ಸುದ್ದಿಮೂಲ ವಾರ್ತೆ ರಾಯಚೂರು, ೆ.22:
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಕನ್ನಡಿಗರಿಗೆ ಹೊಸಮನಿ ಪ್ರಕಾಶನ ಸಂಸ್ಥೆೆಯ ಕೊಡುಗೆ ಅಪಾರವಾದದ್ದು ಎಂದು ಮಾಡಗಿರಿಯ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿರುಪಾಕ್ಷಿ ಹೇಳಿದರು.
ಅವರು ಜಿಲ್ಲೆಯ ಮಾಡಗಿರಿ ಗ್ರಾಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಾಥಮಿಕ ಶಾಲಾ ಆವರಣದಲ್ಲಿ ಶನಿವಾರದಂದು ಹಮ್ಮಿಿಕೊಂಡಿದ್ದ ಹೊಸಮನಿ ಬಯಲಾಟ ಪ್ರಶಸ್ತಿಿ ಪ್ರದಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನದೊಳಗೆ ಕನ್ನಡ ಮನೆಯೊಳಗೆ ಕನ್ನಡ ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ ನಮ್ಮ ತಾಯಿ ಭಾಷೆ ಕನ್ನಡ ಎಂಬ ಧ್ಯೇಯದಂತೆ ಬಶೀರ್ ಅಹ್ಮದ್ ಹೊಸಮನಿ ಅವರು ಹಲವಾರು ವರ್ಷಗಳಿಂದ ಕನ್ನಡ ಸೇವೆಗೆ ಅಣಿಯಾಗಿದ್ದಾರೆ ಎಂದರು.
ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ಗಾಯನಕ್ಕೆೆ ಹೆಚ್ಚಿಿನ ಪ್ರೋೋತ್ಸಾಾಹ ನೀಡುತ್ತಾಾ ಕನ್ನಡಿಗರ ಮನ ಮೆಚ್ಚುವಂತಹ ಕಾರ್ಯ ಮಾಡುತ್ತ ಬಂದಿದ್ದಾರೆ ಅವರ ಕನ್ನಡ ಅಭಿಮಾನಕ್ಕೆೆ ಕೃತಜ್ಞತೆ ತಿಳಿಸಿವೆ ಎಂದರು.
ಹಿರಿಯ ಸಾಹಿತಿ ಇಮಾಮುದ್ದೀನ್ ಮಾಡಗಿರಿ ಮಾತನಾಡಿ, ಪುರಾತನ ಕಲೆಯಾದ ಬಯಲಾಟಕ್ಕೆೆ ಪ್ರಶಸ್ತಿಿ ನೀಡಿ ಕಲಾವಿದರನ್ನು ಗೌರವಿಸುವುದು ಅಭಿನಂದನೀಯ ಈ ಕಾರ್ಯವನ್ನು ಹೊಸಮನಿ ಪ್ರಕಾಶನ ಸುಮಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿಿರುವುದು ಕಲಾವಿದರಿಗೆ ಪ್ರೋೋತ್ಸಾಾಹ ನೀಡುವ ಒಂದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ನಂತರ ಮುದುಕಪ್ಪ ನಾಯಕ್ ಹಿರಿಯ ಕಲಾವಿದರು ಅತ್ಯುತ್ತಮ ಬಯಲಾಟ ಪ್ರಶಸ್ತಿಿ ಸ್ವೀಕರಿಸಿ ಮಾತನಾಡಿ ಎಲೆ ಮರೆ ಕಾಯಿಯಂತೆ ನಾವು ಸೇವೆ ಸಲ್ಲಿಸುತ್ತಿಿರುವವರನ್ನು ಗುರುತಿಸಿ ಪ್ರಶಸ್ತಿಿ ಪ್ರದಾನ ಮಾಡಿರುವುದು ನಮಗೆ ತುಂಬಾ ಸಂತೋಷ ತಂದಿದೆ ಇಂಥ ಸಂಸ್ಥೆೆಗಳಿಂದ ಕಲೆ ಜೀವಂತ ಉಳಿದಿದೆ ಎಂದು ಹೇಳಿದರು.
ಬಯಲಾಟ ಪ್ರಶಸ್ತಿಿಯನ್ನು ಹಿರಿಯ ಕಲಾವಿದರಾದ ಮುದುಕಪ್ಪ ನಾಯಕ್, ಮಲ್ಕಪ್ಪ ತಂದೆ ಭೀಮಣ್ಣ, ಚನ್ನವೀರ ಹಂಪನಗೌಡ, ಹನುಮಣ್ಣ ಓಂಕಾರಿ, ಮೆಹಬೂಬ್ ಸಾಬ್ ತಂದೆ ಜಂಶೀರ್, ನಿರುಪಾದೆಪ್ಪ ನಾಯಕ್, ಬೀರನ್ನ ಓಂಕಾರಿ, ಮಹದೇವಪ್ಪ ಕಕ್ಕಲದೊಡ್ಡಿಿ, ಹನುಮಣ್ಣ ಓಂಕಾರಿ, ಮಹಾದೇವಪ್ಪ ಚಲವಾದಿ, ಉದಾಜಿ ತಂದೆ ಖಾಜನ್ನ ಅವರಿಗೆ ನೀಡಿ ಗೌರವಿಸಲಾಯಿತು. ನಂತರ ನಾಟಕ ಕ್ಷೇತ್ರಕ್ಕೆೆ ದಯಾನಂದ್ ಕುಂಬಾರ್ ಅವರಿಗೆ ಹೊಸಮನಿ ರಂಗ ಪ್ರಶಸ್ತಿಿ ನೀಡಿ ಗೌರವಿಸಲಾಯಿತು. ನಂತರ ಆನಂದಪ್ಪ ಮಾಡಗಿರಿ ಅವರಿಗೆ ಸಮಾಜ ಸೇವೆ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಾಟನೆ ಗ್ರಾಾಮ ಪಂಚಾಯತಿ ಅಧ್ಯಕ್ಷ ತಾರಮ್ಮ ಜಯವಂತ ಅವರು ನೆರವೇರಿಸಿದರು. ಪ್ರಾಾಸ್ತಾಾವಿಕವಾಗಿ ನುಡಿ ಹೊಸಮನಿ ಪ್ರಕಾಶನ ಸಂಸ್ಥೆೆಯ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಶಂಷಾದ ಬೇಗಂ, ಪರ್ವಿನಾ ಬೇಗಂ,ಶಿಕ್ಷರ ಅರುಣ ಕುಮಾರ, ಚನ್ನವೀರಯ್ಯ ಊರಿನ ಮುಖಂಡರಾದ ಎಂ.ಪಿ.ಬಸವರಾಜಪ್ಪ ಗೌಡ, ಜಯವಂತ ಮಾಡಗಿರಿ, ಸರ್ಕಾರಿ ಪ್ರೌೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ್ ನಾಯಕ, ಶಾಲಾ ಶಿಕ್ಷಕರು ಕಲಾಪೋಷಕರು ಹಾಗೂ ವಿದ್ಯಾಾರ್ಥಿಗಳು ಇದ್ದರು.
ಕನ್ನಡಕ್ಕೆ ಹೊಸಮನಿ ಪ್ರಕಾಶನ ಸಂಸ್ಥೆಯ ಸೇವೆ ಅನನ್ಯ- ವಿರುಪಾಕ್ಷಿ

