ಸುದ್ದಿಮೂಲ ವಾರ್ತೆ ರಾಯಚೂರು, ೆ.04:
ೆ.5ರಿಂದ ಮೂರು ದಿನ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಭಾಗಿಯಾಗಲು ಕಾರ್ಮಿಕರಿಗೆ ಬೆಳಿಗ್ಗೆೆ ಹಾಗೂ ಸಂಜೆ ಮುಂಚಿತವಾಗಿ ಕೆಲದಿಂದ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಾಡಳಿತ ಸಲಹೆ ಮಾಡಿದೆ.
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆೆಗಳು ಹಾಗೂ ಇತರೆ ಸಂಸ್ಥೆೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮುಂಚಿತವಾಗಿ ಕೆಲಸದಿಂದ ಬಿಟ್ಟು ಅನುಕೂಲ ಮಾಡಿ ತಮ್ಮ ಕುಟುಂಬದ ಸಮೇತ ಭಾಗವಹಿಸಲು ಅನುಕೂಲ ಮಾಡಿಕೊಡಬೇಕೆಂದು ಸಂಘಟನೆ, ಕಾರ್ಮಿಕರು ಕೋರಿದ್ದರಿಂದ ಮೂರು ದಿನ ಬೆಳಿಗ್ಗೆೆ, ಒಂದು ಗಂಟೆ ಮುಂಚೆ ಕೆಲಸದಿಂದ ತೆರಳಲು ಅವಕಾಶ ಮಾಡಿಕೊಡುವ ಮೂಲಕ ಮಾಲೀಕರು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

