ಸುದ್ದಿಮೂಲ ವಾರ್ತೆ ಗಂಗಾವತಿ, ನ.18:
ಮಂತ್ರಾಾಲಯ ಶ್ರೀರಾಘವೇಂದ್ರಸ್ವಾಾಮಿಗಳ ಮಠದಿಂದ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆೆಯಲ್ಲಿರುವ ಶ್ರೀಪದ್ಮನಾಭತೀರ್ಥರ ಪೂರ್ವಾರಾಧನೆ ಮಂಗಳವಾರ ನೂರಾರು ಭಕ್ತರ ಮಧ್ಯೆೆ ಶ್ರದ್ಧಾಾ-ಭಕ್ತಿಿಯಿಂದ ನೆರವೇರಿತು.
ಸುಪ್ರಿಿಂಕೋರ್ಟ್ ಈ ಹಿಂದೆ ನೀಡಿದ ಆದೇಶದಂತೆ ಯಥಾಸ್ಥಿಿತಿಯಾಗಿ ಪೂರ್ವರಾಧನೆ ಜರುಗಿತು. ಶ್ರೀಗಳು ಮೂಲರಾಮದೇವರ ಪೂಜೆ, ಶ್ರೀಪದ್ಮನಾಭತೀರ್ಥರ ವೃಂದಾವನಕ್ಕೆೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಪಂಡಿತರಿಂದ ಉಪನ್ಯಾಾಸ ಜರುಗಿತು. ಭಕ್ತರಿಗೆ ಮುದ್ರಧಾರಣ, ಲ ಮಂತ್ರಕ್ಷತೆಯನ್ನು ನೀಡಿ ಆಶೀರ್ವದಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ವೇಳೆ ರಾಜಾ ಎಸ್. ಅಪ್ರಮಯಚಾರ, ಎನ್. ವಾದಿರಾಜಾಚಾರ, ರಮಣರಾವ್, ಪಂಡಿತ್ ಪವನಾಚಾರ ಕುರಡಿ, ಪಂ. ಶ್ಯಾಾಮಾಚಾರ, ಅನಂತ ಪುರಾಣಿಕ, ಪ್ರಕಾಶ ಮಂತ್ರಾಾಲಯ, ಆನೆಗೊಂದಿ ರಾಯರ ಮಠದ ವ್ಯವಸ್ಥಾಾಪಕ ಸುಮಂತ ಕುಲಕರ್ಣಿ, ಶ್ರೀನಿವಾಸರಾವ ಡಣಾಪುರ, ವಿಜಯರಾವ ಡಣಾಪುರ, ವ್ಯವಸ್ಥಾಾಪಕ ಸಾಮವೇಧ ಗುರುರಾಜ ಆಚಾರ, ಡಾ.ಮಧುಸೂದನ ಆಚಾರ, ಸಂಜೀವ ಕುಲಕರ್ಣಿ, ಪ್ರಲ್ಹಾಾದರಾವ ನವಲಿ, ರಾಘವೇಂದ್ರರಾವ ಬೇವಿನಾಳ, ಸುಧೀರ ನವಲಿ ಸೇರಿದಂತೆ 500ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ಆನೆಗುಂದಿ ನವವೃಂದಾವನ ನಗಡ್ಡೆೆಯಲ್ಲಿ ನೂರಾರು ಭಕ್ತರ ಮಧ್ಯೆೆ ಮಂತ್ರಾಾಲಯ ಮಠದಿಂದ ಶ್ರೀ ಪದ್ಮನಾಭತೀರ್ಥರ ಪೂರ್ವಾರಾಧನೆ

