ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.07:
ಸಂವಿಧಾನ ಶಿಲ್ಪಿಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಶನಿವಾರ ಸಂಜೆ ದಲಿತ ವಿದ್ಯಾಾರ್ಥಿ ಪರಿಷತ್ನಿಂದ ಬೃಹತ್ ಕ್ಯಾಾಂಡಲ್ ಮಾರ್ಚ್ ನಡೆಯಿತು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕ್ಯಾಾಂಡಲ್ ಮಾರ್ಚ್ಗೆ ಚಾಲನೆ ನೀಡಿದರು. ಮಹಾತ್ಮ ಗಾಂಧೀಜಿ ವೃತ್ತದವರೆಗೆ ಸಹಸ್ರ ಸಂಖ್ಯೆೆಯಲ್ಲಿ ವಿದ್ಯಾಾರ್ಥಿಗಳು, ದಲಿತ ವಿದ್ಯಾಾರ್ಥಿ ಪರಿಷತ್ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮೇಣದಬತ್ತಿಿ ಹಿಡಿದು ಬೃಹತ್ ಕಾಲ್ನಡಿಗೆ ಜಾತಾದ ಮೂಲಕ ಮಹಾತ್ಮ ಗಾಂಧಿ ವೃತಕ್ಕೆೆ ಆಗಮಿಸಿತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಪುಷ್ಪಾಾರ್ಚನೆ ಸಲ್ಲಿಸಿ, ನುಡಿ ನಮನ ಸಲ್ಲಿಸಲಾಯಿತು.
ದಲಿತ ವಿದ್ಯಾಾರ್ಥಿ ಪರಿಷತ್ ಜಿಲ್ಲಾಾ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಅವರ ವಿಚಾರಗಳು, ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದಿಗೂ ಜೀವಂತವಾಗಿವೆ. ಬಾಬ ಸಾಹೇಬರ ಆಶಯದಂತೆ ಇಂದಿನ ಜನತೆ ಸಾಗಿದಾಗ ಅವರು ಸದಾ ನಮ್ಮೊೊಂದಿಗೆ ಇರುತ್ತಾಾರೆ. ವಿಶೇಷವಾಗಿ ವಿದ್ಯಾಾರ್ಥಿ ಯುವ ಜನತೆ ಬಾಬಾ ಸಾಹೇಬರು ನಮ್ಮಿಿಂದ ಅಗಲಿದ ಈ ದಿನದಂದು ಅವರ ಆಶಯ, ಕನಸು, ಗುರಿಗಳನ್ನು, ಅವರ ವಿಚಾರಗಳನ್ನು ಈಡೇರಿಸುವುದರ ಮೂಲಕ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುವ ಮೂಲಕ ಶಪಥ ಮಾಡಬೇಕಿದೆ. ಶಿಕ್ಷಣದಿಂದ ಸಮಸಮಾಜ ನಿರ್ಮಾಣ ಮಾಡುವಲ್ಲಿ ನಾವು ಕೂಡ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಸಂಕಲ್ಪ ಮಾಡಬೇಕಿದೆ ಎಂದರು.
ಸಮಾಜ ಕಲ್ಯಾಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ಮುಖಂಡರಾದ ಎಚ್.ಎನ್.ಬಡಿಗೇರ್, ಉಪನ್ಯಾಾಸಕ ನಾರಾಯಣ ಬಳಗುರ್ಕಿ, ಡಾ.ಹುಸೇನಪ್ಪ ಅಮರಾಪುರ, ಅಮರೇಶ್ ಗಿರಿಜಾಲಿ ಮಾತನಾಡಿದರು. ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕ ಯಂಕಪ್ಪ, ಪಿಡಿಓ ಬಸವರಾಜ್, ಹೆಚ್.ಎ್.ಮಸ್ಕಿಿ, ಬಸವರಾಜ್ ಬಾದರ್ಲಿ, ಡಾ.ಬಸವರಾಜ್ ನಾಯಕ್, ಸಮಿತಿಯ ಜಿಲ್ಲಾಾ ಉಪಾಧ್ಯಕ್ಷ ಚನ್ನಬಸವ ಯಾಪಲಪರ್ವಿ, ತಾಲೂಕಾಧ್ಯಕ್ಷ ದುರುಗೇಶ ಕಲಮಂಗಿ, ನರಸಪ್ಪ ಬಡಿಗೇರ್, ಶರಣಬಸವ ಕಲ್ಮಂಗಿ, ಹನುಮೇಶ ಕರ್ನಿ, ಮಹೇಂದ್ರ, ಉಮೇಶ ಸುಕಾಲಪೇಟೆ, ಹುಸೇನಿ, ಅಶೋಕ ಜಾಲವಾಡಗಿ ಸೇರಿದಂತೆ ದಲಿತ ವಿದ್ಯಾಾರ್ಥಿ ಪರಿಷತ್ ಪದಾಧಿಕಾರಿಗಳು, ಸಮಾಜ ಕಲ್ಯಾಾಣ ಇಲಾಖೆಯ ಅಧಿಕಾರಿಗಳು, ಸಾವಿರಾರು ವಿದ್ಯಾಾರ್ಥಿಗಳು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಅಂಬೇಡ್ಕರ್ರವರ ಪರಿನಿರ್ವಾಣ ದಿನ : ಕ್ಯಾಾಂಡಲ್ ಮಾರ್ಚ್

