ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ರಾಯಚೂರು ಜಿಲ್ಲೆಯಲ್ಲಿ ೆಬ್ರವರಿ 5, 6 ಮತ್ತು 7ರಂದು ರಾಯಚೂರು ಜಿಲ್ಲಾಡಳಿತದಿಂದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ನಿಗದಿಯಾಗಿದ್ದು, ಈ ಉತ್ಸವದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿಿದೆ. ಆಸಕ್ತ ಪ್ರಕಾಶಕರು, ಲೇಖಕರು ತಮ್ಮ ಮಳಿಗೆಗಳನ್ನು ಬುಕಿಂಗ್ ಮಾಡಲು ರಾಯಚೂರು ಜಿಲ್ಲೆಯ ಮುಖ್ಯ ಗ್ರಂಥಾಲಯ ಅಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ರಾಯಚೂರು ಮೊ:9449928944 ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

