ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.08:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯೆೆ ಸುವರ್ಣಸೌಧದ ಮೊಗಸಾಲೆಯಲ್ಲಿ ಸೋಮವಾರ ನಾಟಿಕೋಳಿ ಬಗ್ಗೆೆ ಸ್ವಾಾರಸ್ಯಕರ ಸಮಾಲೋಚನಾ ಪ್ರಸಂಗ ನಡೆಯಿತು.
ಮೊಗಸಾಲೆಯಲ್ಲಿ ಎದುರಿಗೆ ಸಿಕ್ಕ ಆರ್.ಅಶೋಕ್ ಅವರನ್ನು ನೋಡುತ್ತಿಿದ್ದ ಹಾಗೇ ಮಾತು ಶುರು ಮಾಡಿದ ಸಿದ್ದರಾಮಯ್ಯ, ಏನಯ್ಯ ಸಣ್ಣಾಾಗಿದ್ಯಾಾ ಅಶೋಕ್? ಎಂದು ಪ್ರಶ್ನಿಿಸಿದರು. ಅದಕ್ಕೆೆ ಅಶೋಕ್, ಇಲ್ಲ ಸರ್ ನಿಮ್ಮ ತರಹ ನಾಟಿಕೋಳಿ ತಿನ್ನಲ್ಲ, ಬಿಟ್ಟುಬಿಟ್ಟಿಿದ್ದೇನೆ ಸರ್ಎಂದರು. ಅದಕ್ಕೆೆ ತಕ್ಷಣ ಸಿದ್ದರಾಮಯ್ಯ, ಏ ಅದೆಲ್ಲ ಬಿಡಬಾರದು ತಿನ್ನಬೇಕು ಕಣಯ್ಯ. ಹೇ, ತಿನ್ನು ಏನೂ ಆಗಲ್ಲ. ಬಾ ತಿನ್ನೋೋಣ: ಎಂದು ಮುಖ್ಯಮಂತ್ರಿಿ ನಗೆ ಚಟಾಕಿ ಹಾರಿಸಿದರು.
ಇದಕ್ಕೂ ಮುನ್ನ ಸ್ಪೀಕರ್ ಕೊಠಡಿಯಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಆರ್.ಅಶೋಕ್, ಸುನೀಲ್ ಕುಮಾರ್ ಮುಖಾಮುಖಿಯಾದರು. ಸಿಎಂ ಬರುವ ಮುಂಚೆಯೇ ಸ್ಪೀಕರ್ ಭೇಟಿ ಮಾಡಿದ್ದ ಆರ್.ಅಶೋಕ್, ಸುನೀಲ್ ಕುಮಾರ್, ಸಿದ್ದರಾಮಯ್ಯರನ್ನು ಕೈಕುಲುಕಿ ವಿಶ್ ಮಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಆರ್.ಅಶೋಕ್ ಬಳಿ ಅವಿಶ್ವಾಾಸ ನಿರ್ಣಯ ಮಾಡ್ತೀರೇನಪ್ಪಾಾ ಎಂದು ನಗುನಗುತ್ತಲೇ ಕೇಳಿದರು. ಇದಕ್ಕೆೆ ಏನೂ ಮಾತನಾಡದೇ ಸುನೀಲ್ ಕುಮಾರ್ ನಕ್ಕರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಕಾನೂನು ಸಲಹೆಗರರಾದ ಪೊನ್ನಣ್ಣ ಉಪಸ್ಥಿಿತರಿದ್ದರು.
ವಿಧಾನಸಭೆ ಮೊಗಸಾಲೆಯಲ್ಲಿ ನಾಟಿಕೋಳಿ ಬಗ್ಗೆೆ ಸ್ವಾಾರಸ್ಯಕರ ಚರ್ಚೆ ‘ಹೇ ಅಶೋಕ್, ನಾಟಿಕೋಳಿ ತಿನ್ನು ಏನೂ ಆಗಲ್ಲ’

