ಸುದ್ದಿಮೂಲ ವಾರ್ತೆ,
ಸಿರವಾರ: ಏ.೧೨ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗಲೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿಹಣ ಖರ್ಚು ವೆಚ್ಚ ಮಾಡುತ್ತಿದೆ.
ಆದರೆ ಅಧಿಕಾರಿಗಳು, ಗುತ್ತೆದಾರರು ಕಾಮಗಾರಿ ಸಂಪೂರ್ಣವಾಗಿ ಮಾಡದೆ ಬಿಲ್ ಪಾವತಿ ಮಾಡಿಕೊಂಡು ನಾಪತ್ತೆಯಾದ ಘಟನೆ ತಾಲೂಕಿನ ಮಲ್ಲಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಾಕ್ಟರ್ ಕ್ಯಾಂಪ್ ನಲ್ಲಿ ಜರುಗಿದೆ.
೨೦೧೬ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ೧೧ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣದ ಕಾಮಗಾರಿ ಅರೆ ಬರೆಮಾಡಿ ಬಿಲ್ ಪಾವತಿಯಾಗಿದೆ ಎಂಬ ಆರೋಪವಾಗಿದೆ.
ಈ ಕಟ್ಟಡಕ್ಕೆ ಬಾಗಿಲು, ಕಿಟಕಿ, ನೆಲಹಾಸು, ಬಣ್ಣ ಸುಣ್ಣ, ಅಡುಗೆ ಮಾಡಲು ಅನುಕೂಲ ಮಾಡುವ ಕಾಮಗಾರಿ ಬಾಕಿ ಇದೆ. ಕಳೆದ ೮ವರ್ಷ ದಿಂದ ಈ ಅಂಗನವಾಡಿ ಕೇಂದ್ರದ ಚಿಕ್ಕ ಮಕ್ಕಳು ಪಾಳುಬಿದ್ದ ಶಾಲೆಯಲ್ಲಿ ಆಶ್ರಯ ಪಡೆದು ಅದರಲ್ಲಿ ಆಟ ಪಾಠ, ಊಟ ನಡೆಯುತ್ತಿದೆ, ಮಳೆಯಿಂದ ಸೂರುತ್ತಿದೆ, ಅಂಗನವಾಡಿ ಕೇಂದ್ರಕ್ಕೆ ಬಂದ ಪೌಷ್ಠಿಕ ಆಹಾರ ಧಾನ್ಯ ಪದಾರ್ಥಗಳನ್ನು ನೀರಿನ ಪಾಲು, ಇದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಉಪವಾಸ, ಇತ್ತ ಸರಕಾರದ ಹಣ ಪೋಲೊ, ಅಪೌಷ್ಟಿಕತೆ ಹೋಗಲಾಡಿಸಲು ಹೇಗೆ ಸಾಧ್ಯ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂದು ಮಾತು ನಿಜವಾಗಿದೆ.
ಇನ್ನಾದರು ತಾ.ಪಂ. ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಗಮನಹರಿಸಿ ಈ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ, ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೂಡಲು ಸ್ಥಳೀಯರ ಒತ್ತಾಯವಾಗಿದೆ.