ಢಾಕಾ:
ಬಾಂಗ್ಲಾಾದೇಶದಲ್ಲಿ ದೀಪು ಚಂದ್ರ ದಾಸ್ನನ್ನು ಗುಂಪು ಥಳಿಸಿ ಕೊಂದು ಅವರ ದೇಹವನ್ನು ಸುಟ್ಟುಹಾಕಿದ ಕೆಲವು ದಿನಗಳ ನಂತರ, ಮತ್ತೊೊಬ್ಬ ಹಿಂದೂ ವ್ಯಕ್ತಿಿಯನ್ನು ಥಳಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ವರದಿಗಳ ಪ್ರಕಾರ, 29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಾಟ್, ರಾಜಧಾನಿ ಢಾಕಾದಿಂದ ಸುಮಾರು ಮೂರೂವರೆ ಗಂಟೆಗಳ ದೂರದಲ್ಲಿರುವ ರಾಜ್ಬರಿಯ ಪಂಗ್ಶಾಾ ಉಪ ಜಿಲ್ಲೆಯಲ್ಲಿ ರಾತ್ರಿಿ 11 ಗಂಟೆ ಸುಮಾರಿಗೆ ಹತ್ಯೆೆಯಾಗಿದ್ದಾರೆ.
ಬಾಂಗ್ಲಾಾದೇಶದ ಮಾಧ್ಯಮ ಸಂಸ್ಥೆೆ ’ದಿ ಡೈಲಿ ರ್ಸ್ಟಾಾ’ಗೆ ಸ್ಥಳೀಯ ನಿವಾಸಿಗಳು ಸಾಮ್ರಾಾಟ್ ’ಸಾಮ್ರಾಾಟ್ ಬಹಿನಿ’ ಎಂಬ ಕ್ರಿಿಮಿನಲ್ ಗ್ಯಾಾಂಗ್ನ ನಾಯಕನಾಗಿದ್ದು, ಈ ಗ್ಯಾಾಂಗ್ ಸುಲಿಗೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಶೇಖ್ ಹಸೀನಾ ಪದಚ್ಯುತಗೊಂಡ ನಂತರ ಸಾಮ್ರಾಾಟ್ ದೇಶ ಬಿಟ್ಟು ಓಡಿಹೋಗಿದ್ದ ಮತ್ತು ಇತ್ತೀಚೆಗೆ ಕಲಿಮೊಹೋರ್ ಒಕ್ಕೂಟದ ತನ್ನ ಗ್ರಾಾಮವಾದ ಹೊಸೆಂದಂಗಾಗೆ ಮರಳಿದ್ದ.

