ಸುದ್ದಿಮೂಲ ವಾರ್ತೆ
ಆನೇಕಲ್, ಜು 13 : ಅಂಗಡಿಗೆ ಹೋಗಿ ಬರುವುದಾಗಿ ಹೇಳಿ 11 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಲಕಿ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದು, ಬಾಲಕಿ ಗಂಗಮ್ಮ ರಾಯಚೂರು ಮೂಲದ ಅಂಬರೀಶ್ ಮತ್ತು ಉಳಗಮ್ಮ ದಂಪತಿಗಳ ಪುತ್ರಿ. ರಾಯಚೂರಿನಿಂದ ಬಂದು ಆನೇಕಲ್ ಪಟ್ಟಣದ ಅರೇಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಅದೇ ಗ್ರಾಮದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು.
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಗಂಗಮ್ಮ ನಾಪತ್ತೆಯ ಬಗ್ಗೆ ಭಾನುವಾರ ದೂರು ನೀಡಿದ್ದಾರೆ ಆದರೆ, ಪೊಲೀಸರು ತನಿಖೆಯನ್ನು ನಡೆಸುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಗಂಗಮ್ಮನ ಪೋಷಕರು ಫೋಟೋ ಹಿಡಿದು ಬೀದಿ ಬೀದಿ ಮಗಳ ಹುಡುಕಾಟ ನಡೆಸುತ್ತಿದ್ದಾರೆ.