ಸುದ್ದಿಮೂಲ ವಾರ್ತೆ ಸಿಂಧನೂರು, ನ.03:
ದೇಶದ ಶಕ್ತಿಿ ಪೀಠಗಳಲ್ಲಿ ಒಂದಾಗಿರುವ ತಾಲೂಕಿನ ಅಂಬಾದೇವಿ ಜಾತ್ರಾಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಅಂದು ಮುಖ್ಯಮಂತ್ರಿಿಗಳಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ಉದ್ಘಾಾಟನಾ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಬುಧವಾರ ನಗರಸಭೆಯ ಸಭಾಭವನದಲ್ಲಿ ಮುಖ್ಯಮಂತ್ರಿಿಗಳ ಕಾರ್ಯಕ್ರಮದ ಹಿನ್ನಲೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಇಲಾಖೆಗಳಲ್ಲಿ ಸಿದ್ದಗೊಂಡು ಲೋಕಾರ್ಪಣೆ ಮಾಡಬಹುದಾದ ಕೆಲಸಗಳು ಹಾಗೂ ಟೆಂಡರ್ ಹಂತದಲ್ಲಿರುವ ಕಾಮಗಾರಿಗಳ ಪಟ್ಟಿಿಯನ್ನು ವಾರದೊಳಗೆ ತಹಶೀಲ್ದಾಾರರಿಗೆ ನೀಡಬೇಕು. ಕಾರ್ಯಕ್ರಮಕ್ಕೆೆ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಿ, ಕಂದಾಯ ಸಚಿವ ಕೃಷ್ಣಾಾ ಬೈರೇಗೌಡ, ಸಮಾಜ ಕಲ್ಯಾಾಣ ಸಚಿವ ಹೆಚ್.ಸಿ.ಮಹಾದೇವಪ್ಪ, ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಈಗಾಗಲೇ ಆಹ್ವಾಾನಿಸಲಾಗಿದೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ವಿವಿಧ ಇಲಾಖೆಗೆ ಜವಾಬ್ದಾಾರಿಗಳನ್ನು ವಹಿಸಲಾಗಿದೆ. ಇದೇ-8 ರಿಂದ 19 ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, 20 ರಂದು ತಾವು ವಾಪಸ್ಸು ಸಿಂಧನೂರಿಗೆ ಬರುತ್ತೇನೆ. ಅಷ್ಟರೊಳಗೆ ಎಲ್ಲಾಾ ಕೆಲಸಗಳು ಪೂರ್ಣಗೊಂಡಿರಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ತಹಶೀಲ್ದಾಾರ ಅರುಣ ಹೆಚ್.ದೇಸಾಯಿ ಮಾತನಾಡಿ, ಅಂಬಾದೇವಿ ಜಾತ್ರೆೆಯನ್ನು ರಾಷ್ಟ್ರಕ್ಕೆೆ ಪರಿಚಯಿಸುವ ನಿಟ್ಟಿಿನಲ್ಲಿ ಅದ್ದೂರಿಯಾಗಿ ಆಚರಿಸಬೇಕು ಎನ್ನುವದು ಶಾಸಕರ ಆಶಯವಾಗಿದೆ. ಜಾತ್ರಾಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗುತ್ತಿಿದೆ. ಅಂಬಾದೇವಿ ಭಕ್ತಿಿ, ಶಕ್ತಿಿ, ಪರಂಪರೆಯ ದಿವ್ಯ ಸಂಗಮ ಶೀರ್ಷಿಕೆಯಡಿ ಅಂಬಾ ಮಹೋತ್ಸವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿಿದೆ. ಜನೇವರಿ -2 ರಂದು ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಾಗುತ್ತಿಿದೆ. ಸಂಜೆ ಭಕ್ತಿಿ ಸುಧೆ ಸಂಗೀತ ಕಾರ್ಯಕ್ರಮ, ದೇವಿಯ ಆರಾಧನೆ, ನಾಟಕಗಳ ಪ್ರದರ್ಶನ ನಡೆಯಲಿದೆ. 3 ರಂದು ಸಂಜೆ 5ಕ್ಕೆೆ ಅಂಬಾದೇವಿ ರಥೋತ್ಸವ, ಅಂಬಾರಿ ಮೆರವಣಿಗೆ ನಡೆಯಲಿದೆ. ನಂತರ ಭಕ್ತಿಿ ಸ್ವರ ಸಿಂಚನ ಕಾರ್ಯಕ್ರಮ. ಖ್ಯಾಾತಗಾಯಕರು ಭಾಗವಹಿಸಲಿದ್ದಾಾರೆ. ಜೋಗತಿ ನೃತ್ಯ ನಡೆಯಲಿದೆ. ಸ್ಥಳೀಯ ಕಲಾವಿದರಿಂದ ರೂಪಕಗಳು ನಡೆಯಲಿವೆ. 4 ರಂದು ಬೆಳಗ್ಗೆೆ ಕಡುಬಿನ ಕಾಳಗ ನಡೆಯಲಿದೆ. ಸಂಜೆ ಸ್ಥಳೀಯ ಶಾಲಾ-ಕಾಲೇಜುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 5 ರಂದು ಪಲ್ಲಕ್ಕಿಿ ಉತ್ಸವ ನಡೆಯಲಿದೆ. ಸಂಜೆ ಸರಿಗಮಪ ಖ್ಯಾಾತಿಯ ರಮೇಶ ಹಾಗೂ ದ್ಯಾಾಮೇಶ ಕಾರಟಗಿ ಅವರಿಂದ ಕಾರ್ಯಕ್ರಮ. 6 ರಂದು ಮಧ್ಯಾಾಹ್ನ ಕುಂಭೋತ್ಸವ ನಡೆಯಲಿದೆ. ಸಂಜೆ ಸ್ಥಳೀಯ ಕರೋಕೆ ತಂಡಗಳಿಂದ ಗಾಯನ, ನಾರಾಯಣಪ್ಪ ಮಾಡಶಿರವಾರ ಅವರಿಂದ ತತ್ವಪದ ಗಾಯನ ನಡೆಯಲಿವೆ. ಐದು ದಿನದ ಕಾರ್ಯಕ್ರಮವನ್ನು ಯುಟ್ಯೂಬ್ನಲ್ಲಿ ಲೈವ್ ವ್ಯವಸ್ಥೆೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ನೀರಾವರಿ ಇಲಾಖೆಯ ಇಇ ಸತ್ಯನಾರಾಯಣ ಶೆಟ್ಟಿಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಿಗಳಿಂದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ – ಬಾದರ್ಲಿ
ಜನೇವರಿ – 3 ಅದ್ದೂರಿಯಾಗಿ ಅಂಬಾ ಮಹೋತ್ಸವ

