ಸುದ್ದಿಮೂಲ ವಾರ್ತೆ
ಆನೇಕಲ್, ಅ.24: ಮೈಸೂರು ದಸರಾ ನೋಡಲು ಲಕ್ಷಾಂತರ ಜನರು ಭಾಗವಹಿಸುವ ಮಾದರಿಯಲ್ಲಿಯೇ ಬೆಂಗಳೂರು ಕೂಗಳತೆ ದೂರದಲ್ಲಿರುವ ಆನೇಕಲ್ ಚೌಡೇಶ್ವರಿ ದೇವಸ್ಥಾನದಲ್ಲಿಯೂ ಸಹ ಅದ್ಧೂರಿ ದಸರಾ ನಡೆದು ಸುಮಾರು ಒಂದು ಲಕ್ಷ ಜನ ಭಾಗಿಯಾಗಿದ್ದರು.
ಆನೇಕಲ್ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗೆ ಶಾಸಕ ಶಿವಣ್ಣ
ಪುಷ್ಪಾರ್ಚನೆಯನ್ನು ಮಾಡಿದರು.
ಎಲ್ಲಾ ವರ್ಗದ ಜನತೆ ಸೇರಿ ಹಿಂದೂ ಧರ್ಮದ ಪ್ರತೀಕವಾಗಿರುವ ದಸರಾ ಉತ್ಸವವನ್ನ ನಡೆಸಿಕೊಂಡು ಬರಲಾಗುತ್ತಿದೆ. ಈ ದಸರಾ ಉತ್ಸವದಲ್ಲಿ ಡೊಳ್ಳುಕುಣಿತ, ಜವಳಿಕುಣಿತ, ಹುಲಿವೇಷ, ಕತ್ತಿವರಸೆ, ಗಾರುಡಿಗೊಂಬೆ, ಪಟದಕುಣಿತ, ವೀರಗಾಸೆ, ಸೇರಿದಂತೆ ಒಟ್ಟು 33 ಕಲಾತಂಡಗಳು ಭಾಗವಹಿಸಿದ್ದವು. ಇದು ದಸರಾ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಇನ್ನು ತಾಲ್ಲೂಕಿನ ಜನತೆಯ ಸಹಕಾರದೊಂದಿಗೆ ಪ್ರತಿವರ್ಷವೂ ಆನೇಕಲ್ ದಸರಾವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಸಹ ದಸರಾ ನೋಡಲು ಸುಮಾರು ಒಂದು ಲಕ್ಷ ಜನಸಾಕ್ಷಿಯಾಗಿದ್ದರು.