ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಉಪ್ಪಾಾರ ಅಭಿವೃದ್ಧಿಿ ನಿಗಮ ಮಂಡಳಿಗೆ 25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ನಿಗಮ ಮಂಡಳಿಗೆ ಪದಾಧಿಕಾರಿಗಳ ನೇಮಕ ಮಾಡುವಂತೆ ಶ್ರೀ ಮಹರ್ಷಿ ಭಗೀರಥ ಟ್ರಸ್ಟ್ ಅಧ್ಯಕ್ಷ ಅಮರೇಶ ಆದೋನಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಉಪ್ಪಾಾರ ಸಮಾಜದಲ್ಲಿ ಪುಟ್ಟರಂಗಶೆಟ್ಟಿಿ ಹೊರತು ಪಡಿಸಿ ಯಾವುದೇ ಒಬ್ಬರು ಮುಖ್ಯ ಸ್ಥಾಾನದಲ್ಲಿ ಇಲ್ಲದ ಕಾರಣ ನಿಗಮ ಮಂಡಳಿಗೆ ಸಮುದಾಯದ ಮುಖಂಡರನ್ನೆೆ ಪರಿಗಣಿಸಬೇಕೆಂದು ಆಗ್ರಹಿಸಿದರು.
ರಾಯಚೂರಿನಲ್ಲಿ ಉಪ್ಪಾಾರ ಸಮುದಾಯಕ್ಕೆೆ ನಿವೇಶನಕ್ಕಾಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದು ಅದನ್ನು ಮಂಜೂರು ಮಾಡಬೇಕು. ಕಾಂಗ್ರೆೆಸ್ ಪಕ್ಷಕ್ಕಾಾಗಿ ಜೀವನಪೂರ್ತಿ ದುಡಿದ ನಿಷ್ಠಾಾವಂತ ಕಾರ್ಯಕರ್ತರ ಗುರುತಿಸಿ ಸ್ಥಾಾನಿಕ ಸಂಸ್ಥೆೆಗಳಲ್ಲಿ ನಾಮನಿರ್ದೇಶನ ಮಾಡುವ ಮೂಲಕ ಸಮಾಜಕ್ಕೆೆ ನ್ಯಾಾಯ ಒದಗಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಉಪಾಧ್ಯಕ್ಷ ಆದಿರಾಜ ಆದೋನಿ , ಪ್ರಧಾನ ಕಾರ್ಯದರ್ಶಿಗಳಾದ ಎಂ.ನಾರಾಯಣ , ಗಟ್ಟು ವೆಂಕಟೇಶ್ , ಎಂ.ಸುಭಾಷಚಂದ್ರ ಇತರರಿದ್ದರು.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿ – ಅಮರೇಶ ಆದೋನಿ

