ಸುದ್ದಿಮೂಲ ವಾರ್ತೆ
ಹೊಸಕೋಟೆ, ಏ.5: ಅಂಬೇಡ್ಕರ್ ಅವರ ಕನಸನ್ನ ನನಸು ಮಾಡಿದ ಹಸಿರು ಕ್ರಾಂತಿಯ ಹರಿಕಾರಕ ಬಾಬು ಜಗಜೀವನ್ ರಾಮ್ರವರ ಆದರ್ಶಗಳು ದೇಶಕ್ಕೆ ಮಾದರಿ ಎಂದು ನಿತೀಶ್ ಪುರುಷೋತ್ತಮ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 116ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರ ಸಮರ್ಪಿಸಿ ಮಾತನಾಡಿದರು ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಮರ್ಪಿಸಿ ಮಾತನಾಡಿದರು.
ದೇಶ ಕಂಡ ಅಪ್ರತಿಮ ನಾಯಕರಾಗಿ ಹೊರಹೊಮ್ಮಿ ದೇಶಕ್ಕೆ ಕೊಡುಗೆಯಾದ ಬಾಬು ಜಗಜೀವನ್ ರಾಮ್ ರವರ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು ರಾಷ್ಟ್ರದ ಉಪ ಪ್ರಧಾನಿಗಳಾಗಿ ಅಧಿಕಾರವನ್ನು ಹಿಡಿದು ದೇಶದಲ್ಲಿ ಹಸಿರು ಕ್ರಾಂತಿಯನ್ನು ಸೃಷ್ಟಿಸಿ ಭಾರತವನ್ನು ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸೇವೆಯನ್ನು ಸಲ್ಲಿಸಿದರು ಆರಾಧನಾ ಅಕಂಠಯ್ಯ ಎಂದರು.
ಆರಾಧನಾ ಕಮಿಟಿಯ ಸಮಿತಿಯ ಮಾಜಿ ಸದಸ್ಯ ಕೆ ನರಸಿಂಹಯ್ಯ ಮಾತನಾಡಿ, ದೇಶದಲ್ಲಿ ಆರ್ಥಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಕೃಷಿ ಸಚಿವರಾಗಿ ಭಾರತದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಹಸಿರು ಕ್ರಾಂತಿಯನ್ನು ಸೃಷ್ಟಿಸಿದರು ದೇಶದ ಆರ್ಥಿಕ ಮತ್ತು ಕೃಷಿಯ ವಲಯದ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸಿದ ಕೀರ್ತಿ ಬಾಬು ಜಗಜೀವನ ರಾಮ್ ರವರಿಗೆ ಸಲ್ಲುತ್ತದೆ ಕೇಂದ್ರ ಸರ್ಕಾರದಲ್ಲಿ 30 ವರ್ಷಗಳ ಕಾಲ ಸುಧೀರ್ಘ ಜನಪರ ಆಡಳಿತವನ್ನು ನೀಡಿ 4 ಖಾತೆಗಳನ್ನು ನಿರ್ವಹಿಸಿ ಸೇವೆ ಸಲ್ಲಿಸಿದ ಮಹಾ ನಾಯಕರಾಗಿ ಭಾರತಕ್ಕೆ ಕೊಡಿಗೆಯಾದರು. ಇಂಥ ಮಹಾ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶವನ್ನು ಕಟ್ಟುವ
ಕೆಲಸ ಮಾಡಬೇಕಾಗಿದೆ ಎಂದರು.
ಹೊಸಕೋಟೆ ತಾಲೂಕು ಬಿಜೆಪಿ ಎಸ್ಸಿ ಮೋರ್ಚ ತಾಲೂಕು ಅಧ್ಯಕ್ಷ ಕೆ ನಾಗೇಶ್ ಮಾತನಾಡಿ, ಬಾಬು ಜಗಜೀವನ ರಾಮ್ ಅವರು ದಲಿತ ಜನಗಕ್ಕೆ ಶಕ್ತಿಯನ್ನು ತುಂಬಿದವರು. ಸ್ವತಂತ್ರ ಪೂರ್ವದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿ ಭಾರತವನ್ನು ಶಶಕ್ತ ದೇಶವನ್ನಾಗಿ ಕಟ್ಟಲು ಪ್ರಮುಖ ಕಾರಣಕರ್ತರು ಡಾ. ಬಿ.ಆರ್. ಅಂಬೇಡ್ಕರ್ ಅವರು ಮತ್ತು ಬಾಬು ಜಗಜೀವನ್ ರಾಮ್ ದಲಿತ ಸಮುದಾಯದ ಎರಡು ಕಣ್ಣುಗಳಾಗಿದ್ದರು. ರಾಜಕೀಯವಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಿಸಿದ ಹಸಿರು ಕ್ರಾಂತಿಯ ಹರಿಕಾರ ಜೀವನ ರಾಮ್ ದೇಶದ ಅಭಿವೃದ್ಧ ಸಾಧಿಸಲು
ಪ್ರಮುಖ ಕಾರಣಕರ್ತರು ಆಗಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಗಣೇಶ್, ಶೋಭಾ ಶಿವಾನಂದ್, ಕವಿತಾ ಗಂಗರಾಜ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಮಂಜು ಸೂರ್ಯ, ಆರಾಧನಾ ಕಮಿಟಿ ಮಾಜಿ ಸದಸ್ಯರಾದ ಕೆ ನರಸಿಂಹಯ್ಯ, ಎಸ್ ಸಿ ಮೋರ್ಚಾ ಅಧ್ಯಕ್ಷ ಕೆ. ನಾಗೇಶ್, ಮಾಜಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಎಮ್. ಶಿವಪ್ಪ ಮುಂತಾದವರು ಇದ್ದರು.