ಎಚ್.ಎಂ. ಮಹೇಂದ್ರ ಕುಮಾರ್ ಬಳ್ಳಾರಿ, ಜ.04:
ಶಾಂತಿ ಪ್ರಿಿಯ, ಸೌಹಾರ್ದ ಬಳ್ಳಾಾರಿ ನಗರದ ಜನತೆ ಜನವರಿ 1 ರ ಸಂಜೆ ನಡೆದ ಬ್ಯಾಾನರ್ ಗಲಭೆಯ ನಂತರ ‘ಪರ್ಯಾಯ’ ನಾಯಕತ್ವದ ಕಡೆಗೆ ಮತದಾರರು ಚರ್ಚೆ ಪ್ರಾಾರಂಭಿಸಿದ್ದಾಾರೆ. ಕಾಂಗ್ರೆೆಸ್, ಬಿಜೆಪಿ, ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ಹುಡುಕಾಟವನ್ನು ಮತದಾರರೇ ಪ್ರಾಾರಂಭಿಸಿದ್ದಾಾರೆ.
1992 ರಲ್ಲಿ ಬಾಬ್ರಿಿ ಮಸೀದ್ ಧ್ವಂಸ ಆದ ನಂತರ, ದೇಶಾದ್ಯಂತ ಹಿಂದೂ – ಮುಸ್ಲಿಿಂ ಗಲಭೆ ನಡೆದಿತ್ತು. ಆದರೆ, ಬಳ್ಳಾಾರಿಯಲ್ಲಿ ಚಿಕ್ಕ ಗಲಭೆಯೂ ವರದಿಯಾಗಿರಲಿಲ್ಲ. ಆಗ, ಭಾರತ ಸರ್ಕಾರವು ಬಳ್ಳಾಾರಿಯ ಆಗಿನ ನಗರಸಭೆಯ ಅಧ್ಯಕ್ಷರಾಗಿದ್ದ ಎಂ. ದಿವಾಕರಬಾಬು ಅವರನ್ನು ಆಹ್ವಾಾನಿಸಿ, ‘ರಾಜೀವ್ ಗಾಂಧಿ ಶಾಂತಿ’ ಪ್ರಶಸ್ತಿಿಯನ್ನು ಪ್ರದಾನ ಮಾಡಿತ್ತು. ಆ ನಂತರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ ಅಭ್ಯರ್ಥಿ ಆಗುವ ವಿಶ್ವಾಾಸದಿಂದ ಈ ಪ್ರಶಸ್ತಿಿಯನ್ನು ಕ್ಷೇತ್ರದ ಎಲ್ಲಾಾ ವಾರ್ಡ್ಗಳು, ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ಮಾಡಿ, ಮತದಾರರನ್ನು ತಲುಪಲು ವಿಶ್ವಪ್ರಯತ್ನ ಮಾಡಿದ್ದರು.
ಈಗ, ಇದೆಲ್ಲಾಾ ಇತಿಹಾಸ. ಇಂಥಹಾ ಶಾಂತಿ ಪ್ರಿಿಯರ, ಸೌಹಾರ್ದಯುತರ ಬಳ್ಳಾಾರಿ ನಗರದಲ್ಲಿ ಜನವರಿ 1ರ ಗುರುವಾರ ಸಂಜೆ ನಡೆದ ಬ್ಯಾಾನರ್ ಕಟ್ಟುವ ಗಲಭೆಯಲ್ಲಿ ಓರ್ವ ಯುವಕ ಮೃತಪಟ್ಟ ಕಾರಣ ಜನ ಸಾಮಾನ್ಯರಲ್ಲಿ ಭಯ ಭೀತಿಯ ವಾತಾವರಣ ನಿರ್ಮಾಣವಾಗಿ ತೀವ್ರ ಆತಂಕ ಮೂಡಿದೆ. ಕಾರಣ ಕ್ಷೇತ್ರದ ಶಾಂತಿ ಪ್ರಿಿಯರು, ಸೌಹಾರ್ದತೆಯ ಪ್ರಿಿಯರು
ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳಿಗೆ ‘ಪರ್ಯಾಯ’ ನಾಯಕತ್ವಕ್ಕೆೆ ಆಸಕ್ತಿಿ ತೋರುತ್ತಿಿರುವುದು ವಿಶೇಷವಾಗಿದೆ.
ಎಂ. ದಿವಾಕರಬಾಬು ಅವರು ಶಾಸಕರಾಗಿ, ರಾಜ್ಯಮಟ್ಟದ ಸಚಿವರಾಗಿ ಉತ್ತಮ ಆಡಳಿತ ನೀಡಿದ್ದರೂ ಕಾಂಗ್ರೆೆಸ್ ಪಕ್ಷದಲ್ಲಿರುವ ಆಂತರಿಕ ಕಚ್ಚಾಾಟ, ವ್ಯಕ್ತಿಿ ಪ್ರತಿಷ್ಠೆೆ ಮತ್ತು ಇನ್ನಿಿತರೆ ಕಾರಣಗಳಿಗಾಗಿ ಪಕ್ಷದಲ್ಲಿಯೇ ನೇಪಥ್ಯಕ್ಕೆೆ ಸರಿದರು. ಅಷ್ಟರಲ್ಲಿಯೇ, ಬಿಜೆಪಿಯು ರಾಜ್ಯದಲ್ಲಿ ಪ್ರಭಾವಿಯಾಗಿ ಬೆಳೆದು ಜಿ. ಜನಾರ್ಧನರೆಡ್ಡಿಿ, ಜಿ. ಸೋಮಶೇಖರರೆಡ್ಡಿಿ, ಬಿ.ಶ್ರೀರಾಮುಲು ಮತ್ತು ಜಿ.ಕರುಣಾಕರರೆಡ್ಡಿಿ ಅವರು ರಾಜಕೀಯವಾಗಿ ಮುಂಪಕ್ತಿಿಗೆ ಸೇರಿದ್ದರು.
ಸಹಜವಾಗಿಯೇ ಮತದಾರರು ಹೊಸ ನಾಯಕತ್ವಕ್ಕೆೆ ಹಾಗೂ ಬಿಜೆಪಿಗೆ ಮನಸೋತರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆೆ ಬಂತು. ಆಗಲೂ, ಬಳ್ಳಾಾರಿ ನಗರದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯ ದಿನಗಳನ್ನು ಜನತೆ ಕಂಡರು. ಈ ಮಧ್ಯೆೆ ಗಣಿ ಹಗರಣವು ದಶಕಗಳ ಕಾಲ ಬಳ್ಳಾಾರಿ ನಗರ ಮತ್ತು ಜಿಲ್ಲೆೆಯನ್ನು ಬಾಧಿಸಿತು. ಸಾಕಷ್ಟು ಏರುಪೇರುಗಳಾದವು.
ಈ ಮಧ್ಯೆೆ, ಬಳ್ಳಾಾರಿ ನಗರಸಭೆಯ ಕೊನೆಯ ಅಧ್ಯಕ್ಷರಾಗಿ, ಬಳ್ಳಾಾರಿ ಮಹಾನಗರ ಪಾಲಿಕೆಯ ಪ್ರಪ್ರಥಮ ಮೇಯರ್ ಆಗಿದ್ದ ಜಿ. ಸೋಮಶೇಖರರೆಡ್ಡಿಿ ಅವರು ಪ್ರತಿನಿತ್ಯವೂ ನಗರಾದ್ಯಂತ ಸಂಚರಿಸಿ, ಉತ್ತಮವಾದ ಜನಸೇವಕರಾಗಿ, ಜನಪ್ರಿಿಯ ಜನಪ್ರತಿನಿಧಿಯಾಗಿ ನಿರಾಯಾಸವಾಗಿ ಶಾಸಕರಾದರು. ಆ ನಂತರ, ಕೆಎಂಎ್ನ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ರಾಜ್ಯಾಾದ್ಯಂತ ಮನೆ ಮಾತಾದರು. ಜಿ. ಸೋಮಶೇಖರರೆಡ್ಡಿಿ ಅವರಿಗೂ ಗಣಿಧೂಳಿನ ಕಳಂಕ ತಟ್ಟಿಿದರೂ, ನಿತ್ಯ ನಸುಕಿನಲ್ಲಿ ವಾರ್ಡ್ಗಳ ಸಂಚಾರ, ರಸ್ತೆೆ, ಒಳಚರಂಡಿ, ಬೀದಿ ದೀಪ, ನಿವೇಶನಗಳು, ಬಡವರು – ದಲಿತರ ಮತ್ತು ಆರೋಗ್ಯ ಸಮಸ್ಯೆೆಗಳಿಗೆ ಸ್ಪಂದಿಸುತ್ತಲೇ ಅಭಿವೃದ್ಧಿಿಗೆ ಆದ್ಯತೆ ನೀಡಿದ್ದರು. ಒಂದರ್ಥದಲ್ಲಿ ಪ್ರತಿಸ್ಪರ್ಧಿಯೇ ಇರಲಿಲ್ಲ.
ಆದರೆ, ಕಾಲ ಕ್ರಮೇಣ ರಾಜಕೀಯದಲ್ಲಿಯ ಏಳುಬೀಳುಗಳ ಕಾರಣ ಜಿ. ಸೋಮಶೇಖರರೆಡ್ಡಿಿ ಅವರು ಕಳೆದ ಚುನಾವಣೆಯಲ್ಲಿ ನಿರೀಕ್ಷಿತ ಲಿತಾಂಶ ಪಡೆಯಲಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ‘ಪಂಚ ಗ್ಯಾಾರೆಂಟಿ’ಗಳು ರಾಜ್ಯಾಾದ್ಯಂತ ಮುಳುವಾಗಿದ್ದರೂ, ಬಳ್ಳಾಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾಾರೆಂಟಿಗಳ ಜೊತೆಯಲ್ಲಿ ಕುಟುಂಬ ರಾಜಕಾರಣದ ಉತ್ಸಾಾಹಗಳು ಜಿ. ಸೋಮಶೇಖರರೆಡ್ಡಿಿ ಗೆಲುವಿಗೆ ಅಡ್ಡಗಾಲು ಹಾಕಿದವು.
ಈ ವೇಳಗೆ ಬಳ್ಳಾಾರಿ ನಗರದಲ್ಲಿ ಪಕ್ಷಾತೀತವಾಗಿ – ಜಾತ್ಯಾಾತೀತವಾಗಿ ಯುವನಾಯಕತ್ವದ ಶ್ರೀಮಂತಿಕೆಯ ಜೊತೆಯಲ್ಲಿ ಪ್ರವರ್ಧಮಾನಕ್ಕೆೆ ಬರುತ್ತಿಿದ್ದ ನಾರಾ ಭರತರೆಡ್ಡಿಿ ಅವರು ಸಹಜವಾಗಿಯೇ ಪ್ರಶ್ನಾಾತೀತ ಯುವ ನಾಯಕರಾಗಿ ಜನಪ್ರಿಿಯರಾಗಿದ್ದರು. ಕಾಂಗ್ರೆೆಸ್ ಇವರನ್ನು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಾಗಿ ಕಣಕ್ಕಿಿಳಿಸಿದ ನಂತರ, ವಿರೋಧಿಗಳ ಎದೆಗೂಡಲ್ಲಿ ಆತಂಕ ಮೂಡಿತ್ತು. ಸಹಜವಾಗಿಯೇ ನಾರಾ ಭರತರೆಡ್ಡಿಿ ಶಾಸಕರಾದರು.
ಆದರೆ, ನಾರಾ ಭರತರೆಡ್ಡಿಿ ಅವರು ಶಾಸಕರಾದ ನಂತರ, ಅವರನ್ನು ಹಗಲು – ರಾತ್ರಿಿ ಬೆಂಬಲಿಸಿದ್ದ ಯುವಶಕ್ತಿಿ, ಮತದಾರರು ಮತ್ತು ಜನಸಾಮಾನ್ಯರ ನಿರೀಕ್ಷೆಗಳು ಕ್ರಮೇಣ ಗೊಂದಲಕ್ಕೆೆ ಈಡಾದವು. ಶಾಸಕ ನಾರಾ ಭರತರೆಡ್ಡಿಿ ಅವರ ‘ಅಭಿವೃದ್ಧಿಿ’ ಕನಸನ್ನು ನನಸಾಗಿಸಲು ಕಾಂಗ್ರೆೆಸ್ ಪಕ್ಷ ಬೆಂಬಲ ನೀಡಿದ್ದರೂ, ನಿಧಾನವಾಗಿ ಅವರು ಪಕ್ಷದಲ್ಲಿಯೇ ಒಬ್ಬಂಟಿ ಆಗಿ ತೆರೆಮರೆಯಲ್ಲಿ ವಿರೋಧ ಎದುರಿಸತೊಡಗಿದರು.
ನಾರಾ ಭರತರೆಡ್ಡಿಿ ಅವರ ಉತ್ಸಾಾಹ, ಅಭಿವೃದ್ಧಿಿಯ ಕನಸುಗಳ ವೇಗ ಮತ್ತು ನಾಯಕತ್ವ – ಜನರೊಂದಿಗಿನ ಆಪ್ಯಾಾಯತೆಯ ಅನನುಭವದ ಶ್ರೀಮಂತಿಕೆಯನ್ನು ಬಂಡವಾಳ ಮಾಡಿಕೊಂಡ ಅನೇಕರು ಅವರಿಗೆ ಜೈಕಾರ ಹಾಕುತ್ತ ನಿರಂತರ ಕುಣಿಸುತ್ತ ಅಧಿಕಾರದ ಆವೃತ್ತದಲ್ಲಿ ಬಂಧಿಸಿಟ್ಟರು. ಯುವ ಶಾಸಕರು ವೈಯಕ್ತಿಿಕವಾಗಿ – ಜನಹಿತ ಬಯಸುವವರ ಮಾತಿಗೆ ಕಿವಿ ಕೊಡಲಿಲ್ಲ. ಆಗ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಅವರು ಸಹಜವಾಗಿಯೇ ಜನರ ಮಾತಾದರು.
ಆದರೆ, ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾಾನರ್ ಪ್ರದರ್ಶನಕ್ಕಾಾಗಿ ಜನವರಿ 1ರ ಸಂಜೆ ವಿನಾಕಾರಣ ಗಲಭೆ ನಡೆದ ನಂತರ, ಶಾಂತಿ, ಅಭಿವೃದ್ಧಿಿ ಮತ್ತು ಸಹನೆಯ ಜೀವನ ನಡೆಸುತ್ತಿಿರುವ ನಗರದ ಮತದಾರರು ಬಿಜೆಪಿ ; ಜೆಡಿಎಸ್ – ಕಾಂಗ್ರೆೆಸ್ನಲ್ಲಿಯೇ ಪರ್ಯಾಯ ನಾಯಕತ್ವದ ಹುಡುಕಾಟಕ್ಕೆೆ ಶ್ರೀಕಾರ ಆರಂಭಿಸಿದ್ದಾಾರೆ. ಮತದಾರರು ಆಪೇಕ್ಷಿಸುತ್ತಿಿರುವ
‘ಪರ್ಯಾಯ’ ಪಕ್ಷೇತರರಾದರೂ ಓಕೆ ಎನ್ನುತ್ತಿಿದ್ದಾಾರೆ
ತೀರ ಮುಂಚಿತವಾಗಿ ಈ ವಿಚಾರ ಆರಂಭವಾಗಿದೆ. ಹಾಲಿ – ಮಾಜಿ ಜನಪ್ರತಿನಿಧಿಗಳು ರಾಜಕೀಯ ತಂತ್ರಗಾರಿಕೆ,
ಜನಸೇವೆ, ಜನಸಂಪರ್ಕ ಇನ್ನಿಿತರೆಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. 2 ವರ್ಷದ ಕಾಲಾವಕಾಶವಿದೆ. ನಾಯಕತ್ವವನ್ನು ಮುಂದುವರೆಸಬಹುದಾಗಿದೆ.

