ಶ್ರೀಹರಿಕೋಟಾ ಡಿ.24:
ಭಾರತೀಯ ಬಾಹ್ಯಾಾಕಾಶ ಸಂಶೋಧನಾ ಸಂಸ್ಥೆೆ (ಇಸ್ರೋೋ) ಅಮೆರಿಕಾದ ಸುಧಾರಿತ ಸಂವನಹ ಉಪಗ್ರಹ ಬೂಬ್ಲರ್ಡ್ ಬ್ಲಾಾಕ್-2 ಅನ್ನು ಯಶಸ್ವಿಿಯಾಗಿ ಉಡಾವಣೆಗೊಳಿಸಿ ಕಕ್ಷೆಗೆ ಸೇರಿಸಿತು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಾಕಾಶ ಕೇಂದ್ರ ಶಾರ್ನಿಂದ ಬುಧವಾರ ಬಾಹುಬಲಿ ರಾಕೆಟ್ ಎಲ್ವಿಎಂ3-ಎಂ ರಾಕೆಟ್ ಮೂಲಕ ಉಡಾವಣೆಯನ್ನು ಯಶಸ್ವಿಿಗೊಳಿಸಿತು.
ಈ ಉಪಗ್ರ 6,100 ಕೆಜಿ ತೂಕ ಇದ್ದು ಉಡಾವಣೆಯನ್ನು ಇಸ್ರೋೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಮೆರಿಕನ್ ಕಂಪನಿ ಎಎಸ್ಟಿಿ ಸ್ಪೇಸ್ ಮೊಬೈಲ್ ಸಹಯೋಗದೊಂದಿಗೆ ನಡೆಸಿತು.
ಇದು ಭಾರತದ ಬಾಹ್ಯಾಾಕಾಶ ಇತಿಹಾಸದಲ್ಲಿ ಅತ್ಯಂತ ಭಾರವಾದ ಉಪಗ್ರಹ ಉಡಾವಣೆಯಾಗಿದೆ. ಬ್ಲೂಬರ್ಡ್-6 ಸುಮಾರು 6,100 ಕಿಲೋಗ್ರಾಾಂಗಳಷ್ಟು ತೂಕ ಇದೆ.
ಇಸ್ರೋೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು, ಇದು ಭಾರತೀಯ ಉಡಾವಣಾ ವಾಹನವು ಕೊಂಡೊಯ್ದ ಅತ್ಯಂತ ಭಾರವಾದ ಉಪಗ್ರಹವಾಗಿದೆ ಎಂದು ಹೇಳಿದ್ದಾರೆ.
ಎಲ್ವಿಎಂ3 ಇದುವರೆಗೆ ಏಳು ಕಾರ್ಯಾಚರಣೆಗಳಲ್ಲಿ ಏಳು ಯಶಸ್ಸನ್ನು ಸಾಧಿಸಿದೆ. ಇದೇ ರಾಕೆಟ್ 2023ರಲ್ಲಿ ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆೆ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿತು. ಇಂದಿನ ಉಡಾವಣೆಯು ಎಲ್ವಿಎಂ3ರ 8ನೇ ಹಾರಾಟವಾಗಿದ್ದು, ಇದು ಸಹ ಯಶಸ್ವಿಿಯಾಗಿದೆ. ಅಷ್ಟೇ ಅಲ್ಲ ಇದು ಮೂರನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
ಬೂಬರ್ಡ್-6 ಉಪಗ್ರಹದ ವಿಶೇಷತೆ:
ಉಪಗ್ರಹ 2200 ಚದರ ಮೀಟರ್ ಬೃಹತ್ ಹಂತ-ಶ್ರೇೇಣಿಯ ಆಂಟೆನಾ ಹೊಂದಿದೆ. ಎಲ್ಇಒ ನಲ್ಲಿ ನಿಯೋಜಿಸಲಾದ ಅತಿದೊಡ್ಡ ಆಂಟೆನಾ ಇದಾಗಿದೆ. ಉಪಗ್ರಹ ಹಿಂದಿನ ಆವೃತ್ತಿಿಗಿಂತ 10 ಎಕ್ಸ್ ಹೆಚ್ಚು ಡೇಟಾ ಸಾಮರ್ಥ್ಯ ತಂತ್ರಜ್ಞಾನದ ಜಗತ್ತಿಿನಲ್ಲಿ ಇದನ್ನು ಅದ್ಭುತವೆಂದು ಪರಿಗಣಿಸಲಾಗಿದೆ.
ನೇರ ಸ್ಮಾಾರ್ಟ್ೆನ್ ಸಂಪರ್ಕ:
ಸ್ಟಾಾರ್ಲಿಂಕ್ ಅಥವಾ ಒನ್ವೆಬ್ಗಿಂತ ಭಿನ್ನವಾಗಿ ಬ್ಲೂಬರ್ಡ್-6 ನ ವಿಶಿಷ್ಟ ವೈಶಿಷ್ಟ್ಯವೆಂದರೆ ಅದು ನೇರವಾಗಿ ಮೊಬೈಲ್ ೆನ್ಗಳಿಗೆ ಸಂಪರ್ಕ ಸಾಧಿಸಬಹುದು. ಯಾವುದೇ ವಿಶೇಷ ಟರ್ಮಿನಲ್ ಅಥವಾ ನೆಲದ ನಿಲ್ದಾಾಣ ಅಗತ್ಯವಿಲ್ಲ. ಇದರರ್ಥ ಟ್ರೂಲಿ ’ಡೈರೆಕ್ಟ್-ಟು-ಮೊಬೈಲ್’ ಸೇವೆ ಒದಗಿಸುವುದೇ ಆಗಿದೆ.
ಭಾರತಕ್ಕೆೆ ದೊಡ್ಡ ವ್ಯಾಾಪಾರ ಅವಕಾಶ
ಈ ಉಡಾವಣೆಯು ಬಹು-ಶತಕೋಟಿ ಡಾಲರ್ ಬಾಹ್ಯಾಾಕಾಶ ಮಾರುಕಟ್ಟೆೆಯಲ್ಲಿ ಇಸ್ರೋೋಗೆ ಹೆಸರು ಲಭ್ಯವಾಗಿದೆ. ಭಾರತ ಈಗ ಸ್ಪೇಸ್ಎಕ್ಸ್, ಏರಿಯನ್ಸ್ಟೇ ಮತ್ತು ರೋಸ್ಕೋೋಸ್ಮೋೋಸ್ನಂತಹ ದೈತ್ಯ ಕಂಪನಿಗಳೊಂದಿಗೆ ಸ್ಪರ್ಧೆ ನಡೆಸುವಷ್ಟು ಬಲ ಹೊಂದಿದೆ.
ಈ ಮಿಷನ್ ಯಶಸ್ವಿಿಯಾಗಿದ್ದು, ಸ್ಮಾಾರ್ಟ್ೆನ್ಗಳು ನೇರವಾಗಿ ಬಾಹ್ಯಾಾಕಾಶಕ್ಕೆೆ ಸಂಪರ್ಕಗೊಳ್ಳುತ್ತವೆ. ವಿಪತ್ತು ನಿರ್ವಹಣೆ ಹೊಸ ವೇಗವನ್ನು ಪಡೆಯುತ್ತದೆ. ವೇಗದ ಇಂಟರ್ನೆಟ್ ದೂರದ ಪ್ರದೇಶಗಳನ್ನು ತಲುಪುತ್ತದೆ. ಮೊಬೈಲ್ ನೆಟ್ವರ್ಕ್ಗಳ ವ್ಯಾಾಖ್ಯಾಾನವು ಸಂಪೂರ್ಣವಾಗಿ ಬದಲಾಗುತ್ತದೆ.
ಬೆಂಗಳೂರು ಮೂಲದ ಬಾಹ್ಯಾಾಕಾಶ ಸಂಸ್ಥೆೆಯು 6,100 ಕಿಲೋ ಗ್ರಾಾಂಗಳಷ್ಟು ತೂಕದ ಸಂವಹನ ಉಪಗ್ರಹ ಎಲ್ವಿಿಎಂ3 ಅನ್ನು ಯಶಸ್ವಿಿಯಾಗಿ ಉಡಾವಣೆ ಮಾಡಿತು. ಇದು ಇತಿಹಾಸದಲ್ಲಿ ಭೂಮಿಯ ಕೆಳ ಕಕ್ಷೆಗೆ ಇರಿಸಲಾದ ಅತ್ಯಂತ ಭಾರವಾದ ಪೇಲೋಡ್ ಆಗಲಿದೆ. ಉಡಾವಣೆಗೆ ಮುಂಚಿತವಾಗಿ, ಇಸ್ರೋೋ ಮುಖ್ಯಸ್ಥ ವಿ. ನಾರಾಯಣನ್ ಡಿಸೆಂಬರ್ 22 ರಂದು ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಾಮಿ ದೇವಸ್ಥಾಾನದಲ್ಲಿ ಪ್ರಾಾರ್ಥನೆ ಸಲ್ಲಿಸಿದ್ದರು.
ಇಸ್ರೋೋದ ಎಲ್ವಿಎಂ3 ಎಂ6 ಮಿಷನ್ ಸತೀಶ್ ಧವನ್ ಬಾಹ್ಯಾಾಕಾಶ ಕೇಂದ್ರದಿಂದ ಯಶಸ್ವಿಿ ಉಡಾವಣೆಯಾಗಿದ್ದು, ಇದು ಅಮೆರಿಕಾ ಕಂಪನಿ ಎಎಸ್ಟಿ ಸ್ಪೇಸ್ ಮೊಬೈಲ್ನೊೊಂದಿಗಿನ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಬ್ಲೂ ಬರ್ಡ್ ಬ್ಲಾಾಕ್-2 ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ದಿಿದೆ. ಈ ಮಿಷನ್ ಪ್ರಪಂಚದಾದ್ಯಂತದ ಸ್ಮಾಾರ್ಟ್ಫೋೋನ್ಗಳಿಗೆ ನೇರವಾಗಿ ಹೈ-ಸ್ಪೀಡ್ ಸೆಲ್ಯುಲಾರ್ ಬ್ರಾಾಡ್ಬ್ಯಾಾಂಡ್ ಅನ್ನು ತಲುಪಿಸಲು ವಿನ್ಯಾಾಸಗೊಳಿಸಲಾದ ಮುಂದಿನ ಪೀಳಿಗೆಯ ಸಂವಹನ ಉಪಗ್ರಹವನ್ನು ನಿಯೋಜಿಸುತ್ತದೆ. ಬ್ಲೂ ಬರ್ಡ್ ಬ್ಲಾಾಕ್-2 ಬಾಹ್ಯಾಾಕಾಶ ನೌಕೆಯು ಔ್ಖ3 ರಾಕೆಟ್ನ ಇತಿಹಾಸದಲ್ಲಿ ಲೋ ಅರ್ಥ್ ಆರ್ಬಿಟ್ಗೆ ಉಡಾವಣೆಯಾದ ಅತ್ಯಂತ ಭಾರವಾದ ಪೇಲೋಡ್ ಆಗಿದೆ.

