ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಜಿಲ್ಲೆಯಲ್ಲಿ ಐತಿಹಾಸಿಕ ಮೂರು ದಿನಗಳ ಕಾಲ ಜರುಗಿದ ಜಿಲ್ಲಾ ಉತ್ಸವ ಯಶಸ್ವಿಿಯಾಗಲು ಕಾರಣೀಭೂತರಾದ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಜಿಲ್ಲಾಧಿಕಾರಿಗಳಿಗೆ ನೇತೃತ್ವ ಅಧಿಕಾರಿಗಳ ತಂಡಕ್ಕೆೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ರಂಗಕರ್ಮಿ ಅಲ್ತಾ್ಾ ರಂಗಮಿತ್ರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಿಯನ್ನು ಉದ್ದೇಶಿಸಿ ಮಾತನಾಡಿದಅವರು , 20 ವರ್ಷಗಳ ಬಳಿಕ ನಡೆದ ಜಿಲ್ಲಾ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿಿನ ಅವಕಾಶ ದೊರೆತಿದ್ದು, ಮೂರು ದಿನಗಳ ಕಾಲ ಸಾಂಸ್ಕೃತಿಕ, ಕಲೆ, ಸಾಹಿತ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಯಕ್ರಮಗಳು ನಡೆದಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ. ಅವಕಾಶ ನೀಡಿದ ಜಿಲ್ಲಾಾಧಿಕಾರಿಯಾದಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಿಗೂ ಧನ್ಯವಾದ ಎಂದು ಹೇಳಿದರು. ಸುದ್ದಿಗೋಷ್ಠಿಿಯಲ್ಲಿ ಈರಣ್ಣ, ಶಿವಾನಂದಗೌಡ, ಚಂದ್ರಕಾಂತ ಇದ್ದರು.

