ಸುದ್ದಿಮೂಲ ವಾರ್ತೆ,
ಚಿಕ್ಕಬಳ್ಳಾಪುರ, ಮೇ 5: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಪ್ರಚಾರದ ಅಂಗವಾಗಿ ಮೇ 7ರಂದು ರೋಡ್ ಶೋ ನಡೆಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತಲೂ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ವಾಯುವಾಹನ ಅಥವಾ ಮಾನವ ರಹಿತ ಏರ್ಕ್ರಾಫ್ಟ್ಗಳ ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎನ್ಎಂ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವರು ಚುನಾವಣಾ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಚಿಕ್ಕಬಳ್ಳಾಪುರ ನಗರದ 05 ಕಿಮೀ ವ್ಯಾಪ್ತಿಯಲ್ಲಿ ಮಾನವ ರಹಿತ ವಾಯುವಾಹನ ಅಥವಾ ಮಾನವ ರಹಿತ ಏರ್ಕ್ರಾಫ್ಟ್ ಹಾರಾಟವನ್ನು ತಾತ್ಕಾಲಿಕ ಹಾರಾಟ ನಿಷೇಧ ವಲಯವೆಂದು ಆದೇಶ ಹೊರಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋರಿಕೆ ಸಲ್ಲಿಸಿದ್ದರು.
ಈ ಕೋರಿಕೆ ಪರಿಗಣಿಸಿ ಜಿಲ್ಲಾಧಿಕಾರಿ ಎನ್ಎಂ ನಾಗರಾಜ್ ಅವರು 07.05.2023 ರಂದು ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತಲೂ 5 ಕಿಮೀ ವ್ಯಾಪ್ತಿಯಲ್ಲಿ ಮಾನವ ರಹಿತ ವಾಯುವಾಹನ ಅಥವಾ ಮಾನವ ರಹಿತ ಏರ್ಕ್ರಾಫ್ಟ್ ಹಾರಾಟವನ್ನು ತಾತ್ಕಾಲಿಕವಾಗಿ ಹಾರಾಟ ನಿಷೇಧ ವಲಯವೆಂದು ಘೋಷಿಸಿ ಆದೇಶಿಸಿದ್ದಾರೆ.