ಹಿರಿಯ ನಟ ಅಂಬರೀಷ್ ಅವರ ಪುತ್ರ ಅಭೀಷೇಕ್ ಹಾಗೂ ಅವಿವಾ ಅವರ ವಿವಾಹ ಇಂದು ಬೆಂಗಳೂರಿನ ಅರಮನೆ ಆವರಣದಲ್ಲಿರುವ ಚಾಮರದಲ್ಲಿ ನೇರವೇರಿತು.
ಬೆಳಗ್ಗೆ 9.30 ರಿಂದ 10.30 ರ ಮುಹೂರ್ತದಲ್ಲಿ ಅಭಿಷೇಕ್, ಅವಿವಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಈ ಮೂಲಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟರಾದ ರಜನೀಕಾಂತ್, ಯಶ್, ಉಪೇಂದ್ರ, ನರೇಶ್, ಪವಿತ್ರಾ ಲೋಕೇಶ್, ಸುಂದರ್ ರಾಜ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ ಹಾಗೂ ಅನಿಲ್ ಕುಂಬ್ಳೆ ಭಾಗವಹಿಸಿದ್ದಾರೆ.
ಜೂನ್ 7ರಂದು ನಗರದ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16 ರಂದು ಮಂಡ್ಯದಲ್ಲಿ ನಡೆಯಲಿರುವ ಬೀಗರೂಟ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ,