ಸುದ್ದಿಮೂಲ ವಾರ್ತೆ ಸಿಂಧನೂರು, ಜ.21:
ತಾಲ್ಲೂಕಿನ ಸಿದ್ದಪರ್ವತ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾಾನದ ಜಾತ್ರಾಾ ಮಹೋತ್ಸವದ ಕಾಣಿಕೆ ಹುಂಡಿ ಮೊತ್ತದ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, 20 ದಿನದಲ್ಲೇ 43.10 ಲಕ್ಷ ರೂ. ದಾಖಲೆ ಹಣ ಸಂಗ್ರಹವಾಗಿದೆ.
ತಹಸೀಲ್ದಾಾರ ಅರುಣ್ ಹೆಚ್.ದೇಸಾಯಿ ನೇತೃತ್ವದಲ್ಲಿ ಬೆಳಗ್ಗೆೆಯಿಂದ ಸಂಜೆಯವರೆಗೆ ಹುಂಡಿಯಲ್ಲಿ ಸಂಗ್ರಹಣೆಯಾದ ಹಣದ ಎಣಿಕೆ ಕಾರ್ಯ ನಡೆಯಿತು. ಜಾತ್ರಾಾ ಮಹೋತ್ಸವದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಕ್ತಿಿಭಾವದಿಂದ ದೇಣಿಗೆ ಸಲ್ಲಿಸಿದ್ದು, ಇದು ಅಂಬಾದೇವಿ ದೇವಿಯ ಮೇಲಿನ ಅಪಾರ ಭಕ್ತಿಿಯ ಜೊತೆಗೆ ದೇವಾಲಯದ ಅಭಿವೃದ್ಧಿಿ ಕಾರ್ಯಗಳ ಮೇಲಿನ ಜನರ ವಿಶ್ವಾಾಸ ಪ್ರತಿಬಿಂಬಿಸುತ್ತದೆ.
ತಹಸೀಲ್ದಾಾರ ಅರುಣ್ ಹೆಚ್.ದೇಸಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬಾದೇವಿಯ ಕೃಪೆಗೆ ಸಾಕ್ಷಿಯಾದ ದಾಖಲೆಯ ಹಣ ಈ ಬಾರಿ ಸಂಗ್ರಹವಾಗಿದೆ. ಶ್ರೀ ಅಂಬಾದೇವಿ ದೇವಾಲಯದಲ್ಲಿ ಪ್ರಸ್ತುತ ಹೊಸ ದೇವಾಲಯ ನಿರ್ಮಾಣ ಹಾಗೂ ಅಭಿವೃದ್ಧಿಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇದಕ್ಕೆೆ ಭಕ್ತಾಾದಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿರುವುದೇ ಈ ಅಪೂರ್ವ ಹುಂಡಿ ಸಂಗ್ರಹಕ್ಕೆೆ ಪ್ರಮುಖ ಕಾರಣವಾಗಿದೆ. ಹುಂಡಿ ಎಣಿಕೆ ಕಾರ್ಯ ಸಂಪೂರ್ಣ ಪಾರದರ್ಶಕ, ಸರ್ಕಾರದ ನಿಯಮಾನುಸಾರ ಹಾಗೂ ಆಡಳಿತದ ಮೇಲ್ವಿಿಚಾರಣೆಯಲ್ಲಿ ನಡೆಸಲಾಗಿದೆ. ಸಂಗ್ರಹವಾದ ಮೊತ್ತ ದೇವಾಲಯದ ನಿರ್ಮಾಣ, ಅಭಿವೃದ್ಧಿಿ ಕಾರ್ಯಗಳು, ಮೂಲಸೌಕರ್ಯ ಸುಧಾರಣೆ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮರ್ಪಕವಾಗಿ ಬಳಸಲಾಗುವುದು ಎಂದು ಅವರು ತಿಳಿಸಿದ್ದಾಾರೆ.
ಈ ಸಂದರ್ಭದಲ್ಲಿ ದೇವಸ್ಥಾಾನದ ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಅಂಬಾದೇವಿ ಕಾಣಿಕೆ ಹುಂಡಿಯ ಹಣದ ಎಣಿಕೆ 20 ದಿನದಲ್ಲೇ 43.10 ಲಕ್ಷ ರೂ ದಾಖಲೆ ಮೊತ್ತ ಸಂಗ್ರಹ

