ಸುದ್ದಿಮೂಲ
ಆನೇಕಲ್, ಜೂ 14 : ರಾಜಲಾಂಛನ ಸಂಸ್ಥೆ ತೆಲಗರಹಳ್ಳಿ ಗಣೇಶ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಎಲ್ .ವೈ.ರಾಜೇಶ್ ಮಾರ್ಗದರ್ಶನದಲ್ಲಿ 21ದಿನಗಳ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ತರಬೇತಿ ಕಾರ್ಯಗಾರ ನಡೆಯಿತು.
ಆನೇಕಲ್ ತಾಲ್ಲೂಕಿನಾದ್ಯಂತ ಹಲವಾರು ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಉಚಿತವಾಗಿ ಟ್ಯುಷನ್ ಸೌಲಭ್ಯ ನೀಡಲಾಯಿತು. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ನುರಿತ ಶಿಕ್ಷಕರಿಂದ ಉತ್ತಮ ತರಬೇತಿ ನೀಡಲಾಯಿತು.
ಬಂಡೆಪಾಳ್ಯ ಪೋಲಿಸ್ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್, ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಎಷ್ಟು ಮುಖ್ಯವೋ, ಫೇಲಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಅಷ್ಟೇ ಮುಖ್ಯ. ಸಂಘ ಸಂಸ್ಥೆಗಳು ಸ್ವಲ್ಪ ಜವಾಬ್ದಾರಿ ತೆಗೆದುಕೊಂಡು ತರಬೇತಿ ನೀಡಿದರೆ ಮಕ್ಕಳು ಉತ್ತಮ ಭವಿಷ್ಯ ಕಂಡುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಉಚಿತ ತರಬೇತಿಗೆ ಸಹಕರಿಸಿದ ನುರಿತ ಶಿಕ್ಷಕರಾದ ನಿವೃತ್ತ ಶಿಕ್ಷಕರಾದ ಶ್ರೀನಿವಾಸ್, ಮಾಯಸಂದ್ರ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್, ಸರಸ್ವತಿ ವಿದ್ಯಾ ಮಂದಿರ ಶಾಲೆಯ ಲಲಿತ, ರವಿಚಂದ್ರ., ಸಬ್ಮಂಗಲ ಶಾಲೆಯ ಮಹದೇವಪ್ಪ, ಆನೇಕಲ್ ಪಬ್ಲಿಕ್ ಶಾಲೆಯ ನಾಗವೇಣಿ ಅವರುಗಳಿಗೆ ರಾಜಲಾಂಛನ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಲಾಂಛನ ಕೇಂದ್ರ ಘಟಕದ ಖಜಾಂಚಿ ದಿವ್ಯ ಗೋಪಾಲಕೃಷ್ಣ, ಮಹೇಶ್, ಹೇಮ ನಿರಂಜನ್, ಚೇತನ್, ಯುವ ತಂಡ ಶೀತಲ್, ರಾಜಲಾಂಛನ ಆನೇಕಲ್ ಘಟಕದ ಅಧ್ಯಕ್ಷರಾದ ಜಿ.ಸೋಮಶೇಖರ್, ಜಿಗಣಿ ಘಟಕದ ಅಧ್ಯಕ್ಷರಾದ ತೆಲಗರಹಳ್ಳಿ ಗಣೇಶ್ ಸೇರಿದಂತೆ ಹಲವು ಉಪಸ್ಥಿತರಿದ್ದರು.