ಅಮರೇಶ ಪತ್ತಾರ ಮಸ್ಕಿ, ಡಿ.08:
ಮಸ್ಕಿಿ ತಾಲ್ಲೂಕನ್ನು ಸಾರ್ವಜನಿಕರಿಗೆ ಅನುಕೂಲ ಆಗಲೆಂದು ಸರ್ಕಾರವು ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಮಸ್ಕಿಿ ಹೊಸ ತಾಲ್ಲೂಕನ್ನು ರಚಿಸಿದೆ. ಆದರೆ, ಅವುಗಳಿಗೆ ಅಗತ್ಯ ಸೌಕರ್ಯ ಕಲ್ಪಿಿಸದೆ ಇರುವುದರಿಂದಾಗಿ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಇಂದಿಗೂ ಹಳೇ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ಮುಂದುವರಿದಿದೆ.
ತಾಲ್ಲೂಕು ರಚನೆಯಿಂದ ತಮಗೆ ಅನುಕೂಲ ಆಗಬಹುದು ಎಂಬ ಅವರ ನಿರೀಕ್ಷೆ ಸಂಪೂರ್ಣವಾಗಿ ಈಡೇರಿಲ್ಲ. ನೆರೆಯ ತಾಲೂಕ ಕಚೇರಿಗಳ ಅವಲಂಬನೆ ತಪ್ಪಿಿಲ್ಲ.
ಜಿಲ್ಲೆಯಲ್ಲಿ ಈ ಹಿಂದೆ 05 ತಾಲ್ಲೂಕುಗಳಿದ್ದವು.07 ವರ್ಷಗಳ ಹಿಂದೆ ಮಸ್ಕಿಿ ತಾಲ್ಲೂಕು ರಚನೆಯಾಯಿತು.ಆದರೆ ಎಲ್ಲ ಅಗತ್ಯ ಇಲಾಖೆಗಳ ಕಚೇರಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.ಈ ಭಾಗದ ಪರಿಸ್ಥಿಿತಿಯು ಇಲ್ಲಿನ ಜನರು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಸುಧಾರಿಸಿಲ್ಲ.
ಹಲವು ವರ್ಷಗಳ ಹೋರಾಟದ ಲವಾಗಿ ಮಸ್ಕಿಿ ಹೊಸ ತಾಲ್ಲೂಕು ಕೇಂದ್ರವಾಗಿ ತಲೆ ಎತ್ತಿಿದೆ. ಆದರೆ, ಸೌಲಭ್ಯ ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತಿಿದೆ’ ಎನ್ನುವ ಆರೋಪ ಸಾರ್ವಜನಿಕರದ್ದು. ಇವುಗಳಿಗಿಂತ ಹಿಂದೆಯೇ ರಚನೆಯಾಗಿರುವ ತಾಲ್ಲೂಕುಗಳಲ್ಲೂ ಅಭಿವೃದ್ಧಿಿಯಲ್ಲಿ ದೊಡ್ಡ ಮಟ್ಟದ ಸಾಧನೆಯೇನೂ ಆಗಿಲ್ಲ.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳು ಸೇರಿದಂತೆ ಹಲವು ಸಂದರ್ಭಗಳಲ್ಲಿ ಸರ್ಕಾರಿ ದಾಖಲೆಗಳಲ್ಲಿ 03 ತಾಲ್ಲೂಕುಗಳನ್ನೂ ಪ್ರತ್ಯೇಕವಾಗಿ ನಮೂದಿಸುತ್ತಿಿಲ್ಲ. ಇಂದಿಗೂ ಅವಿಭಜಿತ ತಾಲ್ಲೂಕುಗಳ ಮಾಹಿತಿಯನ್ನೇ ಕೊಡಲಾಗುತ್ತಿಿದೆ.
ಮಾನ್ವಿಿ,ಸಿಂಧನೂರು ಮತ್ತು ಲಿಂಗಸೂಗೂರ ವಿಭಜಿಸಿ ಮಸ್ಕಿಿ ತಾಲ್ಲೂಕನ್ನು ರಚಿಸಲಾಗಿದೆ.
ಎಲ್ಲಾಾ ಇಲಾಖೆಗಳ ಕಚೇರಿಗಳಿಲ್ಲ!
2018ರಲ್ಲಿ ಅಸ್ತಿಿತ್ವಕ್ಕೆೆ ಬಂದಿರುವ ಮಸ್ಕಿಿ ತಾಲ್ಲೂಕಿನಲ್ಲಿ ಎಲ್ಲಾಾ ಇಲಾಖೆಗಳ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ ಜನರು ಹಳೆಯ ತಾಲೂಕ ಕಚೇರಿ ಕೆಲಸಗಳಿಗಾಗಿ ಹೋಗುವಂತಾಗಿದೆ.
ಉಪನೋಂದಣಿ ಇಲಾಖೆ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ, ಬಿಇಒ ಕಚೇರಿ ತಾಲ್ಲೂಕು ವೈದ್ಯಾಾಧಿಕಾರಿ, ಕೃಷಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಸಹಾಯಕ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಕಚೇರಿ, ಸಮಾಜ ಕಲ್ಯಾಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಾಣ, ಅಲ್ಪಸಂಖ್ಯಾಾತರ ಕಲ್ಯಾಾಣ, ಕೃಷಿ, ತೋಟಗಾರಿಕೆ, ರೇಷ್ಮೆೆ, ನೀರಾವರಿ ಇಲಾಖೆ, ಅಗ್ನಿಿಶಾಮಕ ಠಾಣೆ, ಭೂದಾಖಲೆ ಕಚೇರಿಗಳು ಸೇರಿದಂತೆ ಕೆಲವೇ ಇಲಾಖೆ ಕಛೇರಿಗಳು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿಿವೆ.
ಮಸ್ಕಿ ಹೊಸ ತಾಲ್ಲೂಕಾದರೂ ನೆರೆಯ ತಾಲೂಕ ಕಚೇರಿಗಳ ಅವಲಂಬನೆ ತಪ್ಪಿಲ್ಲ!

