ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.05:
ಬ್ಯಾಾನರ್ ಗಲಭೆಯ ಹಿನ್ನಲೆಯಲ್ಲಿ ಶಾಸಕ ಜಿ. ಜನಾರ್ಧನರೆಡ್ಡಿಿಯ ಪರವಾಗಿ ಪಕ್ಷ ಮತ್ತು ಮುಖಂಡರು ವೀಡಿಯೋಗಳನ್ನು – ೆಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಬಿಡುವಿಲ್ಲದ ಸುದ್ದಿಗೋಷ್ಠಿಿಗಳನ್ನು ನಡೆಸಿದ ನಂತರ, ಸೋಮವಾರದಿಂದ ಶಾಸಕ ನಾರಾ ಭರತರೆಡ್ಡಿಿಯ ಪರವಾಗಿ ಕಾಂಗ್ರೆೆಸ್ ಬೆಂಬಲಕ್ಕೆೆ ನಿಂತಿದೆ.
ಈ ವಿವಾದದಲ್ಲಿ ಒಂದು ಹಂತದಲ್ಲಿ ಮಿಲ್ಲರಪೇಟೆಯ ದೌಲಾ ಎನ್ನುವ ವ್ಯಕ್ತಿಯ ಜೊತೆಯಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರು ಆಪ್ಯಾಾಯತವಾಗಿ ಮನೆಯಲ್ಲಿ ನಡೆಸಿದ್ದ ಮಾತುಕತೆಯ ತುಣುಕನ್ನು ಸುದ್ದಿಮನೆಗಳಿಗೆ ಬಿಡುಗಡೆ ಮಾಡಿದ್ದ ಜಿ. ಜನಾರ್ಧನರೆಡ್ಡಿಿ, ಭರತರೆಡ್ಡಿಯ ಮನೆಯಲ್ಲಿಯೇ ಮಾಹಿತಿದಾರರನ್ನು ನೇಮಿಸಿಕೊಂಡಿರುವ ಕುರಿತು ಅನೇಕರನ್ನು ಗಾಬರಿಗೊಳಿಸಿದ್ದರು. ಆದರೆ, ಘಟನೆಯ ಹಿನ್ನಲೆಯಲ್ಲಿ ಜಿ. ಜನಾರ್ಧನರೆಡ್ಡಿಿಯ ಮನೆಯಲ್ಲಿದ್ದ ಕಟ್ಟಿಿಗೆಗಳು ಮತ್ತು ಅವುಗಳನ್ನು ಹಿಡಿದು ಗಲಭೆ ನಡೆದ ಸ್ಥಳದಲ್ಲಿ ನಿಂತಿದ್ದ ಜಿ. ಜನಾರ್ಧನರೆಡ್ಡಿಿ ಕಟ್ಟಾಾ ಬೆಂಬಲಿಗರ ೆಟೋಗಳನ್ನು ಕಾಂಗ್ರೆೆಸ್ಸಿಿಗರು ಒಂದೊಂದಾಗಿ ಬಿಡುಗಡೆ ಮಾಡುತ್ತಿಿದ್ದಾಾರೆ.
ಜಿ. ಜನಾರ್ಧನರೆಡ್ಡಿಿಯ ಪರವಾಗಿ ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಮುಖಂಡ ಎಂ.ಪಿ. ರೇಣುಕಾಚಾರ್ಯ, ರೈಲ್ವೆೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದ ನಿರಂತರ ಪತ್ರಿಿಕಾಗೋಷ್ಠಿಿಗಳನ್ನು ನಡೆಸಿದ ಬಿಜೆಪಿ, ಇಡೀ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ನ ಹಾಲಿ ನ್ಯಾಾಯಾಧೀಶರಿಂದ ತನಿಖೆ ನಡೆಸಲು, ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬಂಧಿಸಲು ನಿರಂತರ ಆಗ್ರಹಿಸಿ, ಮಾಧ್ಯಮಗಳಲ್ಲಿ ಬಿಡಿಯನ್ನು ಕಾಪಾಡಿಕೊಂಡಿತ್ತು.
ಕಾಂಗ್ರೆೆಸ್ ಘಟನೆಯ ಸತ್ಯಾಾಸತ್ಯತೆಯ ವರದಿ ನೀಡಲು ಎಚ್.ಎಂ. ರೇವಣ್ಣ ನೇತೃತ್ವದ ‘ಸತ್ಯ ಶೋಧನಾ ತಂಡ’ ಬಳ್ಳಾಾರಿಗೆ ಜನವರಿ 3 ರಂದು ಆಗಮಿಸಿ, ಅಧ್ಯಯನ ನಡೆಸಿ – ಕಾಂಗ್ರೆೆಸ್ ಮುಖಂಡರು – ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ – ಸಂಸ್ಥೆೆಗಳಿಂದ ಅಭಿಪ್ರಾಾಯಗಳನ್ನು ಸಂಗ್ರಹಿಸಿತ್ತು. ಆದರೆ, ಎಲ್ಲಿಯೂ ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬೆಂಬಲಿಸಿ – ಟೀಕಿಸಿ ಹೇಳಿಕೆ ನೀಡಿರಲಿಲ್ಲ.
ಸೋಮವಾರದಿಂದ, ಇಡೀ ಪಕ್ಷವು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬೆಂಬಲಿಸುವ ಸನ್ನಿಿವೇಶ ನಿರ್ಮಾಣವಾಗಿ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾಾರಿಗೆ ಆಗಮಿಸಲಿದ್ದಾಾರೆ. ಗಲಭೆಯಲ್ಲಿ ಜಿ. ಜನಾರ್ಧನರೆಡ್ಡಿಿ ಅವರ ಮನೆಯಲ್ಲಿದ್ದ ಕಟ್ಟಿಿಗೆಯ ಸಾಕ್ಷಿಯನ್ನು – ಕಟ್ಟಿಿಗೆಗಳನ್ನು ಹಿಡಿದು ಗಲಭೆ ನಡೆದ ರಸ್ತೆೆಯಲ್ಲಿ ತಿರುಗಾಡಿದ ಸಾಕ್ಷಿಗಳನ್ನು ಸುದ್ದಿಮನೆಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ವೈರಲ್ ಆಗುತ್ತಿಿವೆ.
‘ಸ್ಥಳ ಪರಿಶೀಲನೆ’
ಬಂದೂಕಿನ ಗುಂಡುಗಳು ಸಿಡಿದ ತೀವ್ರತೆ ಮತ್ತು ನಿಷ್ಕೀಯಗೊಂಡ ಗುಂಡುಗಳು ಇನ್ನಿಿತರೆಗಳ ಕುರಿತು ತನಿಖೆ ನಡೆಸಲು ಹುಬ್ಬಳ್ಳಿಿಯ ಬ್ಯಾಾಲಿಸ್ಟಿಿಕ್ ತಂಡವು ಸೋಮವಾರ ಸ್ಥಳಕ್ಕೆೆ ಭೇಟಿ ನೀಡಿ, ಪರಿಶೀಲಿಸಿದೆ. ಪ್ರಕರಣದಲ್ಲಿ ಬಂಧಿತ 26 ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಾಯಾಲಯಕ್ಕೆೆ ಹಾಜರುಪಡಿಸಿ, ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.

