ಸುದ್ದಿಮೂಲ ವಾರ್ತೆ ಮಸ್ಕಿ, ಜ.14:
ತಾವು ನಿರ್ವಹಿಸುವ ಕಾಯಕವನ್ನು ಶ್ರದ್ಧೆೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಾಂತಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಆದರ್ಶ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಆರ್. ಬಸನಗೌಡ ತುರುವಿಹಾಳ ತಿಳಿಸಿದರು.
ಪಟ್ಟಣದ ಕವಿತಾಳ ರಸ್ತೆೆಯಲ್ಲಿರುವ ಸಿದ್ದರಾಮೇಶ್ವರರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿಿ ಪಡೆಯುತ್ತಿಿದ್ದರು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ದುರುಗಪ್ಪ ಚಿಗರಿ, ತಹಸೀಲ್ದಾಾರ್ ಮಂಜುನಾಥ ಭೋಗಾವತಿ, ತಾ.ಪಂ.ಇಓ ಅಮರೇಶ ಯಾದವ್, ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಿ, ಹನುಮಂತಪ್ಪ ಮುದ್ದಪೂರ, ಪಂಪನಗೌಡ ಗುಡದೂರು, ರವಿಕುಮಾರ್ ಚಿಗರಿ, ಮೈಬುಸಾಬ ಮುದ್ದಪೂರ, ಶೇಖರಪ್ಪ ಬೆಳಗಲ್, ಕೃಷ್ಣಾಾ ಡಿ.ಚಿಗರಿ, ಮಲ್ಲಯ್ಯ ಬಳ್ಳಾಾ, ಸಾರಪ್ಪ ವಡ್ಡರ್, ಮಲ್ಲಯ್ಯ ನಾಗರಹಾಳ, ವೀರೇಶ ಆನೆಹೊಸರು, ಶಿವರಾಜ್ ಬುಕ್ಕಣ್ಣ, ರಂಗಪ್ಪ, ಮಲ್ಲಯ್ಯ ಛಾವಣಿ, ನಾಗಭೂಷಣ, ಬಸನಗೌಡ ಮಾರಲದಿನ್ನಿಿ ವೀರೇಶ ಬಡಗಿ, ಗ್ಯಾಾನಪ್ಪ,ಹಾಗೂ ಭೋವಿ ಸಮಾಜದ ಪ್ರಮುಖ ಗಣ್ಯರು ಉಪಸ್ಥಿಿತರಿದ್ದರು.
ಸಿದ್ಧರಾಮೇಶ್ವರರ ತತ್ವಾದರ್ಶದಿಂದ ಆದರ್ಶ ಜೀವನ ಸಾಧ್ಯ – ಶಾಸಕ ತುರುವಿಹಾಳ

