ವಿರೂಪಾಕ್ಷ ಹೊಕ್ರಾಾಣಿ ಬೆಳಗಾವಿ, ಡಿ.09:
ಬೆಳಗಾವಿಯಲ್ಲಿ ನಡೆಯುತ್ತಿಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆೆ ಚರ್ಚಿಸಬೇಕು ಎಂದು ಮಂಗಳವಾರ ಆರಂಭಿಸಲಾದ ವಿಶೇಷ ಚರ್ಚೆ ಮೊದಲ ದಿನವೇ ಗದ್ದಲ, ಗಲಾಟೆಗೆ ಬಲಿಯಾಯಿತು.
ಮಂಗಳವಾರ ಕಲಾಪ ಅರಂಭವಾಗುತ್ತಿಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನಿಲುವಳಿ ಸೂಚನೆಗೆ ಮುಂದಾದರು. ಆದರೆ, ಇದಕ್ಕೆೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆೆಸ್ ಸದಸ್ಯರು ಮೊದಲು ಪ್ರಶ್ನೋೋತ್ತರ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು. ಹೀಗೆ ಪ್ರಶ್ನೋೋತ್ತರ ಮುಗಿಯುತ್ತಿಿದ್ದಂತೆ ಉತ್ತರ ಕರ್ನಾಟಕ ಅಭಿವೃದ್ಧಿಿ ಕುರಿತು ವಿಶೇಷ ಚರ್ಚೆ ಆರಂಭವಾಯಿತಾದರೂ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆೆ ಗದ್ದಲ ಉಂಟಾದ ಪರಿಣಾಮ ಕೆಲವೇ ಸಮಯದಲ್ಲಿ ಚರ್ಚಾ ವಿಷಯವನ್ನು ಬುಧವಾರಕ್ಕೆೆ ಮುಂದೂಡಲಾಯಿತು.
ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಅವರ ಮೊದಲ ಅವಧಿಯ ಮುಖ್ಯಮಂತ್ರಿಿಯ ಕೆಲಸಗಳನ್ನು ನೋಡಿದ್ದ ಜನ ಎರಡನೇ ಅವಧಿಗೂ ಅದೇ ಭ್ರಮೆಯಲ್ಲಿದ್ದರು. ಆದರೆ, ಸಿದ್ದರಾಮಯ್ಯ ಅವರ ಈಗಿನ ಎರಡನೇ ಅವಧಿಯ ಸರ್ಕಾರ ಜನರ ಭ್ರಮೆಯನ್ನು ನುಚ್ಚುನೂರು ಮಾಡಿದೆ. ಅಡಳಿತ ಒಡೆದ ಕನ್ನಡಿಯಾಗಿದೆ. ಅಧಿಕಾರದ ಕಿತ್ತಾಾಟದಿಂದಾಗಿ ಅಭಿವೃದ್ದಿ ಕುಂಠಿತಗೊಂಡಿದೆ. ಉತ್ತರ ಕರ್ನಾಟಕ ಭಾಗದ ರೈತರು ನಿರಂತರವಾಗಿ ಸರ್ಕಾರದ ವಿರುದ್ಧ ಹೋರಾಟ ಮತ್ತು ಧರಣಿಗಳನ್ನು ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪದೇ ಪದೆ ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಾಾರೆ. 2008 ರ ಮೇ 20 ರಂದು ರೈತರ ಉತ್ಪನ್ನ ವೆಚ್ಚ ಆಧರಿಸಿ ಬೆಲೆ ನಿಗದಿಪಡಿಸಬೇಕು, 5,000 ಕೋಟಿ ರೂ. ಆವರ್ತ ನಿಧಿ ಸ್ಥಾಾಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಎರಡೂವರೆ ವರ್ಷದ ಅವಧಿಯಲ್ಲಿ ಈ ಕೆಲಸವನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಮಾಡಿಲ್ಲ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ, ಪ್ರಕೃತಿ ವಿಕೋಪ ನಿರ್ವಹಣೆಗೆ 5,000 ಕೋಟಿ ರೂ. ನಿಧಿ ಸ್ಥಾಾಪಿಸಲಾಗುವುದು ಎಂದು ಹೇಳಿದ್ದರು. ಉತ್ತರ ಕರ್ನಾಟಕದ ಬಹಳ ಕಡೆ ಪ್ರವಾಹವಾದರೂ ನಿಧಿ ನೀಡಿಲ್ಲ. ಸಾಲ ಮರುಪಾವತಿ ಮುಂದೂಡಲಾಗುವುದು ಎಂದು ಹೇಳಿದ್ದರು. ಹಾಲಿನ ಪ್ರೋೋತ್ಸಾಾಹಧನವನ್ನು 7 ರೂ.ಗೆ ಏರಿಸಲಾಗುವುದು ಎಂದಿದ್ದರು. ಉತ್ತರ ಕರ್ನಾಟಕದಲ್ಲಿ ದ್ರಾಾಕ್ಷಿ ಬೆಳೆಗಾರರಿಗಾಗಿ 500 ಕೋಟಿ ರೂ. ನೀಡಲಾಗುವುದು ಎಂದಿದ್ದರು. ಆದರೆ ಈ ಸರ್ಕಾರ ರೈತರ ಪರವಾಗಿ ನಿಂತಿಲ್ಲ ಎಂದರು.
ಕಬ್ಬಿಿನ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ ಎಂದು ಕಾಂಗ್ರೆೆಸ್ ನಾಯಕರು ಹೇಳಿದ್ದಾರೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡಬೇಕೆಂದು ಸುಪ್ರೀೀಂ ಕೋರ್ಟ್ ಆದೇಶವಿದೆ. ರಾಜ್ಯ ಸರ್ಕಾರದಿಂದ ಸಚಿವರು ಅಥವಾ ಮುಖ್ಯಮಂತ್ರಿಿ ಪ್ರಧಾನಿಗೆ ಮನವಿ ಮಾಡಬೇಕು. ಸಚಿವ ದಿನೇಶ್ ಗುಂಡೂರಾವ್ ಶಿಷ್ಟಾಾಚಾರಕ್ಕಾಾಗಿ ಪ್ರಧಾನಿಯನ್ನು ವಿಮಾನ ನಿಲ್ದಾಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮನವಿ ಕೊಟ್ಟಿಿದ್ದೇವೆ ಎಂದು ಸಾಬೀತುಪಡಿಸಲು ಹೀಗೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿವೆ. ಶೇ.70 ರಷ್ಟು ಜನರು ರೈತ ಕುಟುಂಬದವರಾಗಿದ್ದಾರೆ. ಕೃಷಿ ಇಲಾಖೆಯ ವಿಶನ್ ವರದಿಯಲ್ಲಿ ಆಹಾರ ಭದ್ರತೆ ಕಾಪಾಡಲಾಗುವುದು ಎನ್ನಲಾಗಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಏನೇ ಕೇಳಿದರೂ 2,000 ರೂ. ಕೊಟ್ಟಿಿಲ್ಲವೇ ಎಂದು ಪ್ರಶ್ನೆೆ ಮಾಡುತ್ತಾಾರೆ. ಮದ್ಯದ ದರ ಏರಿಕೆ ಮಾಡಿ ಕುಟುಂಬಕ್ಕೆೆ ಹಣ ನೀಡಲಾಗುತ್ತಿಿದೆ ಎಂದರು.
ರೈತರ ಆತ್ಮಹತ್ಯೆೆ
ಎರಡೂವರೆ ವರ್ಷಗಳಲ್ಲಿ 2,422 ರೈತರು ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ. ಈ ಪೈಕಿ 32 ಕಬ್ಬು ಬೆಳೆಗಾರರಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕದ ಪಾಲು ಶೇ.22.5 ರಷ್ಟಿಿದ್ದು, ಎರಡನೇ ಸ್ಥಾಾನದಲ್ಲಿದೆ. ತಮಿಳುನಾಡು ಶೇ.5.9 ಹಾಗೂ ಆಂಧ್ರಪ್ರದೇಶ ಶೇ.8 ರಷ್ಟು ಪಾಲು ಹೊಂದಿದೆ. ಇದೇ ಸರ್ಕಾರದ ಅಂಕಪಟ್ಟಿಿಯಾಗಿದೆ. ಇವರಿನ್ನೂ ಗ್ಯಾಾರಂಟಿ ಭ್ರಮೆಯಿಂದ ಹೊರಗೆ ಬಂದಿಲ್ಲ. ಗ್ಯಾಾರಂಟಿಗಳಿಂದ ಖಜಾನೆ ಖಾಲಿಯಾಗಿದ್ದರಿಂದಲೇ ಬರಗಾಲಕ್ಕೆೆ ಪರಿಹಾರ ಕೊಡದೆ ಮುಂದೂಡಿದ್ದರು ಎಂದರು.
ಕೆರಳಿದ ಆಡಳಿತಪಕ್ಷ
ಅಶೋಕ್ ಅವರು ಹೀಗೆ ಮಾತನಾಡುವಾಗ ರೈತರಿಗೆ ಪರಿಹಾರ ಕೊಡಲು ಹಣವೇ ಇಲ್ಲ. ಸರ್ಕಾರದ ಖಜಾನೆ ಖಾಲಿ ಖಾಲಿ, ಸರ್ಕಾರ ಜಾಲಿ ಜಾಲಿ. ಸಚಿವ ಕೃಷ್ಣ ಬೈರೇಗೌಡ ಅವರು ಪರಿಹಾರದ ನೀಡುವ ಸಂದರ್ಭ ಬಂದಾಗ ಏನಾದರೂ ನೆಪಗಳನ್ನು ಹುಡುಕಿ ಮುಂದೆ ಹಾಕುತ್ತಾಾರೆ ಎಂದು ಹೇಳಿದರು.
ಇದರಿಂದ ಸಿಟ್ಟಿಿಗೆದ್ದ ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಅನಗತ್ಯವಾಗಿ ಆರೋಪ ಮಾಡಬಾರದು ಎಂದು ಎದ್ದುನಿಂತ ಗಲಾಟೆ ಆರಂಭಿಸಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರ ರೈತರಿಗೆ ನೀಡಿದ ಪರಿಹಾರ ಹಣದ ಲೆಕ್ಕವನ್ನು ಸದನಕ್ಕೆೆ ನೀಡಿದರು. 2023-24 ರಲ್ಲಿ 38 ಲಕ್ಷ ರೈತರಿಗೆ 4,300 ಕೋಟಿ ರೂ. ಪರಿಹಾರವನ್ನಾಾಗಿ ನೀಡಲಾಗಿದೆ. ಇಷ್ಟು ಸಂಖ್ಯೆೆಯ ರೈತರಿಗೆ ಪರಿಹಾರ ನೀಡಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು. ಇದಲ್ಲದೆ, ಪ್ರಸ್ತುತ ವರ್ಷ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಹಣವನ್ನು ಪರಿಹಾರದ ರೂಪದಲ್ಲಿ ಈಗಾಗಲೇ ನೇರ ಬ್ಯಾಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ 2022-23ರಲ್ಲಿ ಇತಿಹಾಸ ಕಾಣದ ಬರಕ್ಕೆೆ ತುತ್ತಾಾಗಿತ್ತು. ಈ ವೇಳೆ ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಾಗಿ ನಾವು ಮನವಿ ಸಲ್ಲಿಸಿದ್ದೆವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿ ಪರಿಹಾರಕ್ಕಾಾಗಿ ವಿನಂತಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿರಲಿಲ್ಲ. ಮಾತೆತ್ತಿಿದರೆ ತಾವು ರೈತರ ಪರ ಎನ್ನುವ ರಾಜ್ಯದ ಬಿಜೆಪಿ ನಾಯಕರೂ ಸಹ ಕೈಕಟ್ಟಿಿ ಕೂತಿದ್ದರು. ರೈತರ ಪರ ಕನಿಷ್ಟ ಧ್ವನಿ ಎತ್ತಿಿರಲಿಲ್ಲ ಎಂದು ಆರೋಪಿಸಿದರು.
ಇದು ಮಾತಿಗೆ ಮಾತು ಹೊರಳಿ ಸದನದಲ್ಲಿ ಗದ್ದಲ ಜೋರಾಯಿತು. ಆರ್. ಅಶೋಕ್ ಅವರು ಮಾತನಾಡಲು ಸಾಧ್ಯವಾಗದೆ ಕುಳಿತುಬಿಟ್ಟರು. ಸಚಿವ ಕೃಷ್ಣ ಬೈರೇಗೌಡ, ಪ್ರಿಿಯಾಂಕ್ ಖರ್ಗೆ ಅವರು ಅನಗತ್ಯವಾಗಿ ಅಡ್ಡ ಬಾಯಿ ಹಾಕುತ್ತಾಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು. ಇದರಿಂದ ಮಾತಿಗೆ ಮಾತು ಬೆಳೆದು ಗದ್ದಲ ಜೋರಾದಾಗ ಸ್ಪೀಕರ್ ಯು.ಟಿ. ಖಾದರ್ ಅವರು ಸದನವನ್ನು 10ನಿಮಿಷಗಳ ಕಾಲ ಮುಂದೂಡಿದರು.
ಕೆಲ ಸಮಯದ ಬಳಿಕ ಸದನ ಮತ್ತೆೆ ಆರಂಭವಾದಾಗಲೂ ಗದ್ದಲ ಮುಂದುವರಿಯಿತು. ಆಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಿಸದೇ ಸದನದ ಗೌರವವನ್ನು ಎತ್ತಿಿಹಿಡಿಯುವ ಕೆಲಸ ಮಾಡಬೇಕು. ನಂತರ ವಿರೋಧ ಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಮಧ್ಯೆೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿಿರುವ ಬಗ್ಗೆೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಿಪಡಿಸಬಾರದು. ವಿರೋಧ ಪಕ್ಷದವರು ಮಾತನಾಡುವಾಗ ಸುಮ್ಮ ಸುಮ್ಮನೆ ಅಡ್ಡಿಿಪಡಿಸಬಾರದು. ವಿರೋಧ ಪಕ್ಷದ ನಾಯಕರು ಮಣಿದಾಗ ಮಾತ್ರ ಮಾತನಾಡಬೇಕು. ಯಾರೇ ಆದರೂ ಚರ್ಚೆಗೆ ಅಡ್ಡಿಿಪಡಿಸಬಾರದು ಎಂದು ತಿಳಿಹೇಳಿದರು.
ಆಗ ಆರ್. ಅಶೋಕ್ ಮತ್ತೆೆ ಮಾತನಾಡಲು ಅಣಿಯಾದರಾದರೂ ಸಮಯದ ಅಭಾವದಿಂದಾಗಿ ಉತ್ತರ ಕರ್ನಾಟಕದ ಚರ್ಚೆಯನ್ನು ಬುಧವಾರಕ್ಕೆೆ ಮುಂದೂಡಲಾಯಿತು.
ಆಡಳಿತ ಮತ್ತು ವಿರೋಧ ಪಕ್ಷದವರ ಗದ್ದಲದ ಮಧ್ಯೆೆ ಅಭಿವೃದ್ಧಿಿ ಕುರಿತು ಚರ್ಚೆ ವೇಳೆ ಗದ್ದಲ: ಬುಧವಾರಕ್ಕೆೆ ಮುಂದೂಡಿಕೆ ಮೊದಲ ದಿನವೇ ಠುಸ್ ಪಟಾಕಿಯಾದ ಉ.ಕ. ಅಭಿವೃದ್ಧಿಿ ಚರ್ಚೆ

