ಸುದ್ದಿಮೂಲ ವಾರ್ತೆ
ಆನೇಕಲ್, ಸೆ.27: ಆನೇಕಲ್ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಭೆ ನಡೆಯಿತು.
ಆನೇಕಲ್ ಪಟ್ಟಣದಲ್ಲಿ ಇರುವ ಸ್ವರ್ಣ ಭವನದಲ್ಲಿ ಅಧ್ಯಕ್ಷರಾದ ಎಸ್ ನಾರಾಯಣ್ ರವರ ನೇತೃತ್ವದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಎಸ್. ನಾರಾಯಣ್ ಅವರು, ರೈತ ಉತ್ಪಾದಕ ಕಂಪನಿಗಳಿಂದ ಅನೇಕ ಸಲಕರಣೆಗಳನ್ನು ಕೋಡಲಾಗಿದೆ. ಬೆಳೆಯುವ ಬೆಳೆಗಳಿಗೆ ಹೆಚ್ಚು ಇಳುವರಿ ಬರಲು ಸಾಧ್ಯವಾದಷ್ಟು ಮಾಹಿತಿಯನ್ನ ರೈತರಿಗೆ ಕೊಟ್ಟಿದ್ದೇವೆ. ರೈತರಿಗೆ ರಿಯಾತಿ ದರದಲ್ಲಿ ಕೀಟನಾಶಕಗಳು ರಸಗೊಬ್ಬರಗಳು ಪೂರೈಸಿದ್ದೇವೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಲೆಕ್ಕಪರಿಶೋಧಕರಾದ ಶ್ಯಾಮಲ ಅವರು ಸಂಸ್ಥೆಯ ಆಯವ್ಯಯಗಳನ್ನು ಸಂಘದ ಸದಸ್ಯರಿಗೆ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಹಲ್ದೇನಹಳ್ಳಿ ರೈತ ಮುಖಂಡರಾದ ರಾಜಗೋಪಾಲ್ ಅವರ ಕೆಲವು ಪ್ರಶ್ನೆಗಳಿಗೆ ಸಂಸ್ಥೆಯ ಮುಖ್ಯ ಅಧಿಕಾರಿ ಸಿದ್ದರಾಜು ಉತ್ತರಿಸಿದರು. ಕೃಷಿ ಇಲಾಖೆಯ ಅನೇಕ ಅಧಿಕಾರಿಗಳು ಸಂಘದ ಸದಸ್ಯರಿಗೆ ಹಾಗೂ ರೈತರಿಗೆ ಬೆಳೆಗಳನ್ನು ಬೆಳೆಯಲು ಅಧುನಿಕವಾಗಿ ಸಲಹೆ ಗಳನ್ನ ನೀಡಿದರು. ಈ ವೇಳೆ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಹತ್ತಾರು ರೈತರಿಗೆ ಸನ್ಮಾನ ಮಾಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಆನೇಕಲ್ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಕೆ.ದನಂಜಯ, ಆನೇಕಲ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಕೇಶವಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಂಚನಹಳ್ಳಿ ಸಂಪಂಗ್ಗಿರಾಮಯ್ಯ, ಹರೀಶ್ ರೆಡ್ಡಿ, ಮುರುಗೇಶ್, ಸುರೇಶ್, ಹಾಗೂ ಬೆಂಗಳೂರು ನಗರ ಜಿಲ್ಲೆಯ ಹೆಸರುಘಟ್ಟ ಸಂಸ್ಥೆಯ ತೋಟಗಾರಿಕೆ ಇಲಾಖೆಯ ನಿವೃತ್ತ ವಿಜ್ಞಾನಿಗಳಾದ ಬಿ.ನಾರಾಯಣಸ್ವಾಮಿ, ಆನೇಕಲ್ ತಾಲ್ಲೂಕು ಪಂಚಾಯತಿ ಅಧಿಕಾರಿ ಅನಿಲ್, ಆನೇಕಲ್ ತಾಲ್ಲೂಕಿನ ಕೃಷಿ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.