ಸುದ್ದಿಮೂಲ ವಾರ್ತೆ ರಾಯಚೂರು, ನ.11:
ರಾಯಚೂರು ನಗರದ ಪ್ರಮುಖ ಸರ್ಕಾರಿ ಶಾಲೆಗಳಲ್ಲೊೊಂದಾದ ಮುನ್ನೂರುವಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆೆಗೆ ಕೊರತೆ ಇಲ್ಲ ಆದರೆ, ಅಕ್ಷರ ಕಲಿಯುವಲ್ಲೂ ಮಕ್ಕಳು ಮುಂದಿಲ್ಲ ಎಂಬಂತಾಗಿದೆ.
ಒಂದು ಕಾಲಕ್ಕೆೆ ಮಡ್ಡಿಿಪೇಟೆ ಮತ್ತು ಮಕ್ತಾಾಲ ಪೇಟೆಯ ಇಡೀ ಬಡಾವಣೆಗಳ ಸಾಂಸ್ಕೃತಿಕ ಬದುಕನ್ನೆೆ ಬದಲಾಯಿಸಿದ ನಗರದ 1948ರ ಜೂನ್ 1ರಂದು ಆರಂಭವಾದ ಹಳೆಯದಾದ ಮುನ್ನೂರುವಾಡಿ ಸರ್ಕಾರಿ ಶಾಲೆ ಎಂಬ ಮಾತಿದೆ.
ಸ್ವಾಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಬ್ರಾಾಹ್ಮಣರು ಮತ್ತು ಮುನ್ನೂರು ರೆಡ್ಡಿಿ ಸಮುದಾಯದವರ ಸಮಾಧಾನ ಪಡಿಸಲು ಶಾರದಾ ಹಾಗೂ ಮುನ್ನೂರು ವಾಡಿ ಶಾಲೆ ಎಂಬ ಎರಡು ಶಾಲೆ ಆರಂಭಿಸಲಾಯಿತು ಎಂಬ ಮಾತಿದೆ.
ರಾಯಚೂರಿನ ಶಿಕ್ಷಣ ತಜ್ಞರೂ ಆದ ರಾಮಣ್ಣ ಹವಳೆ, ಮಹಾದೇವಪ್ಪ ಹಂಚಿನಾಳ, ದೊಡ್ಡಪ್ಪ, ಬಾಬು ಭಂಡಾರಿಗಲ್, ಕೆ.ಕರಿಯಪ್ಪ ಮಾಸ್ತರ್ ಸೇರಿ ಅನೇಕ ಹಿರಿಯರು ಇಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಿ ಬದುಕು ಸವೆಸಿ ಅನೇಕ ಮಕ್ಕಳಿಗೆ ದಾರಿ ದೀಪವಾಗಿದ್ದಾಾರೆ. ರಾಮಣ್ಣ ಹವಳೆ ಅವರು ಶಿಕ್ಷಕರಿದ್ದಾಾಗ 1764ಕ್ಕೂ ಅಧಿಕ ವಿದ್ಯಾಾರ್ಥಿಗಳಿದ್ದರು. ಕೇವಲ ಅಲ್ಲಿನ ಮಕ್ಕಳಿಗೆ ಅಂದು ಅಕ್ಷರವನ್ನಷ್ಟೆೆ ಕಲಿಸದೆ ಸಾಂಸ್ಕೃತಿಕ, ಸಾಹಿತ್ಯಿಿಕ ನೆಲೆಯನ್ನು ಗಟ್ಟಿಿಯಾಗಿ ಒದಗಿಸಿಕೊಟ್ಟ ಪರಂಪರೆ ಈ ಶಾಲೆಗೆ ಇದೆ.
ಇಲ್ಲಿ ಕಿರಿಯ ಹಿರಿಯ ಪ್ರಾಾಥಮಿಕ ಶಾಲೆ ಈಗ ಹಾಲಿ ಕರ್ನಾಟಕ ಪಬ್ಲಿಿಕ್ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಕಲಿಕೆ ಇದೆ.
ಇಂಗ್ಲೀಷ್ ಮಾಧ್ಯಮದಲ್ಲಿ 303, ಕನ್ನಡ ಮಾಧ್ಯಮದಲ್ಲಿ 238 ಸೇರಿ ಒಟ್ಟು 541 ವಿದ್ಯಾಾರ್ಥಿಗಳಿದ್ದಾಾರೆ. ಹಾಜರಾತಿ(ಹಾಜರಿ ಪುಸ್ತಕದಲ್ಲಿ) ಮಾತ್ರ ಶೇ.95ರಷ್ಟಿಿದೆ. ಇಲಾಖೆಯಿಂದ ಮಂಜೂರಾದ ಖಾಯಂ ಶಿಕ್ಷಕರ ಸಂಖ್ಯೆೆ 17 ಹುದ್ದೆೆಗಳಿದ್ದು 9 ಜನ ಖಾಯಂ ಶಿಕ್ಷಕರಿದ್ದುಘಿ, ಗಣಿತ, ವಿಜ್ಞಾನದ ಶಿಕ್ಷಕರೇ ಇಲ್ಲದ ಕಾರಣಕ್ಕೆೆ ಅತಿಥಿ ಶಿಕ್ಷಕರನ್ನೆೆ ನೆಚ್ಚಿಿಕೊಳ್ಳುವಂತಾಗಿದೆ.
ಈ ಮಧ್ಯೆೆ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಪೂರ್ವ ಪ್ರಾಾಥಮಿಕ ಶಾಲೆಯೂ ಇದ್ದು ಅಲ್ಲಿ 120 ಮಕ್ಕಳು ಎರಡು ಕೊಠಡಿಗಳಲ್ಲಿ ಅಭ್ಯಾಾಸ ಮಾಡುತ್ತಿಿದ್ದಾಾರೆ. ಆ ಮಕ್ಕಳು ಚಿತ್ರ ಸಮೇತ ಕಲಿಕೆಗೆ ವಾತಾವರಣ ಸೃಷ್ಟಿಿಸಲಾಗಿದೆ. ಆದರೆ, ಚಿತ್ರ ಗುರುತಿಸಿ ಕಲಿಯುವ ಮಕ್ಕಳ ಸಂಖ್ಯೆೆ ಇಲ್ಲಘಿ. ಮಕ್ಕಳ ಸಂಖ್ಯೆೆಗನುಗುಣವಾಗಿ ಗಮನಿಸಿದರೆ ಕನಿಷ್ಟ 30 ಖಾಯಂ ಶಿಕ್ಷಕರು ಬೇಕು. ಒಟ್ಟಾಾರೆ ಈ ಶಾಲೆಗೆ ಇಲ್ಲಿ ಪ್ರಭಾರಿ ಮುಖ್ಯೋೋಪಾಧ್ಯಾಾಯರೆ ಶಾಲೆಗೆ ದಿಕ್ಕುಘಿ. ಇತ್ತೀಚೆಗೆ ಕಾಯಂ ಮುಖ್ಯ ಶಿಕ್ಷಕಿಯೊಬ್ಬರು ಬೇರೆ ಶಾಲೆಯಿಂದ ವರ್ಗಾವಣೆಯಾಗಿ ಬಂದಿದ್ದಾಾರಂತೆ.
ಪ್ರಾಾಥಮಿಕ ಶಾಲೆಯಲ್ಲಿನ ಬಹುತೇಕ ವಿದ್ಯಾಾರ್ಥಿಗಳು ಕನ್ನಡದ, ಇಂಗ್ಲೀಷ್ನ ಅಕ್ಷರ, ಪದ ಪರಿಪೂರ್ಣವಾಗಿ ಸರಿಯಾಗಿ ಬರೆಯುವಲ್ಲಿ ಹರಸಾಹಸ ಪಡುತ್ತಿಿದ್ದಾಾರೆ. ಕೇಳಿದರೆ ಕಲಿಯುತ್ತಿಿದ್ದಾಾರೆ ಎನ್ನುತ್ತಾಾರೆ ಅಲ್ಲಿನ ಶಿಕ್ಷಕರು. ಡಿಜಿಟಲ್ ಸ್ಮಾಾರ್ಟ್ ಬೋರ್ಡ್ಗಳಿವೆ ಕೆಲವಕ್ಕೆೆ ಕನೆಕ್ಷನ್ ಇಲ್ಲಘಿ, ಕನೆಕ್ಷನ್ ಇದ್ದರೆ ಅದರ ಕೀ ಅತಿಥಿ ಶಿಕ್ಷಕರ ಬಳಿ ಇರಲಿಲ್ಲಘಿ. ಕೆಲ ಪದಗಳನ್ನು ನಾಮಲಕದ ಮೇಲೆ ಬರೆಯಲು ಹೇಳಿದರೆ ಮುಂದೆ ಬರಲು ವಿದ್ಯಾಾರ್ಥಿಗಳು ಹಿಂದೇಟು ಹಾಕುತ್ತಿಿದ್ದಾಾರೆ ಇನ್ನು ತರಗತಿ ಕೊಠಡಿಯಲ್ಲಿದ್ದ ಶಿಕ್ಷಕರು ಸನ್ನೆೆ ಮಾಡಿದರೆ ವಿದ್ಯಾಾರ್ಥಿ ಬೇಕೂ ಬೇಡ ಎಂಬಂತೆ ಬಂದು ಹೇಳಿದ ಪದ ಅರೆಬರೆ ಬರೆದು ಹೋಗುವುದು ಅವರಿಗೆ ಪದ, ಅಕ್ಷರದ ಮೇಲೆ ಹಿಡಿತ ಇಲ್ಲ ಎಂಬುದು ಸಾಕ್ಷೀಕರಿಸಿದಂತಿದೆ.
ಈಗಿರುವ ಶಿಕ್ಷಕರಲ್ಲಿ ಕೆಲವರಿಗೆ ಇಲಾಖೆಯ ಬೇರೆಬೇರೆ ಯೋಜನೆಯಡಿ ಕೆಲಸ ಹಚ್ಚಿಿದ್ದಾಾರೆ ಒಬ್ಬಿಿಬ್ಬರು ಮಾತ್ರ ಪುರುಷ ಶಿಕ್ಷಕರಿದ್ದು ಉಳಿದವರೆಲ್ಲರೂ ಶಿಕ್ಷಕಿಯರೇ ಇರುವುದರಿಂದ ಅಳಿದುಳಿದ ಕೆಲಸ ಮಾಡುವಲ್ಲಿ ಶಿಕ್ಷಕರಿಗೆ (ಪುರುಷ) ಸಮಯ ಹೋಗಿದ್ದೆೆ ಗೊತ್ತಾಾಗುತ್ತಿಿಲ್ಲ ಇನ್ನೂ ಮಕ್ಕಳಿಗೆ ಅಕ್ಷರ ಕಲಿಸುವುದು ಇನ್ನೆೆಲ್ಲಿ ಎನ್ನುವಂತಾಗಿದೆ.
ಶಾಲೆಯ ಆವರಣದಲ್ಲಿ ಪ್ರೌೌಢಶಾಲೆ, ಪಿಯು ಕಾಲೇಜು ಕಟ್ಟಡಗಳಿವೆ. ಕೆಲ ಕೊಠಡಿಗಳ ದುರಸ್ತಿಿ ಕಾರ್ಯ ನಡೆಯುತ್ತಿಿರುವುದರಿಂದ ಆವರಣದಲ್ಲಿ ಶುಚಿತ್ವ ಹುಡುಕುವಂತಾಗಿದೆ.
ಸರ್ಕಾರ, ಇಲಾಖೆ, ಎಸ್ಡಿಎಂಸಿಯವರ ಆಸಕ್ತಿಿಯಿಂದ ದೇಣಿಗೆ ರೂಪದಲ್ಲಿ ಬಂದಿರುವ ಕಂಪ್ಯೂೂಟರ್ಗಳಿದ್ದರೂ ಅವು ನೋಡಲಷ್ಟೆೆ ಅವುಗಳು ಬಳಸಿದ್ದಾಾಗಲಿ, ಬಳಸುವವರಾಗಲಿ ಇಲ್ಲಘಿ. ಶುದ್ಧ ನೀರಿಗಾಗಿ ಆರ್ಓ ಸ್ಥಾಾಪಿಸಲಾಗಿದೆ ಅಲ್ಲಿ ಸ್ವಚ್ಛತೆಯದ್ದೆೆ ಪ್ರಶ್ನೆೆ ಅಲ್ಲಿಯೇ ಮುಸುರೆ, ಅಲ್ಲಿಯೇ ಗಲೀಜು ಎದ್ದು ಕಾಣುತ್ತದೆ.
ಇಷ್ಟೆೆಲ್ಲ ಸಮಸ್ಯೆೆಗಳ ಮಧ್ಯೆೆ ಮುನ್ನೂರುವಾಡಿ ಶಾಲೆಗೆ ನೂರಾರು ಸಮಸ್ಯೆೆಗಳದ್ದೆೆ ಕಾರುಬಾರು ಎಂಬುದರಲ್ಲಿ ಅನುಮಾನವೇ ಇಲ್ಲಘಿ.

