಳಿದ್ದರು.
ಮುಂದಿನ ಪೀಳಿಗೆಗೆ ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ಪ್ರಾಶಸ್ತ್ಯ ಸಿಗಲಿ : ಅಜಗರ

