ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಮೇ 3: ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿತ್ತು. ಆದರೆ ಬಾರಿ ಜೆಡಿಎಸ್ ಪಕ್ಷವು ಹೆಚ್ಚಿನ ಬಲ ಹೊಂದಿದೆ ಎಂದು ಜೆಡಿಎಸ್ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಮುನೇಗೌಡ ಅವರು ತಿಳಿಸಿದರು.
ಬೂದಿಗೆರೆ ಗ್ರಾಮದ ವಿಎಸ್ಎಸ್ಎನ್ ನಿರ್ದೇಶಕ ಚಾಂದ್ ಪಾಷಾ ಹಾಗೂ ಮುಸ್ಲಿಂ ಸಮುದಾಯದ ಸುಮಾರು 70 ಕ್ಕೂ ಹೆಚ್ಚು ಕುಟುಂಬಗಳು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ಎರಡು ಬಾರಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವು ಅಧಿಕಾರ ನಡೆಸಿದ್ದು, ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ನಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಬೂದಿಗೆರೆ ಗ್ರಾಮದ ಮುಸ್ಲಿಂ ಬಾಂಧವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವುದು ಸಂತಸವನ್ನು ತಂದಿದೆ ಎಂದರು.
ನಿಸರ್ಗ ನಾರಾಯಣಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ತಾಲ್ಲೂಕಿನಾದ್ಯಂತ ಜನತೆ ಬೇರೆ ಬೇರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಈ ಬಾರಿಯೂ ಸಹ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಸೇರಿದ ಚಾಂದ್ಪಾಷ ಮಾತನಾಡಿ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ನಮ್ಮ ಗ್ರಾಮಕ್ಕೆ ಸರಕಾರದಿಂದ ಹೆಚ್ಚು ಅನುದಾನವನ್ನು ತಂದು ಕಾಮಗಾರಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ವೈಖರಿ ಗಮನಿಸಿ ಇಂದು ನಮ್ಮ ಕುಟುಂಬದ ಜೊತೆಗೆ ಇನ್ನು ಅನೇಕ ಕುಟುಂಬಗಳು ಸೇರ್ಪಡೆಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಟುಂಬಗಳನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿ ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇವೆ ಎಂದರು.
ಈ ಸೇರ್ಪಡೆ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜಪ್ಪ, ತಾಲೂಕು ಸೊಸೈಟಿ ನಿರ್ದೇಶಕ ಹಾಗೂ ಬೂದಿಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮುನಿರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶ್ರೀನಾಥ್ ಗೌಡ, ವಿಎಸ್ಎಸ್ಎನ್ ಉಪಾಧ್ಯಕ್ಷ ರಾಮಾಂಜನೇಯ ದಾಸ್,ಬೂದಿಗೆರೆ ಗ್ರಾಮ ಪಂಚಾಯತಿ ಸದಸ್ಯ ನಾರಾಯಣಸ್ವಾಮಿ ಕೋಟಿ,ಪದ್ಮ ಆನಂದ ಕುಮಾರ್,ಎಸ್ಸಿ ಘಟಕದ ತಾಲೂಕು ಉಪಾಧ್ಯಕ್ಷ ರಾಜಕುಮಾರ್, ಎಸ್ಟಿಡಿ ರಮೇಶ್, ವೆಂಕಟೇಶಪ್ಪ, ಮುರಳಿ, ಲೋಕೇಶ್ (ಬಂಗಾರಿ), ಇಕ್ಬಾಲ್ ಪಾಷ್,ನವೀದ್,ನಾರಾಯಣಸ್ವಾಮಿ (ಅಪ್ಪಿ),ವಿಧ್ಯಾರ್ಥಿ ಘಟಕದ ಹೋಬಳಿ ಅಧ್ಯಕ್ಷ ಶ್ರೀಧರ್,ಭರತ್ ಗೌಡ, ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ವನಿತಾ ವಸಂತ್ ಮಾಜಿ ಅಧ್ಯಕ್ಷರುಗಳಾದ ಸಿ ಎಸ್ ರಾಜಣ್ಣ ಮನೋಹರ್ ಕೃಷ್ಣಮೂರ್ತಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಜಯರಾಮೇಗೌಡ ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಇನ್ನೂ ಅನೇಕ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.