ಸುದ್ದಿಮೂಲ ವಾರ್ತೆ ಕಲಬುರಗಿ, ೆ.04:
ಅಂಗನವಾಡಿ ಕೇಂದ್ರಕ್ಕೆೆ ಜಮಾ ಆಗಿದ್ದ ಮೊಟ್ಟೆೆಯ ಹಣಕ್ಕೆೆ ಲಂಚ ಬೇಡಿಕೆಯಿಟ್ಟು, 6030 ರೂ ಲಂಚ ಪಡೆಯುವಾಗ ಇಬ್ಬರು ಮಹಿಳಾ ಸಿಬ್ಬಂದಿಗಳು ರೆಡ್ ಹ್ಯಾಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸ್ಟೇಷನ್ ಬಜಾರ ಅಂಗನವಾಡಿ ಕೇಂದ್ರದ ಟೀಚರ್ ಹೀನಾ ಹಾಗೂ ಯು.ಎ್.ಡಬ್ಲೂ.ಸಿ ಸೂಪರ್ವೈಸರ್ ಪಿಂಕುಬಾಯಿ ಗಾಯಕವಾಡ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿಗಳು.
ನಗರದ ಸ್ಟೇಷನ್ ಬಜಾರ ಅಂಗನವಾಡಿ ಕೇಂದ್ರಕ್ಕೆೆ ಮೂರು ತಿಂಗಳ ಮೊಟ್ಟೆೆಯ ಹಣ 14490 ರೂಪಾಯಿಗಳು ಜಮಾ ಆಗಿರುವುದರಲ್ಲಿ ಒಂದು ತಿಂಗಳ ಮೊಟ್ಟೆೆಯ ಹಣ 4830 ರೂ ಮತ್ತು ತಿಂಗಳಿಗೆ 600 ರೂಪಾಯಿರಂತೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳ 1200 ರೂ ಸೇರಿ ಒಟ್ಟು 6030 ರೂ.ಗಳ ಲಂಚದ ಹಣಕ್ಕೆೆ ಬೆಡಿಕೆ ಇಟ್ಟು ಹಣ ಕೊಡುವಂತೆ ಒತ್ತಾಾಯಿಸುತ್ತಿಿದರು ಎಂದು ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ ಬಲಭೀಮ ರಾಠೋಡ ದೂರು ನೀಡಿದ್ದರು.
ದೂರಿನ ಬೆನ್ನಲ್ಲೆೆ ಲೋಕಾಯುಕ್ತ ಎಸ್ಪಿ ಸಿದ್ಧರಾಜು. ಸಿ. ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ ಬಡದೆಸಾರ ಅವರು ದಾಳಿ ನಡೆಸಿ, 6030 ರೂ ಹಣ ಪಡೆಯುವಾಗ ಹೀನಾ ಹಾಗೂ ಪಿಂಕುಬಾಯಿ ಗಾಯಕವಾಡ ಅವರನ್ನು ವಶಕ್ಕೆೆ ಪಡೆದಿದ್ದಾರೆ. ತನಿಖೆಯ ನಂತರ ಅವರನ್ನು ನ್ಯಾಾಯಾಲಯ ಬಂಧನಕ್ಕೆೆ ಒಪ್ಪಿಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

