ಸುದ್ದಿಮೂಲ ವಾರ್ತೆ ಕವಿತಾಳ, ೆ.07:
ಸಮೀಪದ ಆನಂದಗಲ್ ಗ್ರಾಾಮದಲ್ಲಿ ಆಂಜನೇಯ ಜಾತ್ರಾಾ ಮಹೋತ್ಸವ ನಿಮಿತ್ತ ಶನಿವಾರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾಾನದಲ್ಲಿ ಆಂಜನೇಯ್ಯ ದೇವರ ಮೂರ್ತಿಗೆ ಮಹಾ ರುದ್ರಾಾಭಿಷೇಕ, ಜಲಭಿಷೇಕ, ಸಹಸ್ರ ಬಿಲ್ವಾಾರ್ಚನೆ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು.
ಗ್ರಾಾಮದ ಮರಿಬಸವಲಿಂಗ ತಾತನವರ ದೇವಸ್ಥಾಾನದಿಂದ ಆಂಜನೇಯ್ಯ ದೇವಸ್ಥಾಾನದವರಿಗೆ ಕುಂಭ, ಕಳಸ, ಬಾಜಾ ಭಜಂತ್ರಿಿ, ಡೊಳ್ಳು ವಾದ್ಯಗಳೊಂದಿಗೆ ಆಂಜನೇಯ್ಯ ದೇವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರಗಿತು.
ಆದಯ್ಯ ಸ್ವಾಾಮಿ ಹಿರೇಮಠ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಲ್ಲಣ್ಣ ತಾತ ಮುಂಡರಗಿ, ಚನ್ನಬಸಪ್ಪ, ಸಿದ್ದಯ್ಯ ಸ್ವಾಾಮಿ, ಶರಣಯ್ಯ ಸ್ವಾಾಮಿ, ಷಡಕ್ಷರಯ್ಯ ಸ್ವಾಾಮಿ, ಮಂಜುನಾಥ, ಶರಣಪ್ಪ, ಅಯ್ಯನಗೌಡ, ಹುಚ್ಚರಡ್ಡಿಿ, ವೀರೇಶ ಹೊನ್ನಟಗಿ, ಗ್ರಾಾಮ ಪಂಚಾಯತಿ ಸದಸ್ಯರಾದ ಮಹಮ್ಮದ್ ರಫಿ, ವಿಶ್ವನಾಥ, ವೆಂಕಟೇಶ, ಶರಣಪ್ಪ ನಾಗನಗೌಡ, ವಿರೇಶ ಹೊನ್ನಳ್ಳಿಿ, ಹುಲುಗಪ್ಪ, ಮೌನೇಶ ಬೂದಿಹಾಳ ಮತ್ತು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ಆಂಜನೇಯ ಭಾವಚಿತ್ರ ಮೆರವಣಿಗೆ

