ಸುದ್ದಿಮೂಲ ವಾರ್ತೆ ಸಿಂಧನೂರು, ಜ.03:
ತುಂಗಭದ್ರಾಾ, ಕೃಷ್ಣ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ತಮ್ಮ ಸರಕಾರ ಮೊದಲ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಅಂಬಾಮಠದಲ್ಲಿ ಶನಿವಾರ ಸಂಜೆ ಅಂಬಾದೇವಿ ಜಾತ್ರಾಾ ಮಹೋತ್ಸವ, ಜಂಬೂ ಸವಾರಿಗೆ ಚಾಲನೆ ಹಾಗೂ ಸಾಲಗುಂದಾ ಏತ ನೀರಾವರಿ ಯೋಜನೆ ಸೇರಿ ಸುಮಾರು 3 ನೂರು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಾಪನೆ, ಉದ್ಘಾಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲಾಾ ನೀರಾವರಿ ನಿಗಮಗಳ ವ್ಯಾಾಪ್ತಿಿಯಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಮಾಡುವ ಗುರಿ ಸರಕಾರದ್ದಾಾಗಿತ್ತು. ಈಗಾಗಲೇ 30 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಕಲ್ಪಿಿಸಲಾಗಿದೆ. ಉಳಿದಿದ್ದು, ಮುಂದಿನ ಹಂತದಲ್ಲಿ ಮಾಡಲಾಗುತ್ತದೆ ಎಂದರು.
ರಾಜಸ್ಥಾಾನದ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ಒಣಭೂಮಿ ಪ್ರದೇಶವಿದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿಿನ ಒತ್ತು ನೀಡುವ ಮೂಲಕ ಹಸಿರು ವಲಯಗಳಾಗಿ ಅಭಿವೃದ್ದಿ ಮಾಡುವ ಉದ್ದೇಶವಿದೆ. ನೀರಾವರಿಗೆ ಸಂಬಂಧಿಸಿದ ಎಲ್ಲಾಾ ಯೋಜನೆಗಳಿಗೆ ಚುರುಕು ನೀಡಲಾಗಿದೆ. ಅಪ್ಪರ್ ಕೃಷ್ಣ 3ನೇ ಹಂತದ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಮಾಡುತ್ತಿಿಲ್ಲ. 173 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶವಿದೆ. ಕೇಂದ್ರ ಸರಕಾರಕ್ಕೆೆ ತಾವು ಹಾಗೂ ಜಲಸಂಪನ್ಮೂಲ ಸಚಿವರು ಅನೇಕ ಬಾರಿ ಭೇಟಿ ಮಾಡಿದರೂ ಸ್ಪಂದನೆ ಸಿಕ್ಕಿಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮುಜರಾಯಿ, ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿಿ, ರಾಯಚೂರು ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಾಳ, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಬಿ.ಎಂ.ನಾಗರಾಜ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ವಸಂತಕುಮಾರ, ಕ-ಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಪ್ರಾಾದೇಶಿಕ ಆಯುಕ್ತೆೆ ಜಹೀರಾ ನಸೀಮ್ ಜಿಲ್ಲಾಾಧಿಕಾರಿ ನಿತೀಶ ಕೆ, ಟಿಎಪಿಸಿಎಂಎಸ್ನ ಅಧ್ಯಕ್ಷ ಶರಣಪ್ಪ ರಡ್ಡೇರ್, ಪಿಕಾರ್ಡ್ ಬ್ಯಾಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ತಾಲೂಕಾಧ್ಯಕ್ಷ ವೈ.ಅನಿಲಕುಮಾರ, ಅಂಬಾದೇವಿ ದೇವಸ್ಥಾಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸೋಮಲಾಪುರ ಗ್ರಾಾ.ಪಂ.ಅಧ್ಯಕ್ಷೆ ರೇಣುಕಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.
ತುಂಗಭದ್ರಾಾ ಜಲಾಶಯಕ್ಕೆೆ 33 ಗೇಟ್ಗಳ ಅಳವಡಿಕೆ ಭರದಿಂದ ನಡೆದಿದೆ. ಇದರ ಜೊತೆಗೆ 431 ಕೋಟಿ ವೆಚ್ಚದಲ್ಲಿ ಪಾಪಯ್ಯ ಟನಲ್ ಅಗಲೀಕರಣ, ಮುಖ್ಯ ಕಾಲುವೆ ಅಭಿವೃದ್ದಿ ಕೆಲಸಗಳು ನಡೆದಿವೆ. ಎಷ್ಟೇ ಹಣ ಖರ್ಚಾದರೂ ಎಷ್ಟೇ ತೊಂದರೆಯಾದರೂ ಜೂನ್ ಒಳಗೆ ಗೇಟ್ಗಳ ಅಳವಡಿಕೆ ಹಾಗೂ ಕೆಲಸ ಪೂರ್ಣಗೊಳಿಸಿ ಮುಂಗಾರು ಬೆಳೆಗೆ ನೀರು ಕೊಡಲಾಗುವುದು ಎಂದು ಮುಖ್ಯಮಂತ್ರಿಿಗಳು ಭರವಸೆ ನೀಡಿದರು.
ಅಭಿವೃದ್ದಿಗೆ ಹಣದ ಕೊರತೆಯಿಲ್ಲ:
ದೇಶದಲ್ಲಿ ಮಾದರಿಯಾಗಿ ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಗ್ಯಾಾರಂಟಿ ಯೋಜನೆಗಳು ಅನುಷ್ಠಾಾನಗೊಳಿಸಲಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆೆ ಬಂದ ನಂತರ ಗ್ಯಾಾರಂಟಿ ಯೋಜನೆಗಳಿಗೆ 1.12 ಲಕ್ಷ ಕೋಟಿ ಖರ್ಚು ಮಾಡಿದ್ದೇವೆ. ಪ್ರಸಕ್ತ ವರ್ಷ 52 ಸಾವಿರ ಕೋಟಿ ನೀಡುತ್ತೇವೆ. ಗ್ಯಾಾರಂಟಿ ಯೋಜನೆಗಳಿಂದ ಅಭಿವೃದ್ದಿ ಯೋಜನೆಗಳಿಗೆ ಹಣಕಾಸಿನ ತೊಂದರೆಯಾಗಿಲ್ಲ. ನೀರಾವರಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿಿದೆ. ಅಭಿವೃದ್ದಿಯಲ್ಲೂ ಹಿಂದೆ ಬಿದ್ದಿಲ್ಲ. ಗ್ಯಾಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಜನತೆಯ ತಲಾ ಆದಾಯ ಹೆಚ್ಚಳವಾಗಿದ್ದು, ದೇಶದಲ್ಲಿಯೇ ಮೊದಲ ಸ್ಥಾಾನದಲ್ಲಿದೆ. ವಿಪಕ್ಷಗಳು ಗ್ಯಾಾರಂಟಿ ಯೋಜನೆಗಳ ಬಗ್ಗೆೆ ಟೀಕೆಗಳನ್ನು ಮಾಡುತ್ತಾಾ ರಾಜ್ಯದ ಜನತೆಯ ದಾರಿ ತಪ್ಪಿಿಸುತ್ತಿಿವೆ ಎಂದು ಆರೋಪಿಸಿದರು.
ಅಂಬಾದೇವಿ ದರ್ಶನ ಪಡೆದಿದ್ದು ಪುಣ್ಯ:
ಅಭಿವೃದ್ದಿ ಕಾಮಗಾರಿಗಳ ಉದ್ಘಾಾಟನೆ, ಶಂಕುಸ್ಥಾಾಪನೆ ಇದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ನನ್ನನ್ನು ಆಹ್ವಾಾನಿಸಿದರು. ದೇವರ ಕಾರ್ಯಕ್ರಮಗಳಿಗೆ ಬರದೇ ಇರಬಹುದು ಎಂದು ಜಾತ್ರಾಾ ಮಹೋತ್ಸವದ ಬಗ್ಗೆೆ ಹೇಳಿರಲಿಕ್ಕಿಿಲ್ಲ. ಜಾತ್ರಾಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಸೇರಿದ್ದಾಾರೆ. ಅಂಬಾದೇವಿಯ ದರ್ಶನ ಪಡೆದಿರುವದು ನನ್ನ ಪುಣ್ಯ.
ಶಾಸಕ ಹಂಪನಗೌಡ ಬಾದರ್ಲಿ ಕ್ಷೇತ್ರದ ಅಭಿವೃದ್ದಿಗೆ ಪಣ ತೊಟ್ಟಿಿದ್ದಾಾರೆ. ಸಿಂಧನೂರು ತಾಲೂಕಿನ ಸಾಲಗುಂದಾ ಏತ ನೀರಾವರಿ ಯೋಜನೆ, ವಳಬಳ್ಳಾಾರಿ ಹಾಗೂ ಮುಳ್ಳೂರು ಹತ್ತಿಿರ ಬ್ರಿಿಡ್ಜ್ ಕಂ ಬ್ಯಾಾರೇಜ್ ನಿರ್ಮಾಣ ಮಾಡುವ ಮೂಲಕ ಕೊನೆ ಭಾಗದ ರೈತರಿಗೆ ನೀರು ಒದಗಿಸುವ ಮಹತ್ವದ ಯೋಜನೆಗಳನ್ನು ರೂಪಿಸಿದ್ದಾಾರೆ. ತಮ್ಮ ಮೇಲೆ ಹೆಚ್ಚು ಒತ್ತಡ ಹಾಕಿ ಅನುದಾನದಲ್ಲಿ ಸಿಂಹ ಪಾಲು ಪಡೆಯುತ್ತಿಿದ್ದಾಾರೆ. ಅಂಬಾದೇವಿ ದೇವಸ್ಥಾಾನದ ಶಿಲಾಮಂಟಪದ ಕಾಮಗಾರಿ ನಡೆದಿದೆ. 6.3 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ 2 ಕೋಟಿ ಖರ್ಚಾಗಿದೆ. ಉಳಿದ ಹಣ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು.
ಮನರೇಗಾ ಸ್ವರೂಪವೇ ಬದಲು:
ಕೇಂದ್ರ ಸರಕಾರ ಮನರೇಗಾ ಯೋಜನೆಯಡಿ 6 ಸಾವಿರ ಕೋಟಿ ಪ್ರತಿ ವರ್ಷ ಖರ್ಚು ಮಾಡುತ್ತಿಿತ್ತು. ಈಗ ಯೋಜನೆ ಬದಲಿಸಲು ಮುಂದಾಗಿದೆ. ಗಾಂಧೀಜಿ ಹೆಸರು ತೆಗೆದುಹಾಕಿ ವಿಬಿಜಿ ರಾಮ್ಜೀ ಹೆಸರಿನಲ್ಲಿ ಯೋಜನೆ ಸ್ವರೂಪವೇ ಬದಲಿಸಿದೆ. ಇದರಿಂದ ಜನತೆಗೆ ಕೂಲಿ ಕೆಲಸವೇ ಸಿಗುವದಿಲ್ಲ. ಕೂಡಲೇ ಕೇಂದ್ರ ಸರಕಾರ ಹೊಸ ಯೋಜನೆ ಕೈ ಬಿಟ್ಟು ಮೊದಲ ಮನರೇಗಾ ಯೋಜನೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.

