ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 13 : ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದು, ಅಂತಹ ಮಕ್ಕಳಿಗೆ ಸಹಾಯ ಮಾಡಲು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಅಧ್ಯಕ್ಷ ಅಂಬರೀಶ್ ಗೌಡ ತಿಳಿಸಿದರು.
ತಾಲ್ಲೂಕಿನ ಕೋಡಗುರ್ಕಿ ಬಳಿಯ ಕತ್ತಿ ಮಾರಮ್ಮ ದೇಗುಲದ ಆವರಣದಲ್ಲಿ ನೆಡೆದ ಬಿಜೆಪಿ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಮತ್ತು ರಾಷ್ಟ್ರೋತ್ತನ ಪರಿಷತ್ ರಕ್ತ ನಿಧಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಥಲಸ್ಸೆಮಿಯಾದಿಂದ ಬಳಲುವ ಮಕ್ಕಳ ದೇಹದಲ್ಲಿ ಹೊಸದಾಗಿ ರಕ್ತ ಉತ್ಪಾದನೆಯಾಗುವುದಿಲ್ಲ. ಎಲ್ಲರೂ ಅಸ್ಥಿ ಮಜ್ಜೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ. ಅವರ ನೆರವಿಗೆ ಅಳಿಲು ಸೇವೆ ಮಾಡುತ್ತಿದ್ದೇವೆ. ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ಮಾಡಲು ಪ್ರಯತ್ನಿಸಿದಾಗ ಮಾತ್ರವೇ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಸಾಧ್ಯ ರಕ್ತವನ್ನು ಕೃತಕವಾಗಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇನ್ನೂ ಜಗತ್ತು ನೋಡದ ಮಕ್ಕಳಿಗೆ ಇಂತಹ ಕಾಯಿಲೆಗಳು ಬರುವುದು ಕಂಡರೇ ಸಾಕಷ್ಟು ನೋವಾಗುತ್ತದೆ ಬದುಕಿ ಬಾಳಬೇಕಾದವರು ಆಸ್ಪತ್ರೆಯಲ್ಲಿ ನರಳುತ್ತಿರುವುದನ್ನು ತಪ್ಪಿಸಲು ಯುವ ಸಮೂಹವೂ ಸಾಕಷ್ಟು ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿರುವುದು ಅನುಕರಣೀಯ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಜಿ.ಚಂದ್ರಣ್ಣ, ರಾಜ್ಯ ಉಪಾಧ್ಯಕ್ಷ ಸಿ.ವಿ.ಲೋಕೇಶ್ ಗೌಡ, ಬಿಜೆಪಿ ಪಕ್ಷದ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ರಾಜ್ಯ ಸದಸ್ಯರು ವೆಂಕಟೇಶ್,ವಿಧಾನ ಪರಿಷತ್ತು ಸದಸ್ಯರು ರವಿಕುಮಾರ್, ಸಂಚಾಲಕರು ಬ್ಯಾಟಾ ರಂಗೇಗೌಡರು, ಜಿಲ್ಲಾ ಉಪಾಧ್ಯಕ್ಷ ಬೂದಿಗೆರೆ ನಾರಾಯಣಸ್ವಾಮಿ ,ತಾ.ಅಧ್ಯಕ್ಷ ಸುಂದರೇಶ್, ಪ್ರಸಾದ್ , ಮಹಿಳಾ ಕಾರ್ಯಕರ್ತರಾದ ಪುನಿತಾ, ನಯನ, ಸೇರಿದಂತೆ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.