ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಸರ್ಕಾರಿ ಶಾಲೆಗಳಲ್ಲಿ ತರಕಾರಿ ಹಣ್ಣುಗಳ ಸರಬರಾಜು ಜವಾಬ್ದಾಾರಿ ಸ್ವ-ಸಹಾಯ ಗುಂಪುಗಳಿಗೆ ನೀಡುವುದನ್ನು ಕೈಬಿಡಲು ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಪ್ರತಿಭಟನೆ ನಡೆಸಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಸಿಐಟಿಯು ಸಂಯೋಜಿತ ಬಿಸಿಯೂಟ ನೌಕರರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಾ ಪಂಚಾಯಿತಿ ಸ್ಥಾಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಮಧ್ಯಾಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿ ಸುತ್ತಿಿರುವ ಅಕ್ಷರ ದಾಸೋಹ ನೌಕರರು ಶಾಲಾ ಮಕ್ಕಳಿಗೆ ಸಮರ್ಥವಾಗಿ ಕಾರ್ಯ ನಿರ್ವಸುತ್ತಿಿದ್ದಾಾರೆ. ಮುಖ್ಯ ಅಡುಗೆಯವರು ಮಧ್ಯಾಾಹ್ನದ ಅಡುಗೆಗೆ ಬೇಕಾದ ತರಕಾರಿ ದಿನವಹಿ ಹಾಜರಾತಿ ಪ್ರಕಾರ ತಾವೇ ಖರೀದಿಸಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಿದ್ದಾಾರೆ. ಹಾಗಾಗಿ, ತರಕಾರಿ ಹಣ್ಣುಗಳ ಸರಬರಾಜು ಸ್ವ-ಸಹಾಯ ಗುಂಪುಗಳಿಗೆ ಕೊಡುವ ಅಗತ್ಯವಿಲ್ಲ ಎಂದು ಆಗ್ರಹಿಸಿದರು.
ಜಿಲ್ಲೆೆಯ ಎಲ್ಲಾಾ ಶಾಲೆಗಳಲ್ಲಿ ಮೊದಲಿನಿಂದಲೂ ಎಸ್ಡಿಎಂಸಿ ಖಾತೆಯಿಂದ ಬಿಸಿಯೂಟದ ಹಣ ಪಡೆಯುತ್ತಿಿರುವುದು ನಡೆಯುತ್ತ ಬಂದಿದೆ. ಆದರೆ ಬಿಸಿಯೂಟ ನೌಕರರ ಸಾಮರ್ಥ್ಯ ಮತ್ತು ಅವರ ಕಾಳಜಿಯನ್ನು ಪರಿಗಣಿಸದೇ ಜಿಲ್ಲಾಾ ಪಂಚಾಯತಿ ತರಕಾರಿ ಹಣ್ಣುಗಳ ಸರಬರಾಜನ್ನು ಸ್ವ-ಸಹಾಯ ಗುಂಪುಗಳಿಗೆ ಕೊಡುವ ಮೂಲಕ ಬಿಸಿಯೂಟ ನೌಕರರಿಗೆ ಅನ್ಯಾಾಯವೆಸಗುತ್ತಿಿದೆ ಎಂದು ಖಂಡಿಸಿದರು.
ಬಿಸಿಯೂಟ ಯೋಜನೆಯ ಯಾವುದೇ ಮಾಹಿತಿ ಇಲ್ಲದೇ ಸ್ವ-ಸಹಾಯ ಗುಂಪುಗಳಿಗೆ ಸರಬರಾಜು ಪರವಾನಿಗೆ ನೀಡುವ ಜಿಲ್ಲಾಾ ಪಂಚಾಯತಿ ತೀರ್ಮಾನ ಅವೈಜ್ಞಾಾನಿಕವಾಗಿದೆ. ಕಳೆದ 24 ವರ್ಷಗಳಿಂದ ಅತೀ ಕಡಿಮೆ ಸಂಬಳಕ್ಕೆೆ ಹೆಚ್ಚು ಕೆಲಸ ಮಾಡುವ ಬಿಸಿಯೂಟ ನೌಕರರ ಶ್ರಮ ಪರಿಗಣಿಸಬೇಕು, ಯೋಜನೆಯನ್ನು ಹಂತ ಹಂತವಾಗಿ ಖಾಸಗಿ ಅವರಿಗೆ ಕೊಡುವ ಹುನ್ನಾಾರದ ಭಾಗ ಎಂದು ದೂರಿದರು.
ಆದ್ದರಿಂದ ಈ ನಿರ್ಧಾರವನ್ನು ಕೂಡಲೇ ಕೈಬಿಡಲು ಆಗ್ರಹಿಸಿದರು. ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ಎಲ್ಲ ತಾಲೂಕ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷೆೆ ರೇಣುಕಮ್ಮಘಿ, ಕಾರ್ಯದರ್ಶಿ ಮರಿಯಮ್ಮಘಿ, ಮಹ್ಮದ್ ಹನ್ೀ,ಕಲ್ಯಾಾಣಮ್ಮಘಿ, ವಿಶಾಲಕ್ಷಮ್ಮಘಿ, ಹುಲಿಗೆಮ್ಮಘಿ, ಅಕ್ಕಮಹಾದೇವಿ, ನಾಗಮ್ಮಘಿ, ಶ್ರೀಲೇಖ, ತೆರೆಸಾ, ಹುಸೇನ್ ಗಂಗುರೇಖ, ಸಿದ್ದಮ್ಮಘಿ, ಶೆನಜಾ ಬೇಗಂ, ಮಿನಾಕ್ಷಿಿಘಿ, ಶರಣಮ್ಮಘಿ, ಸಿಐಟಿಯು ಅಧ್ಯಕ್ಷೆೆ ಎಚ್.ಪದ್ಮಾಾಘಿ, ಪ್ರಘಿ.ಕಾರ್ಯದರ್ಶಿ ಶರಣಬಸವ ಇತರರು ಭಾಗವಹಿಸಿದ್ದರು.
ಅಕ್ಷರ ದಾಸೋಹ ಬಿಸಿಯೂಟ ನೌಕರರ ಪ್ರತಿಭಟನೆ ಸರ್ಕಾರಿ ಶಾಲೆಗಳಿಗೆ ತರಕಾರಿ, ಹಣ್ಣು ಪೂರೈಕೆ ಸ್ವಸಹಾಯ ಗುಂಪುಗಳಿಗೆ ನೀಡಲು ವಿರೋಧ

