ಸುದ್ದಿಮೂಲ ವಾರ್ತೆ ಬೀದರ್, ಡಿ.22:
ನಗರದ ಮೈಲೂರು ರಸ್ತೆೆಯಲ್ಲಿರುವ ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಳೆಯ ವಿದ್ಯಾಾರ್ಥಿಗಳ ಸಮ್ಮಿಿಲನ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.
ಮೊದಲನೇ ಬ್ಯಾಾಚ್ನಿಂದ 2022ರವರೆಗೆ ವ್ಯಾಾಸಂಗ ಮಾಡಿದ ವಿವಿಧೆಡೆಯ ಸುಮಾರು 400 ಹಳೆಯ ವಿದ್ಯಾಾರ್ಥಿಗಳು ಈ ಸಮ್ಮಿಿಲನದಲ್ಲಿ ಉತ್ಸಾಾಹದಿಂದ ಪಾಲ್ಗೊೊಂಡಿದ್ದರು.
ಹಳೆಯ ಕಾಲೇಜು ದಿನಗಳನ್ನು ಸ್ಮರಿಸಿಕೊಂಡ ವಿದ್ಯಾಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಮುಕ್ತವಾಗಿ ಬಂದು ಸಂಭ್ರಮಿಸಿದರು. ಬಹುದಿನಗಳ ನಂತರ ಮಿತ್ರರನ್ನು ಭೇಟಿ ಮಾಡಿದ ಸಂತಸದ ಭಾವನೆ ವಿವಿಧ ಬ್ಯಾಾಚ್ಗಳ ವಿದ್ಯಾಾರ್ಥಿಗಳಲ್ಲಿ ಮನೆ ಮಾಡಿತು. ಭಾಂಗಡಾ ನೃತ್ಯ, ಸಮೂಹ ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆೆ ವಿಶೇಷ ಕಳೆ ತಂದುಕೊಟ್ಟವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾನಕ ಝಿರಾ ಸಾಹೇಬ್ ೌಂಡೇಶನ್ ಅಧ್ಯಕ್ಷ ಡಾ. ಬಲಬಥರ ಸಿಂಗ್ ವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗುರುನಾನಕ ಶಿಕ್ಷಣ ಸಂಸ್ಥೆೆಯ ಉಪಾಧ್ಯಕ್ಷೆ ಡಾ.ರೇಷ್ಮಾಾ ಕೌರ್ ಅವರು, 1980ರಲ್ಲಿ ಸರದಾರ ಜೋಗಾ ಸಿಂಗ್ ಅವರು ಸ್ಥಾಾಪಿಸಿದ ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜು ಜಿಲ್ಲೆಯ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿಿತ ಕಾಲೇಜುಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜು ಗುಣಮಟ್ಟದ ಶಿಕ್ಷಣದ ಮೂಲಕ ಜಿಲ್ಲೆಯ ಮನೆಮಾತಾಗಿದೆ. ಇಲ್ಲಿ ವಿದ್ಯಾಾಭ್ಯಾಾಸ ಮಾಡಿದ ಅನೇಕ ವಿದ್ಯಾಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿಿದ್ದು, ಹಲವರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡು ಉಜ್ವಲ ಭವಿಷ್ಯ ಕಟ್ಟಿಿಕೊಂಡಿದ್ದಾರೆ. ದೇಶ-ವಿದೇಶಗಳಲ್ಲಿ ನೆಲೆಸಿರುವುದು ನಮ್ಮ ಹೆಮ್ಮೆೆಯ ಸಂಗತಿ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸರದಾರ ನಾನಕ ಸಿಂಗ್, ಸರದಾರ ಪ್ರೀತಮ್ ಸಿಂಗ್, ವಿಟಿಯು ಕಾರ್ಯಕಾರಿ ಮಂಡಳಿ ಸದಸ್ಯರಾದ ಎಸ್. ಪವೀತ್ ಸಿಂಗ್, ಸರದಾರ ಪುನೀತ್ ಸಿಂಗ್, ಪ್ರಾಾಂಶುಪಾಲೆ ಡಾ. ವೀಣಾ ಎಸ್. ಸೋರಗಾನ್ವಿಿ, ಡಾ. ಧನಂಜಯ್ ಎಂ., ಆಡಳಿತಾಧಿಕಾರಿ ಆರ್.ಡಿ. ಸಿಂಗ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿಿತರಿದ್ದರು.
ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮಿಲನ

