ಸುದ್ದಿಮೂಲ ವಾರ್ತೆ ಅರಕೇರಾ, ಡಿ.21:
ತಾಲ್ಲೂಕಿ3ನ ಹೆಗ್ಗಡದಿನ್ನಿಿ ಗ್ರಾಾಮದಲ್ಲಿ ಆಂಜನೇಯ ದೇವರ ರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.ಜಾತ್ರಾಾಮಹೋತ್ಸವದ ಅಂಗವಾಗಿ ದೇವಸ್ಥಾಾನದಲ್ಲಿ ಬೆಳಿಗ್ಗೆೆ ವಿಶೇಷ ಪೂಜಾ ಪುರಸ್ಕಾಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತಮ್ಮ ಇಷ್ಟಾಾರ್ಥ ಸಿದ್ಧಿಿಗೆ, ಭಕ್ತರು ದೇವರಿಗೆ ಹರಕೆ ತೀರಿಸಿದರು. ಹೂ, ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ ಭಕ್ತಿಿ ಸಮರ್ಪಿಸಿದರು. ಸಂಜೆ 6.30 ಕ್ಕೆೆ ಸಕಲ ವಾದ್ಯಗಳು ಮೊಳಗಿದವು, ಯುವಕರು ರಂಗು ರಂಗಿನ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಾಮಸ್ಥರು ಸೇರಿದಂತೆ ಸುತ್ತಲಿನ ಸಹಸ್ರಾಾರು ಸಂಖ್ಯೆೆಯ ಭಕ್ತರ ಸಮ್ಮುಖದಲ್ಲಿ ಉತ್ಸವದ ಜೊತೆಗೆ ರಥೋತ್ಸವ ಸಂಭ್ರಮದಿಂದ ಜರುಗಿತು.
ವಿಜೃಂಭಣೆಯಿಂದ ಜರುಗಿದ ಆಂಜನೇಯ ರಥೋತ್ಸವ

