ಸುದ್ದಿಮೂಲ ವಾರ್ತೆ ಸಿಂಧನೂರು, ಜ.17:
ರಾಯಚೂರಿನಲ್ಲಿ ನಡೆಯಲಿರುವ ಜಿಲ್ಲಾಾ ಉತ್ಸವದಲ್ಲಿ ಪಂಚ ಗ್ಯಾಾರಂಟಿ ಯೋಜನೆಗಳ ಮೇಳ ನಡೆಯಲಿದ್ದು, ಸಿಂಧನೂರು ತಾಲೂಕಿನಿಂದ ಸುಮಾರು 1 ಸಾವಿರ ಜನ ಭಾಗವಹಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪಂಚ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ತಾಲೂಕು ಅಧ್ಯಕ್ಷ ಅನಿಲಕುಮಾರ ವೈ ಸೂಚಿಸಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಗ್ಯಾಾರಂಟಿ ಯೋಜನೆಗಳ ರಾಜ್ಯ ಸರಕಾರದ ಅತ್ಯಂತ ಮಹತ್ವಾಾಕಾಂಕ್ಷಿ ಯೋಜನೆಗಳಾಗಿವೆ. ಈ ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪಬೇಕು. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ೆ-6, 7 ಹಾಗೂ 8 ರಂದು ರಾಯಚೂರು ಜಿಲ್ಲಾಾ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಗ್ಯಾಾರಂಟಿ ಯೋಜನೆಗಳ ಮೇಳ ನಡೆಯಲಿದೆ. ಗ್ಯಾಾರಂಟಿ ಯೋಜನೆಗಳನ್ನು ಬಳಸಿಕೊಂಡು ಸಾಧನೆ ಮಾಡಿದ 25 ಜನ ವಿಶೇಷ ಲಾನುಭವಿಗಳಿಗೆ ಸನ್ಮಾಾನ ಮಾಡಲಾಗುತ್ತಿಿದೆ. ಹೀಗಾಗಿ ಯೋಜನೆಯಡಿ ವಿಶೇಷ ಸಾಧಕರನ್ನು ಗುರುತಿಸಿ ಪಟ್ಟಿಿ ಮಾಡುವಂತೆ ಅನುಷ್ಠಾಾನಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಕ್ತಿಿ, ಗೃಹಜ್ಯೋೋತಿ, ಅನ್ನಭಾಗ್ಯ, ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಗತಿಯ ಮಾಹಿತಿಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಭೆ ಗಮನಕ್ಕೆೆ ತಂದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಪಂಚ ಗ್ಯಾಾರಂಟಿ ಯೋಜನಾ ಸಮಿತಿ ಸದಸ್ಯರು, ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.
ರಾಯಚೂರು ಜಿಲ್ಲಾ ಉತ್ಸವದಲ್ಲಿ ಗ್ಯಾರಂಟಿ ಯೋಜನೆಯ ಮೇಳ ಸಾವಿರ ಲಾನುಭವಿಗಳು ಭಾಗಿಯಾಗಬೇಕು – ಅನಿಲಕುಮಾರ

