ಸುದ್ದಿಮೂಲ ವಾರ್ತೆ ಅಹಮದಾಬಾದ್, ಅ.16:
ಗುಜರಾತ್ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಾಗಿದ್ದು, ಭೂಪೇಂದ್ರ ಪಟೇಲ್ ಮಂತ್ರಿಿಮಂಡಲದ ಎಲ್ಲಾ 16 ಸಂಪುಟ ದರ್ಜೆ ಸಚಿವರುಗಳು ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ.
ಹಾಲಿ ಮುಖ್ಯಮಂತ್ರಿಿ ಭೂಪೇಂದ್ರ ಪಾಟೀಲ್ ಹೊರತುಪಡಿಸಿ ಸಂಪುಟದ ಉಳಿದೆಲ್ಲಾ ಸದಸ್ಯರು ತಮ್ಮ ಸಚಿವಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದಾರೆ. ನೂತನ ಸಚಿವರ ಪದಗ್ರಹಣ ಕಾರ್ಯಕ್ರಮವು ಶುಕ್ರವಾರ ಬೆಳಗ್ಗೆೆ 11 ಗಂಟೆಗೆ ನಿಗದಿಯಾಗಿದೆ.
ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದ್ದು, ಹಾಲಿ ಸಚಿವರಾಗಿದ್ದವರ ಪೈಕಿ 6-7 ಸಚಿವರನ್ನು ಮಾತ್ರ ಮರಳಿ ಸಂಪುಟಕ್ಕೆೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲಾ ಬಿಜೆಪಿ ಶಾಸಕರು ಮತ್ತು ಸಚಿವರು ಅಹಮದಾಬಾದ್ನಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದ್ದು, ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎಂಬುದನ್ನು ಇಂದು ಕಾದು ನೋಡಬೇಕು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಾಧ್ಯಕ್ಷ ಜೆ.ಪಿ. ನಡ್ಡಾಾ ಅವರು ಗುರುವಾರ ರಾತ್ರಿಿ ನವದೆಹಲಿಯಿಂದ ಅಮಹದಾಬಾದ್ಗೆ ಪ್ರಯಾಣ ಬೆಳೆಸಿದ್ದು, ಹೊಸದಾಗಿ ಸಚಿವಾಕಾಂಕ್ಷಿಗಳು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.
ಹೊಸ ಮುಖಗಳಲ್ಲಿ ಕಾಂಗ್ರೆೆಸ್ನಿಂದ ಬಂದಿರುವ ಅರ್ಜುನ್ ಮೋಧ್ವಾಾಡಿಯಾ, ಅಲ್ಪೇಶ್ ಠಾಕೂರ್, ಸಿಜೆ ಚಾವ್ಡಾಾ ಮತ್ತು ಹಾರ್ದಿಕ್ ಪಟೇಲ್ ಅವರಿಗೆ ಅವಕಾಶ ಸಿಗಬಹುದು. ಸೌರಾಷ್ಟ್ರದ ಜಯೇಶ್ ರಾಡಾಡಿಯಾ ಮತ್ತು ಜಿತು ವಘಾನಿ ಅವರಿಗೆ ಸಂಪುಟ ದರ್ಜೆ ಸ್ಥಾಾನಗಳು ಖಚಿತವಾಗಿದೆ. ಉತ್ತರ ಗುಜರಾತ್ನ ಪಾಟಿದಾರ್ಗಳು ಮತ್ತು ಠಾಕೂರ್ಸಮುದಾಯಕ್ಕೆೆ ಅವಕಾಶ ನೀಡುವ ಸಾಧ್ಯತೆಗಳಿವೆ.